ಬಲಿಷ್ಟ ರಾಷ್ಟ್ರಗಳಿಗೆ ಭಯ ಹುಟ್ಟಿಸಿದ ಭಾರತದ ದಿವ್ಯಾಸ್ತ್ರ – ಹೆದರಿದ ಚೀನಾ ಮಾಡಿದ್ದೇನು?

ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಅತ್ಯಂತ ದಮನಕಾರಿ ಅಗ್ನಿ-5 ಎಂ.ಐ.ಆರ್.ವಿ ದಿವ್ಯಾಸ್ತ್ರ ಮಿಸೈಲ್ ಅನ್ನು ಘೋಷಿಸಿದ ಬೆನ್ನಲ್ಲೇ, ಜಗತ್ತಿನ ಬಹುತೇಕ ಬಲಿಷ್ಟ ರಾಷ್ಟ್ರಗಳಿಗೆಲ್ಲ ಗುಂಡಿಗೆಯಲ್ಲೇ ನಡುಕ ಶುರುವಾಗಿದೆ. ತಮ್ಮಲ್ಲೇ ಅತ್ಯಂತ ವಿನಾಶಕಾರಿ ಅಸ್ತ್ರಗಳಿವೆ ಎಂದು ಜಂಭ ಕೊಚ್ಚಿಕೊಳ್ಳುತ್ತಿದ್ದ ರಾಷ್ಟ್ರಗಳಿಗೆ ಭಾರತ ಘೋಷಿಸಿದ ಅಗ್ನಿ-5 ಅಣ್ವಸ್ತ್ರ ಶಕ್ತಿಯ ಬಗ್ಗೆ ಈಗಾಗಲೇ ಭಯ ಹುಟ್ಟಿದೆ. ಸರಿಸುಮಾರು 5,000 ಕಿ.ಮೀ ಗೂ ಅಧಿಕ ದೂರದ ವೈರಿನೆಲೆಯನ್ನು ಕ್ಷಣಮಾತ್ರದಲ್ಲಿ ಪುಡಿಗಟ್ಟಬಲ್ಲ ಈ ಬಲಿಷ್ಠ ಅಸ್ತ್ರ ಘೋಷಣೆಯಾಗುತ್ತಿದ್ದಂತೆಯೇ ಭಾರತದ ವೈರಿದೇಶವೊಂದು ಇನ್ನಿಲ್ಲವೆಂಬಂತೆ ಭಾರತದ ಮೇಲೆ ಕಣ್ಣಿಡಲು ಮುನ್ನಡೆದಿದೆ. ಯಾವುದು ಆ ದೇಶ? ಇಲ್ಲಿದೆ ನೋಡಿ ವಿವರ.

ಒಂದೊಮ್ಮೆ ಭಾರತ ಅಗ್ನಿ-5 ಮಿಸೈಲ್ ಅನ್ನು ಉಡಾಯಿಸಿದಲ್ಲಿ, ಸರಿಸುಮಾರು ಚೀನಾದ ಬೀಜಿಂಗ್ ನಗರವನ್ನೂ ಅದು ಪುಡಿಗಟ್ಟಬಲ್ಲದು.‌ ಅಂತಹ ದಮನಕಾರಿ ಸಾಮರ್ಥ್ಯವುಳ್ಳ ಅಗ್ನಿ-5 ಬಗ್ಗೆ ಹೆದರಿದ ಭಾರತದ ವೈರಿ ನೆರೆದೇಶ ಚೀನಾ, ಬಂಗಾಳ ಕೊಲ್ಲಿಯ ಪ್ರದೇಶದಲ್ಲಿ ತನ್ನ ಬೇಹುಗಾರಿಕಾ ನೌಕೆಯೊಂದನ್ನು ಲಂಗರು ಹಾಕಿದೆ. ವಿಶಾಖಪಟ್ಟಣಂ ನಿಂದ ಸರಿಸುಮಾರು 480 ಕಿ.ಮೀ‌‌ ದೂರದ ಸಮುದ್ರ ಮಾರ್ಗದಲ್ಲಿ

