ಸಿಲಿಕಾನ್‌ ಸಿಟಿಯಲ್ಲಿ ನೀರಿಗೆ ಹಾಹಾಕಾರ : ಶವ ಸಂಸ್ಕಾರಕ್ಕೂ ದೊರಕದ ನೀರು

ಸಿಲಿಕಾನ್ ಸಿಟಿಗೆ ಎಂತಾ ಬರ ಬಂದು ವಕ್ಕರಿಸಿದೆ ಎಂದರೆ, ಒಂದೆಡೆ ಸಾರ್ವಜನಿಕರು ಹನಿಹನಿ ನೀರಿಗೂ ದೈನಂದಿನ ಜೀವನಕ್ಕೆ ಹೋರಾಡುವಂತಹ ಸ್ಥಿತಿ ಎದುರಾದರೆ, ಮತ್ತೊಂದೆಡೆ ಅಂತ್ಯಸಂಸ್ಕಾರಕ್ಕೂ ಸ್ಮಶಾನಗಳಲ್ಲಿ ನೀರು ಸಿಗುತ್ತಿಲ್ಲ. ಈ ಭೀಕರ ಬರದ ಪರಿಣಾಮ ಐಪಿಎಲ್ ಟೂರ್ನಿಗೂ ತಟ್ಟುವ ಆತಂಕ ಇದೀಗ ಎಲ್ಲೆಡೆ ಪಸರಿಸಿದೆ ಅಂದ್ರೆ ನಂಬ್ತಿರಾ?

ಹೌದು! ಮಾರ್ಚ್ 29ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುವ ಐಪಿಎಲ್ ಮ್ಯಾಚ್ ಬೇರೆ ಕಡೆಗೆ ಶಿಫ್ಟ್ ಮಾಡಿ ಎಂಬ ಆಗ್ರಹ ಇದೀಗ ಕೇಳಿಬರುತ್ತಿದೆ. ತಮ್ಮ ಊರುಗಳಿಗೆ ತೆರಳಲು ಟೆಕ್ಕಿಗಳು ವರ್ಕ್ ಫ್ರಂ ಹೋಂಗೆ ಬೇಡಿಕೆ ಇಟ್ಟಿದ್ದಾರೆ. ಮತ್ತೊಂದೆಡೆ, ಮೃತಪಟ್ಟವರನ್ನು ಸ್ಮಶಾನದಲ್ಲಿ ತಂದು ಅಂತಿಮ ಪೂಜಾ ವಿಧಾನಗಳನ್ನು ಮಾಡುವ ವೇಳೆ ಮಣ್ಣಿನ ಮಡಿಕೆಯಲ್ಲಿ ನೀರನ್ನು ತುಂಬಿ ಕುಡಿಕೆ ಹೊಡೆಯಲು ನೀರಿಲ್ಲದ ಸಂದರ್ಭ ಬಂದೆರಗಿದೆ.

ಕ್ರಿಮಿಟೋರಿಯಂಗೂ ಒಕ್ಕರಿಸಿದ ಜಲಕಂಟಕ:

ಬೆಂಗಳೂರಿನ ಕ್ರಿಮಿಟೋರಿಯಂಗಳಲ್ಲಿ ಜಲಕಂಟಕ ಎದುರಾಗಿದ್ದು, ಮೃತಪಟ್ಟವರನ್ನು ಸ್ಮಶಾನದಲ್ಲಿ ತಂದು ಅಂತಿಮ ಪೂಜಾ ವಿಧಾನಗಳನ್ನು ಮಾಡುವ ವೇಳೆ ಮಣ್ಣಿನ ಮಡಿಕೆಯಲ್ಲಿ ನೀರನ್ನು ತುಂಬಿ ಕುಡಿಕೆ ಹೊಡೆಯಲು ನೀರಿಲ್ಲ. ಸ್ಮಶಾನದಲ್ಲಿ ಅಂತಿಮ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲು ಸಂಬಂಧಿಕರು ಪರದಾಡುತ್ತಿದ್ದಾರೆ.

