ಪ್ರಭು ಶ್ರೀ ರಾಮನ ದರ್ಶನ ಪಡೆದ ಭಾಗ್ಯವಂತರು – ಸಚಿವರಿಗೇ ಇನ್ನೂ ಸಿಕ್ಕಿಲ್ಲ ರಾಮನ ದರ್ಶನ

ರಾಜ್ಯದಿಂದ 35 ಸಾವಿರ ಮಂದಿ ರಾಮನ ದರ್ಶನ ಪಡೆಯಲು ಹೋಗುತ್ತಿದ್ದು, ಈ ಪೈಕಿ ಚಿತ್ರದುರ್ಗದಿಂದ 415 ರಾಮ ಭಕ್ತಾಧಿಗಳು ಹೋಗುತ್ತಿದ್ದಾರೆ. ದೇಶದ ಅನೇಕ ಕ್ಯಾಬಿನೆಟ್ ಸಚಿವರುಗಳಿಗೆ ರಾಮನ ದರ್ಶನ ಸಿಕ್ಕಿಲ್ಲ. ಆದರೆ, ಅತನ ಭಕ್ತರಾದ ನಿಮಗೆ ರಾಮನ ದರ್ಶನ ಮಾಡುವ ಭಾಗ್ಯ ಬಂದಿರುವುದು ವಿಶೇಷನೀಯ ಎಂದು ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.

ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಚಿತ್ರದುರ್ಗ ನಗರದಿಂದ ಆಯೋಧ್ಯೆಗೆ ಹೋಗುವ ರಾಮ ಭಕ್ತಾಧಿಗಳಿಗೆ ಹಮ್ಮಿಕೊಂಡಿದ್ದ ಬಿಳ್ಕೋಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನರೇಂದ್ರ ಮೋದಿಯವರ ಅಪೇಕ್ಷೆಯಂತೆ ಅಯೋಧ್ಯೆ ರಾಮ ಮಂದಿರದಲ್ಲಿ ರಾಮನ ದರ್ಶನ ಭಾಗ್ಯವನ್ನು ಕರುಣಿಸಲಾಗಿದೆ. ಅಯೋಧ್ಯಾ, ಕಾಶಿ, ಮಥುರಾ ಈ ದೇಶದ ಬಹುಸಂಖ್ಯಾತರ ಅಸ್ಮಿತೆಯಾಗಿದೆ ಎಂದರು.

ರಾಮಮಂದಿರ ನಿರ್ಮಾಣದ ಹಿಂದೆ ಹಲವು ಜನರ ತ್ಯಾಗ, ಬಲಿದಾನ, ಹೋರಾಟವಿದೆ. ಅದೆಷ್ಟೋ ಜನರು ತಮ್ಮ ಪ್ರಾಣ ನೀಡಿದ್ದಾರೆ. ರಾಮರಾಜ್ಯದ ಕನಸು ಸಾಕಾರಗೊಳ್ಳಲು ರಾಮಮಂದಿರ ನಿರ್ಮಾಣವಾಗಬೇಕು ಎಂಬುದು ಮೋದಿ ಅವರ ಕನಸಾಗಿತ್ತು. ಅದೀಗ ಈಡೇರಿದೆ. 500 ವರ್ಷಗಳ ಹೋರಾಟಕ್ಕೆ ಜಯ ಸಿಕ್ಕಿದೆ. ದೇಶದಲ್ಲಿ ಸಂವಿಧಾನ ಎಷ್ಟು ಮುಖ್ಯವೂ ಅಷ್ಟೇ ಪ್ರಮಾಣದಲ್ಲಿ ರಾಮಾಯಣ ಮತ್ತು ಮಹಾಭಾರತ ಬಹುಸಂಖ್ಯಾತ ಹಿಂದೂಗಳಿಗೆ ಅವಶ್ಯವಾಗಿದೆ ಎಂದು ಹೇಳಿದರು.