ಈಗಾಗಲೇ ಮಾಲ್ಡೀವ್ಸ್ ನಲ್ಲಿ ಲಂಗರು ಹಾಕಿರುವ ಚೀನಾದ ಕ್ಸಿಯಾಂಗ್ ಯಾಂಗ್ ಹಾಂಗ್ ನೌಕೆ, ಸಂಶೋಧನಾ ಉದ್ದೇಶವಾಗಿ ಲಂಗರು ಹಾಕಿರುವುದಾಗಿ ಹೇಳಿಕೊಂಡಿದೆ. ಆದರೆ, ಚೀನಾದ ಉದ್ದೇಶಗಳ ಕುರಿತು ಕೇವಲ ಭಾರತವಲ್ಲದೇ, ಜಗತ್ತಿನ ಬಹುತೇಕ ರಾಷ್ಟ್ರಗಳು ನಂಬಿಕೆಯನ್ನೇ ಹೊಂದಿಲ್ಲವಾದರೂ ಕೂಡ, ನೌಕಾನೆಲೆ ಒಪ್ಪಂದಗಳು ಹಾಗೂ ಸಾಮಾನ್ಯ ಜಲಮಾರ್ಗಗಳಲ್ಲಿ ಲಂಗರು ಹಾಕುವುದನ್ನು ನಿರ್ಬಂಧಿಸಲು ಯಾವುದೇ ಹಕ್ಕಿರುವುದಿಲ್ಲ.

India's Agni-5 that scared the powerful countries - what did China do when it was scared?

ಭಾರತ ಅಗ್ನಿ – 5 ಮಿಸೈಲ್ ನ ಪರೀಕ್ಷಾ ಉಡಾವಣೆಗೆ ಎನ್.ಓ.ಟಿ.ಎ.ಎಂ (NOTAM – Notice To Air Mission) ಅನ್ನು ಮಾರ್ಚ್ 07 ರಂದು ಘೋಷಿಸಿರುವಂತೆಯೇ, ಕಿವಿ ನೆಟ್ಟಗಾಗಿಸಿಕೊಂಡ ಚೀನಾ, ಭಾರತದ ಶಕ್ತಿಪ್ರದರ್ಶನವನ್ನು ತಿಳಿಯಲು ತನ್ನ ಬೇಹುಗಾರಿಕಾ ತಂತ್ರವನ್ನು ಬಳಸಿದೆ. ಕೆಲವು ಮೂಲಗಳ ಪ್ರಕಾರ ಭಾರತದ ಅಗ್ನಿ-5 ಮಿಸೈಲ್ ಪರೀಕ್ಷೆಯನ್ನು ಚೀನಾ ಸಂಪೂರ್ಣವಾಗಿ ಗಮನಿಸಿದ್ದು, ಈ ಮಿಸೈಲ್ ನ ಸಾಮರ್ಥ್ಯದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದೆ ಎನ್ನಲಾಗಿದೆ. ಚೀನಾದ ಮಾಧ್ಯಮಗಳೇ ಹೇಳಿಕೊಂಡಿರುವಂತೆ, ಅಗ್ನಿ -5 ಕ್ಷಿಪಣಿಯ ಸಾಮರ್ಥ್ಯ ಕೇವಲ 5,000 ಕಿ.ಮೀ ಗಷ್ಟೇ ಸೀಮಿತವಾಗಿಲ್ಲ. ಬದಲಾಗಿ, ಸರಿಸುಮಾರು 8,000 ಕಿ.ಮೀ ದೂರಕ್ಕೂ ಚಿಮ್ಮಿ, ವೈರಿನೆಲೆಯನ್ನು ಧ್ವಂಸಗೊಳಿಸುವ ಸಾಮರ್ಥ್ಯ ಈ ಮಿಸೈಲ್ ಗೆ ಇದೆ ಎನ್ನಲಾಗಿದೆ.