Water problem in Silicon City: Water is not available even for cremation

ಇನ್ನೂ ಕೆಲ ಸಂಪ್ರದಾಯಗಳಲ್ಲಿ ಶವವನ್ನು ಮನೆಯಿಂದ ಸ್ಮಶಾನಕ್ಕೆ ತಂದು ಅಲ್ಲಿ ಸ್ನಾನ ಮಾಡಿಸಿ ಪೂಜೆ ಮಾಡಲಾಗುತ್ತದೆ. ನಂತರ ಅಂತಿಮ ದರ್ಶನಕ್ಕೆ ಬಂದವರು ಕೈ ಕಾಲು ತೊಳೆದುಕೊಂಡು ಹೋಗುವುದು ಪದ್ದತಿ. ಆದರೆ ಸ್ಮಶಾನಗಳಲ್ಲಿ ನೀರು ಸಿಗದ ಕಾರಣ ಶವಕ್ಕೆ ಸ್ನಾನ ಮಾಡಿಸಲು ಆಗುತ್ತಿಲ್ಲ. ಯಾವುದೇ ಪೂಜಾ ವಿಧಿವಿಧಾನಗಳನ್ನು ಮಾಡಲು ಆಗ್ತಿಲ್ಲ. ಇದರಿಂದ ಮೃತರ ಕುಟುಂಬದವರಿಗೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ. ಸರಿಯಾಗಿ ಶವ ಸಂಸ್ಕಾರ ಮಾಡಲಾಗದೆ ಕಂಗಾಲಾಗಿದ್ದಾರೆ.

ರಾಜಾಜಿನಗರದ ಹರಿಶ್ಚಂದ್ರ ಘಾಟ್, ಸುಮ್ಮನಹಳ್ಳಿ ಸ್ಮಶಾನ, ವಿಲ್ಸನ್ ಗಾರ್ಡನ್ ಹಾಗೂ ಚಾಮರಾಜಪೇಟೆಯ ಟಿ.ಆರ್ ಮಿಲ್ ಸ್ಮಶಾನದಲ್ಲಿ ನೀರಿಗೆ ಅಭಾವ ಎದುರಾಗಿದೆ.

ಮತ್ತೆ ವರ್ಕ್ ಫ್ರಂ ಹೋಂಗೆ ಟೆಕ್ಕಿಗಳ ಬೇಡಿಕೆ

ಅಪಾರ್ಟ್ಮೆಂಟ್’ನಲ್ಲಿರುವ ಟೆಕ್ಕಿಗಳಿಗೂ ನೀರಿನ ಎಫೆಕ್ಟ್ ತಟ್ಟಿದ್ದು, ಬೇಸಿಗೆ ಮುಗಿಯೋವರೆಗೂ ವರ್ಕ್ ಫ್ರಂ ಹೋಂ ಕೊಡಿ ಎಂಬುದಾಗಿ ಬೇಡಿಕೆ ಇಟ್ಟಿದ್ದಾರೆ. ಇದೀಗ ಬಹುತೇಕ ಐಟಿ ಉದ್ಯೋಗಿಗಳ ಮಕ್ಕಳಿಗೆ ಪರೀಕ್ಷೆ ಪ್ರಾರಂಭವಾಗಿದ್ದು, ಎಕ್ಸಾಂ ಮುಗಿದ ಬಳಿಕ ಅಂದರೆ ಏಪ್ರಿಲ್ ನಿಂದ ಊರಿನಿಂದಲೇ ಕೆಲಸ ನಿರ್ವಹಿಸಲು ನಿರ್ಧರಿಸಿದ್ದಾರಂತೆ. ಕೆಲ ಕಂಪನಿಗಳು ವರ್ಕ್ ಫ್ರಂ ಹೋಮ್ ಸೌಲಭ್ಯ ನೀಡುವ ಬಗ್ಗೆ ಬೋರ್ಡ್ ಮೀಟಿಂಗ್‌ನಲ್ಲಿ ಚರ್ಚೆ ಮಾಡಿ ತಿಳಿಸೋದಾಗಿ ಟೆಕ್ಕಿಗಳಿಗೆ ತಿಳಿಸಿದೆ.

You might also like
Leave A Reply

Your email address will not be published.