ತಿರುಪತಿ ಲಡ್ಡು ಫೇಮಸ್ – ಅಯೋಧ್ಯೆಯಲ್ಲಿ ಯಾವ ಪ್ರಸಾದ?

ಅಯೋಧ್ಯೆ ರಾಮಮಂದಿರದ ಕುರಿತಾಗಿ ಸಾಕಷ್ಟು ವಿಚಾರಗಳನ್ನು ತಿಳಿದಿರುವ ಹಲವರಲ್ಲಿ ಈಗಾಗಲೇ ಒಂದು ಸಂದೇಹ ಮನೆ ಮಾಡಿರಬಹುದು. ದೇವಾಸ್ಥಾನವೆಂದರೆ ಬಹುಮುಖ್ಯವಾಗಿ ಥಟ್ ಎಂದು ನೆನಪಾಗುವುದೇ ಪ್ರಸಾದ. ಅದಾಗ್ಯೂ ರಾಮಮಂದಿರದ ಉದ್ಘಾಟನೆ ನಿಮಿತ್ತ ಪ್ರಸಾದ ಏನಿರಬಹುದು ಎಂಬ ನಿಮ್ಮ ಪ್ರಶ್ನೆಗೆ ಉತ್ತರ ನಾವು ಕೊಡ್ತಿವಿ. ಈ ಲೇಖನ ಓದಿ ಬಾಯಿ ಚಪ್ಪರಿಸಿ.. ಜೈ ಶ್ರೀರಾಮ್!

ರಾಮಮಂದಿರದ ಉದ್ಘಾಟನೆ ಸಮಾರಂಭದಲ್ಲಿ ಭರ್ಜರಿ ಪ್ರಸಾದ ತಯಾರಿ ನಡೆಯುತ್ತಿದ್ದು, 7000 ಕೆಜಿ ಹಲ್ವಾವನ್ನು ಈಗಾಗಲೇ ತಯಾರಿಸಲಾಗುತ್ತಿದೆ. ಅಂದರೆ ಈ ಪ್ರಸಾದ ಯಾರು ಮಾಡುತ್ತಿರಬಹುದು? ಇದರ ಸಂಪೂರ್ಣ ಜವಾಬ್ದಾರಿ ಯಾರದಿರಬಹುದು? ಎಂದು ಆಲೋಚಿಸ್ತಿದ್ದಿರಾ? ಈ ಪ್ರಶ್ನೆಗೂ ಇಲ್ಲೆ ಉತ್ತರವಿದೆ.

ಪ್ರಸಾದಕ್ಕೆ 7000 ಕೆಜಿ ಹಲ್ವಾ ತಯಾರಿ:

ರಾಮಮಂದಿರ ಉದ್ಘಾಟನೆಗೆ ಪ್ರಸಾದವಾಗಿ 7000 ಕೆಜಿ ಹಲ್ವಾವನ್ನು ತಯಾರಿಸಲಾಗುತ್ತಿದ್ದು, ಸುಮಾರು 1.5 ಲಕ್ಷ ರಾಮ ಭಕ್ತರಿಗೆ ನೀಡಲಾಗುತ್ತದೆ ಎಂದು ಅಂದಾಜಿಸಲಾಗಿದೆ. ಈ ಹಲ್ವಾ ತಯಾರಿಗೆ ನಾಗ್ಪುರದಿಂದ ಸುಮಾರು 1400 ಕೆ.ಜಿ ತೂಕದ ಕಡಾಯಿಯನ್ನೂ ತರಿಸಲಾಗಿದ್ದು, ಇದರಲ್ಲೆ ರಾಮನ ಪ್ರಸಾದವನ್ನು ತಯಾರಿಸಲಾಗುತ್ತದೆ.

ಈ ಹಲ್ವಾ ತಯಾರಿಸಲು 900 ಕೆಜಿ ಸೂಜಿ ರವೆ, 1000 ಕೆಜಿ ಸಕ್ಕರೆ, 2500 ಲೀಟರ್ ಹಾಲು, 300 ಕೆಜಿ ಡ್ರೈ ಫ್ರೂಟ್ಸ್, 1000 ಕೆಜಿ ತುಪ್ಪ ಮತ್ತು 2500 ಲೀಟರ್ ನೀರನ್ನು ಬಳಸಲಾಗುತ್ತದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಪ್ರಸಾದದ ಹೊಣೆ ಹೊತ್ತ 12 ವಿಶ್ವ ದಾಖಲೆಗಳನ್ನು ಬರೆದ ಬಾಣಸಿಗ:

chef is Vishnu Manohar Ayodhya Ram Mandir.

ನಾಗ್ಪುರದ 12 ವಿಶ್ವ ದಾಖಲೆ ಮುಡಿಗೇರಿಸಿಕೊಂಡಿರುವ ಬಾಣಸಿಗನ ಹೆಸರು ವಿಷ್ಣು ಮನೋಹರ್. ಅಯೋಧ್ಯೆ ರಾಮಮಂದಿರದ ಉದ್ಘಾಟನೆ ಸಮಾರಂಭಕ್ಕೆ ಪ್ರಸಾದದ ಸಂಪೂರ್ಣ ಜವಾಬ್ದಾರಿಯನ್ನು ಇವರೆ ಹೊತ್ತಿದ್ದಾರೆ. ಇಲ್ಲಿಯವರೆಗೆ ಒಟ್ಟು 12 ವಿಶ್ವ ದಾಖಲೆಗಳನ್ನು ಮಾಡಿದ್ದು, ಇತ್ತೀಚೆಗಷ್ಟೇ 285 ನಿಮಿಷದಲ್ಲಿ ಅನ್ನ ಸೇರಿದಂತೆ 75 ಬಗೆಯ ಖಾದ್ಯಗಳನ್ನು ತಯಾರಿಸಿ ವಿಶ್ವ ದಾಖಲೆಯನ್ನು ಬರೆಯುವ ಮೂಲಕ ಮತ್ತಷ್ಟು ಫೇಮಸ್ ಆಗಿದ್ದಾರೆ.

 

You might also like
Leave A Reply

Your email address will not be published.