The lucky ones who got the darshan of Lord Sri Rama - The minister has not yet got the darshan of Rama

ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಮಾತನಾಡಿ, ರಾಮನ ದರ್ಶನ ಪಡೆಯಲಿರುವ ಎಲ್ಲಾ ಭಕ್ತಾದಿಗಳಿಗೆ ಸಂತಸವಾಗಿದೆ. ರಾಮನ ದರ್ಶನದಿಂದ ಬಂದ ಮೇಲೆ ಕನಿಷ್ಠ 500 ಮನೆಗಾದರೂ ಶ್ರೀರಾಮನ ಪ್ರಸಾದ ತಲುಪಿಸುವ ಕಾರ್ಯ ಮಾಡಬೇಕು. ಶ್ರೀರಾಮ ಆದರ್ಶ ಮತ್ತು ತತ್ವಗಳನ್ನು ಸಾಧ್ಯವಾದಷ್ಟು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಮನವಿ ಮಾಡಿದರು.

ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಬೇಕೆಂದು ಹಲವಾರು ವರ್ಷಗಳಿಂದ ಹೋರಾಟ ನಡೆಯುತ್ತಿತ್ತು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಇದೀಗ ನನಸಾಗಿದೆ. ಇದೀಗ ಪೂರ್ಣ ಪ್ರಮಾಣದಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು. ದೇಶದ ನಾನಾ ಭಾಗಗಳಿಂದ ಆಯೋಧ್ಯೆಗೆ ಹೋಗಲು ಕೇಂದ್ರ ಸರ್ಕಾರ ಮತ್ತು ರೈಲ್ವೆ ಇಲಾಖೆ ಅನುಕೂಲ ಮಾಡಿ ಕೊಟ್ಟಿದೆ. ಮುಂದಿನ 2024ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. 400ಕ್ಕೂ ಹೆಚ್ಚು ಸ್ಥಾನ ಗೆಲ್ಲುವುದರ ಮೂಲಕ ಅಧಿಕಾರವನ್ನು ಪಡೆಯಲಿದೆ ಎಂದರು.

ಅಯೋಧ್ಯೆ ಶ್ರೀರಾಮ ದರ್ಶನ ಅಭಿಯಾನದ ಸಂಚಾಲಕ ಜಗದೀಶ್ ಹಿರೇಮನಿ ಮಾತನಾಡಿ, ಕೇಂದ್ರ ಸರ್ಕಾರ ದೇಶದಲ್ಲಿನ ಜನತೆಗೆ ವಿಶೇಷ ರೈಲು ಬಿಡುವುದರ ಮೂಲಕ ಎಲ್ಲರಿಗೂ ರಾಮನ ದರ್ಶನಕ್ಕೆ ಅವಕಾಶ ಕಲ್ಪಿಸಿದೆ. ತುಮಕೂರಿನಿಂದ ಪ್ರಥಮವಾಗಿ ಆಯೋಧ್ಯೆಗೆ ಭಕ್ತಾಧಿಗಳನ್ನು ಕಳುಹಿಸಲಾಗಿದೆ. ಈಗ ಕೋಟೆನಾಡು ಚಿತ್ರದುರ್ಗದಿಂದ 2ನೇ ರೈಲು ಹೋಗುತ್ತಿದೆ. ಇದೀಗ ದರ್ಶನ ಪಡೆಯಲು ಹೋಗುತ್ತಿರುವ ಎಲ್ಲಾರಿಗೂ ರಾಮನ ದರ್ಶನ ಸರಾಗವಾಗಿ ಆಗಲಿ ಎಂದರು.

ಈ ವೇಳೆ ಮಾಜಿ ಶಾಸಕ ತಿಪ್ಪೇಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ರೈಲ್ವೆ ಇಲಾಖೆಯ ಡಿಆರ್‌ಎಂ ಶಿಲ್ಪ ಆಗರವಾಲ್, ರವಿಚಂದನ್, ವಿಜಯೇಂದ್ರ, ಮೋಹನ್, ಶಿವಣ್ಣಚಾರ್, ನಾಗರಾಜ್ ಬೇದ್ರೇ, ದಗ್ಗೆ ಶಿವಪ್ರಕಾಶ್, ಸಂಪತ್ ಇದ್ದರು.

You might also like
Leave A Reply

Your email address will not be published.