ಬಿಟ್‌ ಕಾಯಿನ್‌ ಹೂಡಿಕೆದಾರರಿಗೆ ಶುಭ ಸುದ್ದಿ : 72 ಸಾವಿರ ಡಾಲರ್‌ ಮುಟ್ಟಿದ ಕ್ರಿಪ್ಟೋ ಕರೆನ್ಸಿ ಮೌಲ್ಯ

ವಿಶ್ವದ ಮೊದಲ ಹಾಗೂ ಪ್ರಮುಖ ಕ್ರಿಪ್ಟೋ ಕರೆನ್ಸಿ ಎನಿಸಿರುವ ಬಿಟ್ಕಾಯಿನ್ ಮೇಲೆ ಹೂಡಿಕೆ ಮಾಡಿದ್ದೀರಿ ಎಂದರೆ, ನಿಮಗೆ ಲಕ್ಕೋ ಲಕ್ಕು.. ಯಾಕೆ ಅಂತ ಯೋಚಿಸುತ್ತಿದ್ದೀರಾ? ಒಂದು ಬಿಟ್ ಕಾಯಿನ್ ಗೆ ಬರೋಬ್ಬರಿ 72,000 ಡಾಲರ್ ಬಂದು ನಿಮ್ಮ ಕೈ ಸೇರುತ್ತೆ ಅಂದ್ರೆ ನೀವ್ ನಂಬ್ತೀರಾ? ಏನಿದು ಸ್ಟೋರಿ? ಈ ಮಾಹಿತಿ ಓದಿ, ಹಾಗೇ ಬಿಟ್ ಕಾಯಿನ್ ನಂತ ಕ್ರಿಪ್ಟೋಕರೆನ್ಸಿಗಳ ಮೇಲೆ ಹೂಡಿಕೆನೂ ಮಾಡಿ. ಹೀಗಾಗಲೇ ಹೂಡಿಕೆ ಮಾಡಿದವ್ರಂತೂ ಸಖತ್ ಲಕ್ಕಿ ಬಿಡಿ.

ಹೌದು! ಪ್ರಸ್ತುತತೆಯಲ್ಲಿ ಕ್ರಿಪ್ಟೋ ಕರೆನ್ಸಿ ಎನಿಸಿರುವ ಬಿಟ್ಕಾಯಿನ್ ನಾಗಾಲೋಟದಲ್ಲಿದೆ. ಒಂದು ಬಿಟ್ಕಾಯಿನ್ ಮೌಲ್ಯ ಮೊದಲ ಬಾರಿಗೆ ಬರೋಬ್ಬರಿ 72,000 ಡಾಲರ್ ಮಟ್ಟದ ಮೈಲಿಗಲ್ಲು ಮುಟ್ಟಿದ್ದು, ಕಳೆದ ಆರು ತಿಂಗಳಿಂದ ಬಿಟ್’ಕಾಯಿನ್ ಬೆಲೆ ರಾಕೆಟ್’ನಂತೆ ಏರುತ್ತಿದೆ. ಸೆಪ್ಟೆಂಬರ್ನಲ್ಲಿ 25,000 ಡಾಲರ್ ಆಸುಪಾಸಿನಲ್ಲಿ ಇದ್ದ ಬಿಟ್ಕಾಯಿನ್ ಬೆಲೆ ಬಹುತೇಕ ಮೂರು ಪಟ್ಟು ಹೆಚ್ಚಿರುವುದು ಸೋಜಿಗವೇ ಸರಿ.

