ಮಧ್ಯಪ್ರದೇಶಕ್ಕೆ ನೂತನ ಮುಖ್ಯಮಂತ್ರಿ – ಯಾರು ಈ ಮೋಹನ್ ಯಾದವ್?

ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಸ್ಥಾನಗಳ ಮೂಲಕ ಮತ್ತೊಮ್ಮೆ ಅಧಿಕಾರದ ಗದ್ದುಗೆಗೆ ಏರಿದ್ದ ಬಿಜೆಪಿ, ಇಂದು ತನ್ನ ಶಾಸಕಾಂಗ ಸಭೆಯಲ್ಲಿ ಮೋಹನ್ ಯಾದವ್ ಅವರನ್ನು ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದೆ.

ಮಧ್ಯಪ್ರದೇಶದಲ್ಲಿ ಈ ಹಿಂದಿನ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದಲ್ಲಿ ಬಿಜೆಪಿ ಪಕ್ಷವು ಚುನಾವಣೆಗೆ ಹೋಗಿತ್ತು. 230 ಸ್ಥಾನಗಳಲ್ಲಿ ಬರೋಬ್ಬರಿ 163 ಸ್ಥಾನಗಳಲ್ಲಿ ವಿಜಯ ಸಾಧಿಸುವ ಮೂಲಕ ಬಿಜೆಪಿ ಅಭೂತಪೂರ್ವ ಗೆಲುವು ದಾಖಲಿಸಿತ್ತು.

ನೂತನವಾಗಿ ಆಯ್ಕೆಯಾಗಿರುವ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಹಿಂದುಳಿದ ಸಮುದಾಯಕ್ಕೆ ಸೇರಿದ್ದಾರೆ. ಅಲ್ಲದೇ, ಹೊಸ ಮುಖವನ್ನು ಬಿಜೆಪಿ ಹೈಕಮಾಂಡ್ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡುವ ಮೂಲಕ ಬಿಜೆಪಿಯು ತಮ್ಮ ಪ್ರಯೋಗಶೀಲತೆಯನ್ನು ಉಳಿಸಿಕೊಂಡಂತೆ ಕಾಣುತ್ತಿದೆ. ಮೋಹನ್‌ ಯಾದವ್‌ ಅವರು ಉಜ್ಜಯಿನಿಯ ದಕ್ಷಿಣ ಕ್ಷೇತ್ರದಿಂದ ಮೂರು ಭಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಕಳೆದ ಸರ್ಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿ ಕೆಲಸವನ್ನೂ ಮಾಡಿದ್ದರು. ಇವರು BSC, LLB, MA, MBA ಅಷ್ಟೇ ಅಲ್ಲದೇ PhD ಪದವಿಯನ್ನು ಹೊಂದಿದ್ದು, ವಿದ್ಯಾರ್ಥಿ ದಿನಗಳ ಕಾಲದಲ್ಲಿ ABVP ಯ ಸಕ್ರಿಯ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದರು.

ಮೋಹನ್ ಯಾದವ್, ನೂತನ ಮುಖ್ಯಮಂತ್ರಿ ಮಧ್ಯಪ್ರದೇಶ
ಮೋಹನ್ ಯಾದವ್, ನೂತನ ಮುಖ್ಯಮಂತ್ರಿ ಮಧ್ಯಪ್ರದೇಶ

ಮೋಹನ್ ಯಾದವ್ ಅವರು ಡಿಸೆಂಬರ್ 13ರ ರಂದು ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬಿಜೆಪಿಯು ತಾನು ಗೆದ್ದ ಮೂರು ರಾಜ್ಯಗಳಲ್ಲಿ 2 ರಾಜ್ಯಗಳಲ್ಲಿ ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡಿದ್ದು, 3ನೇ ರಾಜ್ಯ ರಾಜಸ್ಥಾನದ ಮುಖ್ಯಮಂತ್ರಿ ಅಭ್ಯರ್ಥಿಯ ಆಯ್ಕೆ ಇನ್ನೂ ಬಾಕಿಯಿದೆ.

You might also like
Leave A Reply

Your email address will not be published.