ಹಿಂದೂ ಭಾವನೆಗಳಿಗೆ ಧಕ್ಕೆ, ಕ್ರಿಶ್ಚಿಯನ್ ಮಿಷನರಿ ಶಾಲೆ ತ್ಯಜಿಸಲು ಇದು ಸಕಾಲ – ಶಾಸಕ ಭರತ್ ಶೆಟ್ಟಿ

ಹೂ ಮುಡಿಯುವುದು, ಬಳೆ ಹಾಕುವುದು, ತಿಲಕ ಹಚ್ಚುವುದು ಹೀಗೆ ಹಲವು ಸಂಪ್ರದಾಯಗಳನ್ನು ಹಿಂದೂ ಹೆಣ್ಣು ಮಕ್ಕಳಿಂದ ದೂರ ಮಾಡುತ್ತಿರುವ ಕ್ರಿಶ್ಚಿಯನ್ ಮಿಷಿನರಿ ಶಾಲೆಗಳು ಇದೀಗ ಅಯೋಧ್ಯೆ ರಾಮ ಮಂದಿರದ ವಿರುದ್ಧವೂ ದ್ವೇಷ ಪಸರಿಸುತ್ತಿವೆ. ಇದಕ್ಕೆ ಸಾಥ್ ಎಂಬಂತೆ ರಾಮನ ಕುರಿತು ವಿದ್ಯಾರ್ಥಿಗಳಲ್ಲಿ ದ್ವೇಷ ಭಿತ್ತುತ್ತಿರುವ ಶಿಕ್ಷಕಿ ವಿರುದ್ಧ ಆಡಳಿತ ಮಂಡಳಿ ಕೂಡಲೇ ಕ್ರಮ ಜರುಗಿಸಬೇಕು. ಇಲ್ಲದಿದ್ದಲ್ಲಿ ತೀವ್ರ ಹೋರಾಟ ಅನಿವಾರ್ಯ ಎಂದು ಮಂಗಳೂರು ಉತ್ತರ ವಲಯದ ಶಾಸಕರಾದ ಡಾ.ಭರತ್ ಶೆಟ್ಟಿ ವೈ ಎಚ್ಚರಿಸಿದ್ದಾರೆ.

ಏನಿದು ಘಟನೆ?

ಮಂಗಳೂರು ನಗರದ ಜೆರೋಸ ಶಾಲೆಯ ಶಿಕ್ಷಕಿ ಒಬ್ಬರು ಶಾಲೆಗೆ ಬರುವ ಮಕ್ಕಳಲ್ಲಿ ಹಿಂದೂ ಧರ್ಮದ ಕುರಿತು ಅವಹೇಳನಕಾರಿ ಮಾತುಗಳನ್ನಾಡುವುದ್ದಲ್ಲದೇ, ಇದೀಗ ಶ್ರೀರಾಮ ಹಾಗೂ ರಾಮ ಮಂದಿರದ ವಿರುದ್ಧ ವಿದ್ಯಾರ್ಥಿಗಳ ಮುಂದೆ ದ್ವೇಷದ ಭಾವನೆ ಭಿತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Hurt Hindu sentiments, time to abandon Christian missionary schools - MLA Bharat Shetty

ಈ ಕುರಿತು ಡಾ.ಭರತ್ ಶೆಟ್ಟಿ ಹೇಳಿದ್ದೇನು?

ಈ ಕುರಿತು ಮಾತನಾಡಿದ ಶಾಸಕ ಡಾ.ಭರತ್ ಶೆಟ್ಟಿ, ಈಗಾಗಲೇ ವಿದ್ಯಾರ್ಥಿಗಳಲ್ಲಿ ಹಿಂದೂ ಧರ್ಮದ ಕುರಿತು ಇಲ್ಲಸಲ್ಲದ ಮಾತುಗಳನ್ನಾಡುತ್ತಿದ್ದವರು ಇದೀಗ ಅಯೋಧ್ಯೆ ಹಾಗೂ ರಾಮನವರೆಗೂ ಬಂದು ದ್ವೇಷ ಪಸರಿಸುತ್ತಿರುವ ಈ ಷಡ್ಯಂತ್ರ ಸಹಿಸಲು ಅಸಾಧ್ಯ. ಅಲ್ಲದೇ ಹಿಂದೂ ಧರ್ಮದ ಪ್ರತಿಯೊಬ್ಬರ ಭಾವನೆಗೆ ಧಕ್ಕೆ ತರುವ ಮಾತುಗಳಾಗಿವೆ ಎಂದು ಖಂಡಿಸಿದ್ದಾರೆ.

ನಮ್ಮ ಮಣ್ಣಲ್ಲಿದ್ದು ನಮ್ಮದೇ ಧರ್ಮದ ಬಗ್ಗೆ ಅವಹೇಳನಕಾರಿ ಮಾತನಾಡುವ ಇಂತಹ ಹಿಂದೂ ವಿರೋಧಿ ಶಾಲೆಗಳನ್ನು ತ್ಯಜಿಸಿ, ನಮ್ಮ ಸಂಪ್ರದಾಯಕ್ಕೆ ಮನ್ನಣೆ ನೀಡುವ ಶಾಲಾ, ಕಾಲೇಜುಗಳಿಗೆ ಸೇರಿ ವಿದ್ಯಾಭ್ಯಾಸ ಮಾಡುವ ಕುರಿತು ಪ್ರತಿಯೊಬ್ಬರಲ್ಲೂ ಒಮ್ಮತದ ಅಭಿಪ್ರಾಯ ಮೂಡಬೇಕಿದೆ. ಈ ಬಗ್ಗೆ ಪೋಷಕರು ಚಿಂತಿಸಲು ಇದು ಸಕಾಲ ಎಂದು ತಿಳಿಸಿದ್ದಾರೆ.

ಕೃಷ್ಣಾಪುರ ಶಾಲೆಯಲ್ಲಿ ರಕ್ಷಾ ಬಂಧನ ಕಿತ್ತು ಎಸೆಯಲಾಯಿತು. ಇದೀಗ ರಾಮನ ಕುರಿತಂತೆ ನಿಂದನೆ ಸಹಿಸಲು ಅಸಾಧ್ಯ. ಅದೇ ಜೀಸಸ್ ಹಾಗೂ ಅವರ ಮೂರ್ತಿ ಪೂಜೆಯ ಬಗ್ಗೆ ಮಾತನಾಡಿದ್ದರೆ, ಡೋಂಗಿ ಜಾತ್ಯಾತೀತ ಹೋರಾಟಗಾರರು ಬೀದಿಗೆ ಬರುತ್ತಿದ್ದರು. ಈ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಕೂಡ ಮೌನ ವಹಿಸಿರುವುದು, ಅವರಲ್ಲಿರುವ ಹಿಂದೂ ವಿರೋಧಿ ಭಾವನೆಯನ್ನು ಎತ್ತಿ ತೋರಿಸುತ್ತಿದೆ ಎಂದು ಟೀಕಿಸಿದ್ದಾರೆ.

You might also like
Leave A Reply

Your email address will not be published.