ಸರ್ಕಾರ ಅಥವಾ ಬ್ಯಾಂಕುಗಳ ನಿಯಂತ್ರಣ ಇಲ್ಲದೆ ಮುಕ್ತವಾಗಿರುವುದೇ ಕ್ರಿಪ್ಟೋದ ವಿಶೇಷತೆ. 2017ರಲ್ಲಿ ಮೊದಲ ಬಾರಿಗೆ ಇದು ಏರಿಕೆ ಕಂಡಿದ್ದು, ವರ್ಷದ ಆರಂಭದಲ್ಲಿ ಸಾವಿರ ರೂ. ಒಳಗಿದ್ದ ಅದರ ಬೆಲೆ ವರ್ಷಾಂತ್ಯದಲ್ಲಿ10 ಪಟ್ಟು ಹೆಚ್ಚಾಗಿತ್ತು. ಅದಾದ ಬಳಿಕ ಎರಡನೇ ಬಾರಿ ಹೈಜಂಪ್ ಆಗಿದ್ದು ಕೋವಿಡ್ ಕಾಲಘಟ್ಟವಾದ 2020-21ರಲ್ಲಿ. ಈಗ ಮತ್ತೊಮ್ಮೆ ಸೂಪರ್ ಜಿಗಿತ ಕಂಡಿದೆ. ಬಿಟ್ಕಾಯಿನ್ ಸೇರಿದಂತೆ ಕ್ರಿಪ್ಟೋಕರೆನ್ಸಿಗಳು ನೀರ ಮೇಲಣ ಗುಳ್ಳೆಗಳಂತೆ ಮಾತ್ರ ಎಂದು ಹಲವು ಪರಿಣಿತರು ಎಚ್ಚರಿಸುತ್ತಲೇ ಇದ್ದಾರೆ. ಆದರೂ ಕ್ರಿಪ್ಟೋಗಳಿಗೆ ಬೇಡಿಕೆ ಮಾತ್ರ ಕಡಿಮೆ ಆಗಿಲ್ಲ.

ಬಿಟ್’ಕಾಯಿನ್’ಗೆ ಯಾಕಿಷ್ಟು ಬೇಡಿಕೆ?

ಬಿಟ್’ಕಾಯಿನ್ ಡಿಜಿಟಲ್ ಕರೆನ್ಸಿ ಇಷ್ಟು ವೇಗದಲ್ಲಿ ಓಡುತ್ತಿರುವುದು ಯಾಕೆ ಎಂದು ಕ್ರಿಪ್ಟೋ ಮಾರುಕಟ್ಟೆ ತಜ್ಞರು ಎರಡು ಪ್ರಮುಖ ಕಾರಣಗಳನ್ನು ಪ್ರಸ್ತಾಪಿಸಿದ್ದಾರೆ.

1. ಅಮೆರಿಕದಲ್ಲಿ ಫೆಡರಲ್ ರಿಸರ್ವ್ ಸಂಸ್ಥೆ ಬಡ್ಡಿದರ ಕಡಿಮೆ ಮಾಡಬಹುದು ಎಂಬ ನಿರೀಕ್ಷೆ:

ಅಮೆರಿಕದಲ್ಲಿ ಬಡ್ಡಿದರ ಕಡಿಮೆ ಆಗುತ್ತಿದೆ ಎಂದರೆ ಸಹಜವಾಗಿ ಅದರ ಲಾಭ ಷೇರು ಮಾರುಕಟ್ಟೆ, ಚಿನ್ನ ಮತ್ತಿತರ ಕಡೆ ಹೋಗುತ್ತದೆ. ಬಹಳಷ್ಟು ಹೂಡಿಕೆದಾರರು ಚಿನ್ನ ಖರೀದಿಸುತ್ತಿದ್ದಾರೆ. ಹಾಗೆಯೇ, ಬಿಟ್ಕಾಯಿನ್ನಂಥ ಕ್ರಿಪ್ಟೋಕರೆನ್ಸಿಗಳ ಮೇಲೆಯೂ ಹೂಡಿಕೆ ಮಾಡುತ್ತಿದ್ದಾರೆ.

2. ಬಿಟ್ಕಾಯಿನ್ ಇಟಿಎಫ್’ಗಳು:

