ಗೋವಾದಿಂದ ಲಕ್ಷದ್ವೀಪಕ್ಕೆ ಟೇಕ್ ಆಫ್ ಆದ ‘Fly 91’ ಕಂಪನಿಯ ಮೊದಲ ವಿಮಾನ!

ಭಾರತೀಯ ವಿಮಾನಯಾನ ಕ್ಷೇತ್ರದಲ್ಲಿ ಇತ್ತೀಚಿಗೆ ಪ್ರವೇಶ ಪಡೆದ ಫ್ಲೈ 91 ಎಂಬ ವಿಮಾನಯಾನ ಸಂಸ್ಥೆಯು ತನ್ನ ಮೊದಲ ಹಾರಾಟವನ್ನು ಗೋವಾದಿಂದ ಲಕ್ಷದ್ವೀಪಕ್ಕೆ ಕೈಗೊಂಡಿದೆ. ಕೇಂದ್ರ ವಿಮಾನಯಾನ ಸಚಿವರಾದ ಜ್ಯೋತಿರಾಧಿತ್ಯ ಸಿಂಧಿಯಾ ಅವರು ನವದೆಹಲಿಯಲ್ಲಿ ವರ್ಚುವಲ್ ಆಗಿ ಫ್ಲಾಗ್ ಆಫ್ ಮಾಡುವ ಮೂಲಕ ಸೇವೆಗಳು ಆರಂಭಗೊಂಡವು.

ಇನ್ನು ಬೆಂಗಳೂರು ಮತ್ತು ಹೈದರಾಬಾದ್ ನಗರಗಳಿಗೆ ಮಾರ್ಚ್ 18 ರಿಂದ ತಮ್ಮ ವಾಣಿಜ್ಯ ಸೇವೆ ಆರಂಭಿಸುವುದಾಗಿ‌ ಕಂಪನಿಯು ಘೋಷಣೆ ಮಾಡಿದೆ.

FLY 91 Goa To Lakshadweep Flight

ಹಸಿರು ನಿಶಾನೆ ತೋರಿದ ಬಳಿಕ ಮಾತನಾಡಿದ ಸಿಂಧಿಯಾ ಅವರು, ಕಳೆದೆರಡು ದಶಕದಲ್ಲಿ ಹಲವಾರು ಅಂತರಾಷ್ಟ್ರೀಯ ಅಥವಾ ದೇಶೀಯ ವಿಮಾನಯಾನ ಸಂಸ್ಥೆಗಳು ಮುಚ್ಚಿರುವ ಬಗ್ಗೆ ನಾವು ಕೇಳಿದ್ದೇವೆ ಹಾಗೂ ನೋಡಿದ್ದೇವೆ. ಆದರೆ ಈಗ ಒಂದೇ ದೇಶದಲ್ಲಿ ಆರು ವಿಮಾನಯಾನ ಸಂಸ್ಥೆಗಳು UDAN ಯೋಜನೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಉಡಾನ್ ಯೋಜನೆಯ ಅಡಿಯಲ್ಲಿ ಅವರಿಗೆ 18 ಮಾರ್ಗಗಳನ್ನು ನೀಡಿದ್ದೇವೆ ಎಂದು ಹೇಳುವ ಮೂಲಕ ಫ್ಲೈ 91 ತಂಡಕ್ಕೆ ಶುಭ ಹಾರೈಸಿದರು.

ಇನ್ನು ಈ ಪ್ರಾದೇಶಿಕ ಏರ್‌ಲೈನ್ ನ ಅಧ್ಯಕ್ಷ ಹರ್ಷ ರಾಘವನ್ ಮಾತನಾಡಿ, ಇದು ಕೇವಲ ಆರಂಭವಷ್ಟೇ ನಮ್ಮ ಗುರಿ ಟೈರ್ 2 ಮತ್ತು ಟೈರ್ 3 ನಗರಗಳಾಗಿದ್ದು ಮುಂಬರುವ ದಿನಗಳಲ್ಲಿ ವಿಸ್ತರಿಸುವ ಯೋಜನೆಯಿದೆ. ಅಷ್ಟೇ ಅಲ್ಲದೇ ವಿಮಾನಯಾನ ಕ್ಷೇತ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನೀಡುತ್ತಿರುವ ಪ್ರೋತ್ಸಾಹದ ಕುರಿತು ಶ್ಲಾಘಿಸಿದರು.

You might also like
Leave A Reply

Your email address will not be published.