ಕಾಂಗ್ರೆಸ್ ಪಕ್ಷದ ದೇಣಿಗೆಯ ಕ್ಯೂ ಆರ್ ಕೋಡ್ ಗೊಂದಲ – ದುಡ್ಡು ಯಾರ ಪಾಲಾಯ್ತು?

ಕಾಂಗ್ರೆಸ್ ಪಕ್ಷದ ಗ್ರಹಗತಿಯೇ ಯಾಕೋ ಈಗ ಸರಿ ಇದ್ದಂತಿಲ್ಲ. ಹೌದು, ಒಂದಾದ ಮೇಲೆ ಒಂದು ವಿಷಯದಲ್ಲಿ ಕಾಂಗ್ರೆಸ್ ಸದ್ದು ಮಾಡುತ್ತಲೇ ಇದೆ. ಭಾರತ್ ಜೋಡೋ ಯಾತ್ರೆಯ ಅಂಗವಾಗಿ ಮೊನ್ನೆ ಮೊನ್ನೆ ತಾನೆ ಕಾಂಗ್ರೆಸ್ ಪಕ್ಷವು ‘ದೇಶಕ್ಕಾಗಿ ದೇಣಿಗೆ’ (Donate for country) ಎಂಬ ಅಭಿಯಾನವನ್ನು ಆರಂಬಿಸಿತ್ತು. ಆದರೆ, ಈಗ ಇದೇ ಕಾಂಗ್ರೆಸ್ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ.

Congress party donation QR code confusion

ದೇಶಕ್ಕಾಗಿ ದೇಣಿಗೆ ಅಭಿಯಾನಕ್ಕೆ ನೀಡಿದ ಕ್ಯೂ ಆರ್ ಕೋಡ್ ತಪ್ಪಾದ ಕಾರಣ ಕಾಂಗ್ರೆಸ್ ಪಕ್ಷವು ಲಕ್ಷಾಂತರ ರುಪಾಯಿ ನಷ್ಟ ಅನುಭವಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ಜನರಿಗೆ ಹಂಚುವ ಕರಪತ್ರದಲ್ಲಿ ಪಕ್ಷ ಮುದ್ರಿಸಿದ್ದ ವೆಬ್‌ಸೈಟ್ (ಡೊನೇಟ್‌ಐ‌ಎನ್‌ಸಿ‌.ಇನ್ ಬದಲಿಗೆ ಡೊನೇಟ್‌ಐ‌ಎನ್‌ಸಿ‌.ಸಿಒ. ಎಂಬ ತಪ್ಪು ವೆಬ್‌ಸೈಟ್ ಮಾಹಿತಿಯನ್ನು ಮುದ್ರಿಸಲಾಗಿತ್ತು) ಮತ್ತು ಕ್ಯೂ ಆರ್ ಕೋಡ್ ನಕಲಿಯಾಗಿದ್ದರಿಂದ ಜನರು ಜಮಾ ಮಾಡಿದ ಹಣ ಯಾವುದೋ‌ ನಕಲಿ‌ ಖಾತೆಗೆ ಹೋಗಿದೆ ಎಂದು ಕಾಂಗ್ರೆಸ್‌ನ ಸಂಹವನ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಮತ್ರು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಬಹಿರಂಗ ಪಡಿಸಿದ್ದಾರೆ.

You might also like
Leave A Reply

Your email address will not be published.