ಸರ್ಕಾರಿ ಹುದ್ದೆ ಆಕಾಂಕ್ಷಿಗಳಿಗೆ ಗುಡ್‌ ನ್ಯೂಸ್‌ : 5000 ಕ್ಕೂ ಹೆಚ್ಚಿನ ಹುದ್ದೆಗಳಿಗೆ ಕೆಇಎ ಅಧಿಸೂಚನೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ರಾಜ್ಯ ಸರ್ಕಾರದ 6 ವಿವಿಧ ನಿಗಮಗಳ 5000ಕ್ಕೂ ಹೆಚ್ಚಿನ ಹುದ್ದೆಗಳಿಗೆ ಸಂಕ್ಷಿಪ್ತ ಅಧಿಸೂಚನೆ ಹೊರಡಿಸುವ ಮೂಲಕ, ಸರ್ಕಾರಿ ಹುದ್ದೆಯ (Govt Jobs) ಆಕಾಂಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸಿಹಿಸುದ್ದಿ ನೀಡಿದೆ.

ತನ್ನ ವೆಬ್‌ʼಸೈಟ್‌ʼನಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಶೀಘ್ರವೇ ಪೂರ್ಣ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ತಿಳಿಸಿದೆ. ಪೂರ್ಣ ಅಧಿಸೂಚನೆಯಲ್ಲಿಯೇ ಆಯಾ ಹುದ್ದೆಗಳಿಗೆ ಅವಶ್ಯಕವಾದ ವಿದ್ಯಾರ್ಹತೆ, ಪಠ್ಯಕ್ರಮ, ಅರ್ಜಿ ಆಹ್ವಾನಿಸುವ ದಿನಾಂಕ, ಪರೀಕ್ಷಾ ದಿನಾಂಕ, ಮೀಸಲಾತಿಗೆ ಸಂಬಂಧಿಸಿದ ವಿವರಗಳು ಸೇರಿದಂತೆ ಇತರೆ ಮಾಹಿತಿಗಳನ್ನು ನೀಡಲಿದೆ.

ಪಿಯುಸಿ, ಪದವಿ, ಇಂಜಿನಿಯರಿಂಗ್‌ ಪದವಿ ಪಡೆದವರು ಈ ಸರ್ಕಾರಿ ಹುದ್ದೆಗಳಿಗೆ (Govt Jobs) ಅರ್ಜಿ ಆಹ್ವಾನಿಸಲಾಗಿದೆ.

ನಿಗಮವಾರು ವೃಂದ ಹಾಗೂ ಹುದ್ದೆಗಳ ವಿವರ ಈ ಕೆಳಗಿನಂತಿದೆ.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
ಸಹಾಯಕ ಇಂಜಿನಿಯರ್ (ಸಿವಿಲ್) : 50
ಪ್ರಥಮ ದರ್ಜೆ ಲೆಕ್ಕ ಸಹಾಯಕ (ಗ್ರೂಪ್ ಸಿ) : 14

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ
ನಿರ್ವಾಹಕ : 2500
ಸಹಾಯಕ ಲೆಕ್ಕಿಗ: 1
ಸ್ಟಾಫ್‌ ನರ್ಸ್‌ : 1
ಫಾರ್ಮಾಷಿಸ್ಟ್‌ : 1

Govt jobs

ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ
ಸಹಾಯಕ ಗ್ರಂಥಾಪಾಲಕ: 1
ಜೂನಿಯರ್ ಪ್ರೋಗ್ರಾಮರ್ : 5
ಸಹಾಯಕ ಇಂಜಿನಿಯರ್ : 1
ಸಹಾಯಕ : 12
ಕಿರಿಯ ಸಹಾಯಕ : 25

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ
ಸಹಾಯಕ ಆಡಳಿತಾಧಿಕಾರಿ (ದರ್ಜೆ-2) : 3
ಸಹಾಯಕ ಲೆಕ್ಕಾಧಿಕಾರಿ : 2
ಸಹಾಯಕ ಅಂಕಿ ಸಂಖ್ಯಾಧಿಕಾರಿ : 1
ಸಹಾಯಕ ಉಗ್ರಾಣಾಧಿಕಾರಿ: 2
ಸಹಾಯಕ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ : 7
ಸಹಾಯಕ ಕಾನೂನು ಅಧಿಕಾರಿ : 7
ಸಹಾಯಕ ಅಭಿಯಂತರರು (ಕಾಮಗಾರಿ) : 1
ಸಹಾಯಕ ತಾಂತ್ರಿಕ ಶಿಲ್ಪಿ : 11
ಸಹಾಯಕ ಸಂಚಾರ ವ್ಯವಸ್ಥಾಪಕ: 11
ಕಿರಿಯ ಅಭಿಯಂತರರು (ಕಾಮಗಾರಿ) : 5
ಕಿರಿಯ ಅಭಿಯಂತರರು (ವಿದ್ಯುತ್): 8
ಗಣಕ ಮೇಲ್ವಿಚಾರಕ: 14
ಸಂಚಾರ ನಿರೀಕ್ಷಕ : 18
ಚಾರ್ಜ್‌ಮನ್ : 52
ಸಹಾಯಕ ಸಂಚಾರ ನಿರೀಕ್ಷಕ (ದರ್ಜೆ-3) : 28
ಕುಶಲ ಕರ್ಮಿ (ದರ್ಜೆ-3): 80
ತಾಂತ್ರಿಕ ಸಹಾಯಕ (ದರ್ಜೆ-3): 500