ಇನ್ನು ಬಿಟ್ಕಾಯಿನ್ ಇಟಿಎಫ್ ಅಥವಾ ಎಕ್ಸ್’ಚೇಂಜ್ ಟ್ರೇಡೆಡ್ ಫಂಡ್’ಗಳಲ್ಲಿ ಸಾಂಸ್ಥಿಕ ಹೂಡಿಕೆದಾರರಿಂದ ಬಹಳಷ್ಟು ಬಂಡವಾಳ ಹರಿದುಬರುತ್ತಿದೆ. ಹೀಗಾಗಿ, ಬಿಟ್ಕಾ’ಯಿನ್ ಸಾರ್ವಕಾಲಿಕ ಗರಿಷ್ಠ ಮಟ್ಟ ದಾಟಿ ಹೋಗುತ್ತಲೇ ಇದೆ.
ಬಿಟ್ಕಾಯಿನ್ ಮಾತ್ರವಲ್ಲ, ಎಥಿರಿಯಮ್, ಬಿಎನ್ಬಿ, ಟೆಥರ್, ಸೊಲಾನ, ಡೋಜೆಕಾಯಿನ್ ಇತ್ಯಾದಿ ಹಲವು ಕ್ರಿಪ್ಟೊಕರೆನ್ಸಿಗಳೂ ಕೂಡ ಬೇಡಿಕೆ ಪಡೆದಿವೆ. ಕ್ರಿಪ್ಟೋ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಸಾಕಷ್ಟು ಕಲರವ ನಡೆಯುತ್ತಿದೆ.ರಾದ ಜ್ಯೋತಿರಾಧಿತ್ಯ ಸಿಂಧಿಯಾ ಅವರು ನವದೆಹಲಿಯಲ್ಲಿ ವರ್ಚುವಲ್ ಆಗಿ ಫ್ಲಾಗ್ ಆಫ್ ಮಾಡುವ ಮೂಲಕ ಸೇವೆಗಳು ಆರಂಭಗೊಂಡವು.

ಇನ್ನು ಬೆಂಗಳೂರು ಮತ್ತು ಹೈದರಾಬಾದ್ ನಗರಗಳಿಗೆ ಮಾರ್ಚ್ 18 ರಿಂದ ತಮ್ಮ ವಾಣಿಜ್ಯ ಸೇವೆ ಆರಂಭಿಸುವುದಾಗಿ‌ ಕಂಪನಿಯು ಘೋಷಣೆ ಮಾಡಿದೆ.

ಹಸಿರು ನಿಶಾನೆ ತೋರಿದ ಬಳಿಕ ಮಾತನಾಡಿದ ಸಿಂಧಿಯಾ ಅವರು, ಕಳೆದೆರಡು ದಶಕದಲ್ಲಿ ಹಲವಾರು ಅಂತರಾಷ್ಟ್ರೀಯ ಅಥವಾ ದೇಶೀಯ ವಿಮಾನಯಾನ ಸಂಸ್ಥೆಗಳು ಮುಚ್ಚಿರುವ ಬಗ್ಗೆ ನಾವು ಕೇಳಿದ್ದೇವೆ ಹಾಗೂ ನೋಡಿದ್ದೇವೆ. ಆದರೆ ಈಗ ಒಂದೇ ದೇಶದಲ್ಲಿ ಆರು ವಿಮಾನಯಾನ ಸಂಸ್ಥೆಗಳು UDAN ಯೋಜನೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಉಡಾನ್ ಯೋಜನೆಯ ಅಡಿಯಲ್ಲಿ ಅವರಿಗೆ 18 ಮಾರ್ಗಗಳನ್ನು ನೀಡಿದ್ದೇವೆ ಎಂದು ಹೇಳುವ ಮೂಲಕ ಫ್ಲೈ 91 ತಂಡಕ್ಕೆ ಶುಭ ಹಾರೈಸಿದರು.

ಇನ್ನು ಈ ಪ್ರಾದೇಶಿಕ ಏರ್‌ಲೈನ್ ನ ಅಧ್ಯಕ್ಷ ಹರ್ಷ ರಾಘವನ್ ಮಾತನಾಡಿ, ಇದು ಕೇವಲ ಆರಂಭವಷ್ಟೇ ನಮ್ಮ ಗುರಿ ಟೈರ್ 2 ಮತ್ತು ಟೈರ್ 3 ನಗರಗಳಾಗಿದ್ದು ಮುಂಬರುವ ದಿನಗಳಲ್ಲಿ ವಿಸ್ತರಿಸುವ ಯೋಜನೆಯಿದೆ. ಅಷ್ಟೇ ಅಲ್ಲದೇ ವಿಮಾನಯಾನ ಕ್ಷೇತ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನೀಡುತ್ತಿರುವ ಪ್ರೋತ್ಸಾಹದ ಕುರಿತು ಶ್ಲಾಘಿಸಿದರು.

You might also like
Leave A Reply

Your email address will not be published.