ಅಂದು ಅರ್ಜುನ, ಇಂದು ಅಶ್ವತ್ಥಾಮ – ಸಂಶಯ ಹೆಚ್ಚಿಸಿದ ಮತ್ತೊಂದು ದಸರಾ ಆನೆಯ ಸಾವು

ಇತ್ತೀಚೆಗಷ್ಟೇ ದಸರಾ ಅಂಬಾರಿ ಹೊರುತ್ತಿದ್ದ ಅರ್ಜುನ ಆನೆ ಮೃತಪಟ್ಟ ಸುದ್ದಿ ಮನಸ್ಸಿನಿಂದ ಮರೆಯಾಗುವ ಮುನ್ನವೇ, ದಸರಾ ಪಡೆಯ ಮತ್ತೊಂದು ಆನೆ ದುರಂತವಾಗಿ ಮೃತಪಟ್ಟಿದೆ. ಅಷ್ಟಕ್ಕೂ ಮೃತಪಟ್ಟ ಆನೆ ಯಾವುದು? ಸಾವಿಗೆ ಕಾರಣವೇನು? ಇಲ್ಲಿದೆ ವರದಿ.

ಮೈಸೂರು ದಸರಾದಲ್ಲಿ ಪಾಲ್ಗೊಂಡಿದ್ದ ಆನೆ ಅಶ್ವತ್ಥಾಮ ಸೋಲಾರ್ ಬೇಲಿಯ ಶಾಕ್ ತಗುಲಿ ಮೃತಪಟ್ಟಿದೆ. ಹುಣಸೂರು ಪಿರಿಯಾಪಟ್ಟಣ ತಾಲ್ಲೂಕಿನ ಗಡಿ ಭಾಗದ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಭೀಮನಕಟ್ಟೆ ಆನೆ ಶಿಬಿರದ ಬಳಿ ಮೇವು ಅರಸಿ ಕಾಡಿಗೆ ತೆರಳುತ್ತಿದ್ದ 38 ವರ್ಷದ ಅಶ್ವತ್ಥಾಮನಿಗೆ ಶಾಕ್ ತಗುಲಿ ಮೃತಪಟ್ಟಿದ್ದಾನೆ.

Then Arjuna, today Ashwatthama - another Dussehra elephant death that raised suspicions

ಸೋಲಾರ್ ಬೇಲಿಯ ಮೇಲೆ ವಿದ್ಯುತ್ ತಂತಿ ಬಿದ್ದಿದ್ದರಿಂದ ಆನೆ ಮೃತಪಟ್ಟಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಆದರೆ, ಇಲಾಖೆಯ ಅಧಿಕಾರಿಗಳು ಆನೆ ಅನಾರೋಗ್ಯದಿಂದ ಮೃತಪಟ್ಟಿದೆ ಎಂದು ಇಲಾಖೆಯ ಅಧಿಕಾರಿಗಳು ಹೇಳಿರುವುದು ಹಲವಾರು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.

ಅಶ್ವತ್ಥಾಮನನ್ನು 2017 ರಲ್ಲಿ ಸಕಲೇಶಪುರದಲ್ಲಿ ಸೆರೆಹಿಡಿಯಲಾಗಿತ್ತು. ಅಷ್ಟೇ ಅಲ್ಲದೇ, ಅತ್ಯಂತ ಗಂಭೀರ ಸ್ವರೂಪದ ಅಶ್ವತ್ಥಾಮನನ್ನು 2021 ರಲ್ಲೇ ದಸರಾಕ್ಕೆ ಕರೆತರಲಾಗಿತ್ತು. ಆದರೆ, ತನ್ನ 38 ನೇ ವಯಸ್ಸಿನಲ್ಲೇ ಅಶ್ವತ್ಥಾಮ ಈ ದುರಂತ ಸಾವು ಕಂಡಿರುವುದು, ಅರ್ಜುನನ ಸಾವಿನ ನಂತರ ಮತ್ತೆ ಎಲ್ಲರಲ್ಲೂ ಸಂಶಯ ಹುಟ್ಟುಹಾಕಿದೆ.

ಈ ಬಗ್ಗೆ ಇನ್ನಷ್ಟೇ ತನಿಖೆ ನಡೆದು, ಸಾವಿಗೆ ಅಧಿಕೃತ ಕಾರಣ ಹೊರಬೀಳಬೇಕಿದ್ದು, ಹೆಚ್ಚಾಗುತ್ತಿರುವ ಆನೆಗಳ ಸಾವಿನ ಹಿಂದಿನ ಜಾಲವನ್ನು ಭೇದಿಸಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

You might also like
Leave A Reply

Your email address will not be published.