ಈ ಸಾಮರ್ಥ್ಯದ ಎಂ.ಐ.ಆರ್.ವಿ ಮಿಸೈಲ್ ಅನ್ನು ಹೊಂದಿರುವ ಜಗತ್ತಿನ ಐದು ಬಲಿಷ್ಟ ರಾಷ್ಟ್ರಗಳಾದ ಚೀನಾ, ರಷ್ಯಾ, ಅಮೆರಿಕಾ, ಫ್ರಾನ್ಸ್ ಮತ್ತು ಯು‌.ಕೆ ಪಟ್ಟಿಗೆ ಭಾರತ ಸೇರ್ಪಡೆಗೊಂಡಿದೆ. ಪ್ರತಿಬಾರಿಯೂ ಜಗತ್ತೇ ಮೂಗಿನ ಮೇಲೆ ಬೆರಳಿರಿಸುವಂತೆ ಹೊಸ ಆವಿಷ್ಕಾರ ನಡೆಸುವ ಭಾರತದ ಡಿ.ಆರ್.ಡಿ.ಓ ಸಂಸ್ಥೆಯೇ ಈ ಅಗ್ನಿ-5 ಮಿಸೈಲ್ ಅನ್ನು ನಿರ್ಮಿಸಿದ್ದು , ಭಾರತದ ಇತಿಹಾಸದಲ್ಲೇ ಹೊಸ ಮೈಲಿಗಲ್ಲಾಗಿದೆ.

ಇನ್ನು ಬಂಗಾಳಕೊಲ್ಲಿಯಲ್ಲಿ ಬೀಡುಬಿಟ್ಟಿರುವ ಚೀನಾದ ಕ್ಸಿಯಾಂಗ್ ಯಾಂಗ್ ಹಾಂಗ್ 01 ಎನ್ನುವ ಹೆಸರಿನ ಈ ನೌಕೆ, ಸರಿಸುಮಾರು 4,425 ಟನ್‌ ತೂಕ ಹೊಂದಿದೆ ಎನ್ನಲಾಗಿದ್ದು, ಚೀನಾ ಈಗಾಗಲೇ ವಿಶ್ವದ ಅತಿಹೆಚ್ಚು ರಿಸರ್ಚ್ ವೆಸೆಲ್ ಹೊಂದಿರುವ ಪಟ್ಟಿಗೆ ಈ ನೌಕೆಯನ್ನೂ ಸೇರಿಸಿಕೊಂಡಿದೆ.

India's Agni-5 that scared the powerful countries - what did China do when it was scared?

ಈಗಾಗಲೇ ಮಾಲ್ಡೀವ್ಸ್‌ನಲ್ಲಿ ಬೀಡುಬಿಟ್ಟಿರುವ ಚೀನಾದ ನೌಕೆಯು ಭಾರತದ ನೌಕಾಪಡೆಗೆ ತಲೆನೋವಾಗಿ ಪರಿಣಮಿಸಿದ್ದು, ಚೀನಾದ ಪರ ನಿಂತಿರುವ‌ ಮಾಲ್ಡೀವ್ಸ್, ಭಾರತದ ವಿರುದ್ಧ ಏನಾದರೂ ಮಸಲತ್ತು ನಡೆಸುತ್ತಿದೆಯೇ ಎನ್ನುವ ಸಂದೇಹ ಮೂಡಿದೆ.
ಪ್ರತಿಬಾರಿಯೂ ಜಾಗತಿಕ ಸುರಕ್ಷತಾ ಒಪ್ಪಂದಗಳಿಗೆ ಅಡ್ಡಗಾಲಾಗಿರುವ ಚೀನಾ, ಭಾರತವನ್ನು ಬೇಹುಗಾರಿಕೆಯಿಂದಲೇ ಭೇದಿಸಲು ಯತ್ನಿಸುತ್ತಿರುವುದು ವಿಪರ್ಯಾಸ.

ಏನೇ ಇರಲಿ, ಭಾರತದ ಈ ಮಹತ್ವದ ಬೆಳವಣಿಗೆಗಳು ಜಗತ್ತಿನ‌ ಬಲಿಷ್ಟ ರಾಷ್ಟ್ರಗಳಿಗೂ ಗುಂಡಿಗೆಯಲ್ಲೇ ಭಯ ಹುಟ್ಟಿಸಿರುವುದಂತೂ ಸತ್ಯ.

You might also like
Leave A Reply

Your email address will not be published.