YuvaNidhi Scheme – ಯುವನಿಧಿಗೆ ಅಧಿಕೃತ ಚಾಲನೆ – ಇವರಿಗೆ ಇಂದೇ ಬರಲಿದೆ 3000 ರೂ

ಚುನಾವಣೆಗೂ ಮುಂಚೆ ನೀಡಿದ ಭರವಸೆಯಂತೆ ರಾಜ್ಯ ಕಾಂಗ್ರೆಸ್‌ ಸರ್ಕಾರ ತನ್ನ ಐದನೇ ಗ್ಯಾರಂಟಿಯಾದ ‘ಯುವನಿಧಿ ಯೋಜನೆ’ಗೆ (YuvaNidhi Scheme) ಇಂದು ಅಧಿಕೃತ ಚಾಲನೆ ನೀಡಿದೆ. ಈಗಾಗಲೇ ನೋಂದಣಿಯಾಗಿರುವ ನಿರುದ್ಯೋಗಿ ಯುವಕ/ಯುವತಿಯರಿಗೆ ಇಂದೇ ಮೊದಲ ಕಂತಿನ ಹಣ ದೊರೆಯಲಿದೆ.

ಸ್ವಾಮಿ ವಿವೇಕಾನಂದರ ಜನ್ಮದಿನದ ಪ್ರಯುಕ್ತ ಆಚರಿಸಲಾಗುವ ರಾಷ್ಟ್ರೀಯ ಯುವ ದಿನವಾದ ಇಂದೇ ನಿರುದ್ಯೋಗಿ ಯುವಕರಿಗೆ ನೆರವಾಗಬಲ್ಲ ಯುವನಿಧಿ ಯೋಜನೆಗೆ (YuvaNidhi Scheme) ಶಿವಮೊಗ್ಗದಲ್ಲಿ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಈ ಅದ್ದೂರಿ ಕಾರ್ಯಕ್ರಮದಲ್ಲಿ ಇಡೀ ಸಚಿವ ಸಂಪುಟವೇ ಪಾಲ್ಗೊಂಡಿತ್ತು. ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌ ಸೇರಿದಂತೆ ಇಡೀ ಸಚಿವ ಸಂಪುಟವೇ ನೆರೆದಿತ್ತು.

(YuvaNidhi Scheme

ಏನಿದು ಯುವನಿಧಿ ಯೋಜನೆ?

ಶಿಕ್ಷಣ ಪೂರ್ಣಗೊಳಿಸಿ ಉದ್ಯೋಗ ದೊರಕದೇ ನಿರುದ್ಯೋಗಿಗಳಾಗಿರುವ ಯುವಕ/ಯುವತಿಯರಿಗೆ ಸಹಾಯಕವಾಗಲು ಮಾಸಿಕ ರೂ.1,500 ರಿಂದ 3000 ಹಣವನ್ನು ವರ್ಗಾಯಿಸಲಾಗುತ್ತದೆ. ಡಿಪ್ಲೋಮಾದವರಿಗೆ ರೂ. 1,500 ರೂ. ಪಧವೀಧರ ನಿರುದ್ಯೋಗಿಗಳಿಗೆ ರೂ.3,000 ರೂ. ಹಣವನ್ನು 2 ವರ್ಷಗಳವರೆಗೆ ಮಾಸಿಕವಾಗಿ ವರ್ಗಾಯಿಸಲಾಗುತ್ತದೆ.

ಅರ್ಹತೆಗಳೇನು?

  •  ರಾಜ್ಯದ ನಿವಾಸಿಯಾಗಿರಬೇಕು
  •  18 ವರ್ಷದಿಂದ 25 ವರ್ಷದ ಒಳಗಿನ ವಯೋಮಾನದವರಾಗಿರಬೇಕು
  •  2023ನೇ ಸಾಲಿನಲ್ಲಿ ಡಿಪ್ಲೋಮಾ/ಪದವಿ ಉತ್ತೀರ್ಣರಾಗಿ ಕಳೆದ 6 ತಿಂಗಳುಗಳಾಗಿರಬೇಕು
  •  ಸರ್ಕಾರಿ/ಖಾಸಗಿ ಅಥವಾ ಸ್ವಯಂ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿರಬಾರದು
  •  ಉನ್ನತ ಶಿಕ್ಷಣ ಮುಂದುವರೆಸಿರಬಾರದು
  •  ನಿರುದ್ಯೋಗಿ ಪ್ರಮಾಣ ಪತ್ರ ಹೊಂದಿರಬೇಕು

ಅರ್ಹ ಯುವಕ/ಯುವತಿಯರು ಸೇವಾಸಿಂಧು ಪೋರ್ಟಲ್ ಮೂಲಕ ಯುವನಿಧಿ ಯೋಜನೆಗೆ (YuvaNidhi Scheme) ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರದ ಬಾಪೂಜಿ ಸೇವಾಕೇಂದ್ರ, ಗ್ರಾಮ ಒನ್, ಬೆಂಗಳೂರು ಒನ್, ಅಟಲ್ ಜನಸ್ನೇಹಿ ಸೇವಾಕೇಂದ್ರಗಳಿಗೆ ತೆರಳಿ ಅರ್ಜಿ ಸಲ್ಲಿಸಬಹುದಾಗಿದೆ.

https://sevasindhugs.karnataka.gov.in/

ಯುವನಿಧಿ ಯೋಜನೆಯ ಜಾರಿ ಮಾಡುವ ಮೂಲಕ ಕಾಂಗ್ರೆಸ್‌ ಸರ್ಕಾರ ನೀಡಿದ್ದ ಐದು ಭರವಸೆಗಳನ್ನು ಈಡೇರಿಸಿದಂತಾಗಿದೆ.

You might also like
Leave A Reply

Your email address will not be published.