ಸಿಎಎ 2019 ಮೊಬೈಲ್ ಆ್ಯಪ್ – ಕೇಂದ್ರ ಸರ್ಕಾರದ ಹೊಸ ಘೋಷಣೆ ಏನು?

ದೇಶದಾದ್ಯಂತ ಪೌರತ್ವ ತಿದ್ದುಪಡಿ ಮಸೂದೆಯನ್ನು ಜಾರಿಗೊಳಿಸುವುದಾಗಿ ಘೋಷಿಸಿದ ಬೆನ್ನಲ್ಲೇ, ಕೇಂದ್ರ ಸಕಾರವು ಭಾರತದಲ್ಲಿ ನೆಲೆಸಿರುವ ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ ರಾಷ್ಟ್ರಗಳ 6 ಅಲ್ಪಸಂಖ್ಯಾತ ಸಮುದಾಯದ ನಾಗರಿಕರಿಗೆ ಮೊಬೈಲ್ ಆ್ಯಪ್ ಒಂದನ್ನು ಘೋಷಿಸಿದೆ.

ಟ್ವೀಟ್ ಮೂಲಕ ಆ್ಯಪ್ ಅನ್ನು ಘೋಷಿಸಿರುವ ಕೇಂದ್ರ ಗೃಹ ಸಚಿವಾಲಯ, “ಈಗಾಗಲೇ ಪೌರತ್ವ ತಿದ್ದುಪಡಿ ಮಸೂದೆ – 2024 ಯು ಸಿ.ಎ.ಎ – 2019 ರ ಅಡಿಯಲ್ಲಿ ಜಾರಿಗೊಂಡಿದೆ. ಈಗಾಗಲೇ ಸಿಎಎ-2019 ಪೋರ್ಟಲ್ ಜಾರಿಯಲ್ಲಿದೆ. ಶೀಘ್ರದಲ್ಲೇ ಮೊಬೈಲ್ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶವಾಗುವಂತೆ ಸಿಎಎ – 2019 ಮೊಬೈಲ್ ಆ್ಯಪ್ ಅನ್ನು ಕೂಡಾ ಬಿಡುಗಡೆಗೊಳಿಸಲಿದ್ದೇವೆ” ಎಂದಿದೆ.

ಡಿಸೆಂಬರ್ 31, 1014 ಕ್ಕೆ ಮುಂಚಿತವಾಗಿ, ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನದಿಂದ ಭಾರತಕ್ಕೆ ವಲಸೆ ಬಂದ ಹಿಂದು, ಸಿಖ್, ಜೈನ್, ಬೌದ್ಧ, ಪಾರ್ಸಿ ಹಾಗೂ ಕ್ರಿಶ್ಚಿಯನ್ ವಲಸಿಗರಿಗೆ ಭಾರತದ ಪೌರತ್ವ ಸಿಗಲಿದೆ. ಆದರೆ, ಈ ಕಾಯ್ದೆ ಮುಸ್ಲಿಂ ವಲಸಿಗರನ್ನು ಒಳಗೊಂಡಿಲ್ಲ.

ಸೂಕ್ತ ದಾಖಲೆ (ವಲಸೆ ಬರುವ ಮುನ್ನ ವಾಸವಿದ್ದ ರಾಷ್ಟ್ರದಲ್ಲಿನ ಗುರುತು ಪತ್ರ) ಗಳನ್ನು ಸಲ್ಲಿಸಿ, ಪೋರ್ಟಲ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸುವ ನಾಗರಿಕರು ಸ್ಥಳೀಯವಾಗಿ ಗುರುತಿಸಲಾದ ಸಮುದಾಯ ಸಂಸ್ಥೆಗಳ ಮೂಲಕ ತಮ್ಮ ಧರ್ಮದ ಗುರುತು ಹಾಗೂ ಅದೇ ಧರ್ಮದಲ್ಲಿ ಮುಂದುವರೆಯುತ್ತೇವೆ ಎಂದು ಖಾತರಿಪಡಿಸಬೇಕಾಗುತ್ತದೆ.

ಆ್ಯಪ್ ಬಿಡುಗಡೆಯಾದ ಮೇಲೆ ಅರ್ಜಿ ಹಾಕುವ ವಿಧಾನ ಇನ್ನಷ್ಟು ಸುಲಭವಾಗಲಿದ್ದು, ದೇಶದಲ್ಲಿ ಅಕ್ರಮ ನುಸುಳುಕೋರರನ್ನು ತಡೆಯಲು ಇದು ಕಠಿಣ ಮತ್ತು ಪರಿಣಾಮಕಾರಿ ಮಾರ್ಗವಾಗಿದೆ ಎನ್ನಲಾಗುತ್ತಿದೆ.

You might also like
Leave A Reply

Your email address will not be published.