Govt jobs

ಕರ್ನಾಟಕ ಸೋಪ್ಸ್‌ ಅಂಡ್ ಡಿಟರ್ಜೆಂಟ್ಸ್‌ ಲಿಮಿಟೆಡ್
ಅಧಿಕಾರಿ (ಲೆಕ್ಕಪತ್ರ) (ಮಾರುಕಟ್ಟೆ) (ಗ್ರೂಪ್ ಬಿ) : 6
ಅಧಿಕಾರಿ (ಲೆಕ್ಕಪತ್ರ) (ಗ್ರೂಪ್‌ ಬಿ): 1
ಕಿರಿಯ ಅಧಿಕಾರಿ ಕ್ಯೂಎಡಿ : 2
ಕಿರಿಯ ಅಧಿಕಾರಿ (ಆರ್‌ ಅಂಡ್ ಡಿ) : 1
ಕಿರಿಯ ಅಧಿಕಾರಿ (ಉತ್ಪಾದನೆ ನಿರ್ವಹಣೆ) : 2
ಕಿರಿಯ ಅಧಿಕಾರಿ (ಸಾಮಗ್ರಿ / ಉಗ್ರಾಣ ವಿಭಾಗ) : 2
ಕಿರಿಯ ಅಧಿಕಾರಿ (ಉತ್ಪಾದನೆ ನಿರ್ವಹಣೆ) : 1
ಉಪ ಪ್ರಧಾನ ವ್ಯವಸ್ಥಾಪಕರು (ಮಾರುಕಟ್ಟೆ) ಗ್ರೂಪ್ ಎ: 1
ಸಹಾಯಕ ಪ್ರಧಾನ ವ್ಯವಸ್ಥಾಪಕರು (ಮಾರುಕಟ್ಟೆ) ಗ್ರೂಪ್ ಎ: 1
ನಿರ್ವಾಹಕರು (ಮಾರುಕಟ್ಟೆ) (ಗ್ರೂಪ್ ಎ) : 1
ಅಧಿಕಾರಿ (ಮಾರುಕಟ್ಟೆ) ಗ್ರೂಪ್ ಎ: 2
ಕಿರಿಯ ಅಧಿಕಾರಿ (ಮಾರುಕಟ್ಟೆ) (ಗ್ರೂಪ್ ಸಿ) : 1
ಮಾರಾಟ ಪ್ರತಿನಿಧಿ (ಮಾರುಕಟ್ಟೆ) ಗ್ರೂಪ್ ಸಿ: 4
ಕಿರಿಯ ಮಾರಾಟ ಪ್ರತಿನಿಧಿ (ಮಾರುಕಟ್ಟೆ) ಗ್ರೂಪ್ ಸಿ: 3
ಅಸಿಸ್ಟೆಂಟ್ ಆಪರೇಟರ್ (ಅರೆಕುಶಲ) ಗ್ರೂಪ್ ಡಿ: 11

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ
ಸಹಾಯಕ ಲೆಕ್ಕಿಗ : 15
ನಿರ್ವಾಹಕರು: 1737

ಇದು ಸಂಕ್ಷಿಪ್ತ ಅಧಿಸೂಚನೆಯಾಗಿದ್ದು ಅಭ್ಯರ್ಥಿಗಳ ತಯಾರಿಗೆ ಕೆಇಎ ಸೂಚನೆ ನೀಡಿದೆ. ಶೀಘ್ರವೇ ಸಂಪೂರ್ಣ ಅಧಿಸೂಚನೆಯನ್ನು ಸರ್ಕಾರು ಹುದ್ದೆ (Govt Jobs) ಆಕಾಂಕ್ಷಿಗಳಿಗಾಗಿ ಹೊರಡಿಸಲಾಗುತ್ತದೆ ಎಂದು ಕೆಇಎ ತಿಳಿಸಿದೆ.

You might also like
Leave A Reply

Your email address will not be published.