ಚುನಾವಣಾ ಪ್ರಚಾರ : ತಾಸಿಗೆ 5 ಲಕ್ಷ ಬಿಲ್‌ ಇದ್ರೂ ಹೆಚ್ಚುತ್ತಿದೆ ವಿಮಾನ, ಹೆಲಿಕಾಪ್ಟರ್‌ʼಗಳ ಬುಕಿಂಗ್

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ದೇಶಾದ್ಯಂತ ರಾಜಕೀಯ ಪಕ್ಷಗಳ ಪ್ರಚಾರದ ಕಿಚ್ಚು ಬಾನೆತ್ತರಕ್ಕೆ ಹಾರುತ್ತಿದೆ. ಒಂದೇ ದಿನದಲ್ಲಿ ಹಲವು ಕಡೆಗಳಲ್ಲಿ ಪ್ರಚಾರ ಮಾಡುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ವಿಮಾನ ಹಾಗೂ ಹೆಲಿಕಾಪ್ಟರ್ ಮೊರೆ ಹೋಗುತ್ತಿದ್ದು, ಖಾಸಗಿ ವಿಮಾನ ಹಾಗೂ ಹೆಲಿಕಾಪ್ಟರ್ ಗಳ ಬೇಡಿಕೆಯು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಈ ಬಾರಿ ಹಿಂದಿನ ಚುನಾವಣೆಗಿಂತಲೂ ಅಧಿಕ ಪ್ರಮಾಣದಲ್ಲಿ ಖಾಸಗಿ ವಿಮಾನಗಳಿಗೆ ಬೇಡಿಕೆ ಬಂದಿದೆ. ರಾಜಕೀಯ ಪಕ್ಷಗಳು ಸಣ್ಣ ವಿಮಾನಗಳಿಗಿಂತಲೂ, ಹೆಲಿಕಾಪ್ಟರ್‌ಗಳಿಗೆ ಬೇಡಿಕೆ ಇಟ್ಟಿವೆ. ಕೆಲವರು ಲೀಸ್‌ ಆಧಾರದ ಮೇಲೆ ವಿಮಾನಗಳನ್ನು ಪಡೆಯಲಿದ್ದಾರೆ ಎಂದು ಬಿಸಿನೆಸ್‌ ವಿಮಾನ ಅಸೋಸಿಯೇಷನ್‌ ಕಾರ್ಯನಿರ್ವಹಕ ನಿರ್ದೇಶಕ ಆರ್‌.ಕೆ ಬಾಲಿ ತಿಳಿಸಿದ್ದಾರೆ.

Election campaign: 5 lakh per hour bill, bookings of airplanes and helicopters are increasing

ವಿಮಾನಗಳ ಬಾಡಿಗೆ ಬೆಲೆ ಗಂಟೆಗೆ 4.5 ಲಕ್ಷ ರೂ.ನಿಂದ 5.25 ಲಕ್ಷ ರೂ.ಗೆ ಏರಿಕೆಯಾಗಲಿದೆ. ಹೆಲಿಕಾಪ್ಟರ್‌ ಬೆಲೆ ಗಂಟೆಗೆ ಸುಮಾರು 1.5 ಲಕ್ಷ ರೂ ನಷ್ಟು ಇರಲಿದೆ. ಕೆಲವೊಮ್ಮೆ ಬೇಡಿಕೆ ಹೆಚ್ಚಿದರೆ ಗಂಟೆಗೆ 3.5 ಲಕ್ಷ ರೂ. ಕೂಡ ಆಗಬಹುದು ಎಂದು ಮಾಹಿತಿ ನೀಡಿದರು.

ದೇಶದಲ್ಲಿ ಪ್ರಸ್ತುತ 112 ಖಾಸಗಿ ವಿಮಾನ ಆಪರೇಟರ್‌ಗಳಿದ್ದು, ಅವರ ಬಳಿ 450 ರಿಂದ 500 ವಿಮಾನಗಳಿವೆ. ಅಂದಾಜು 175 ಹೆಲಿಕಾಪ್ಟರ್‌ಗಳಿವೆ. ಬೇಡಿಕೆ ಹೆಚ್ಚಿರುವ ಕಾರಣ ಕೆಲವರು ವಿದೇಶಗಳಿಂದ ಬಾಡಿಗೆ ತರಿಸಿ, ಇಲ್ಲಿ ಬೇಡಿಕೆ ಪೂರೈಸುತ್ತಾರೆ. ಖಾಸಗಿ ವಿಮಾನಗಳಲ್ಲಿ ಸುಮಾರು 10 ಜನ ಕೂರುವ ವ್ಯವಸ್ಥೆ ಇರುತ್ತದೆ. ಹೆಲಿಕಾಪ್ಟರ್‌ನಲ್ಲಿ 4-5 ಜನ ಕೂರಬಹುದಾಗಿದೆ ಎಂದು ತಿಳಿಸಿದರು.

You might also like
Leave A Reply

Your email address will not be published.