ಮಲಾವಿ ದೇಶದ ಉಪಾಧ್ಯಕ್ಷ ಚಿಲಿಮಾ ಪ್ರಯಾಣಿಸುತ್ತಿದ್ದ ವಿಮಾನವೇ ನಾಪತ್ತೆ? – ವಿಮಾನದ ಪತ್ತೆಯ ಬಗ್ಗೆ ಇಲ್ಲಿದೆ ವರದಿ.

ಪೂರ್ವ ಆಫ್ರಿಕಾ ಭಾಗದ ಮಲಾವಿ ದೇಶದ ಉಪಾಧ್ಯಕ್ಷ ಸೌಲೋಸ್ ಚಿಲಿಮಾ ಹಾಗೂ ಒಂಬತ್ತು ಜನರು ಪ್ರಯಾಣಿಸುತ್ತಿದ್ದ ವಿಮಾನವೊಂದು ನಿಗೂಢವಾಗಿ ಕಣ್ಮರೆಯಾಗಿದೆ. ಮಲಾವಿಯ ರಾಜಧಾನಿ ಉತ್ತರ ಲಿಲಾಂಗ್ವೆನಿಂದ ಸುಮಾರು 380 ಕಿಲೋ ಮೀಟರ್‌ ದೂರದಲ್ಲಿರುವ ಮುಝುಜು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿದ್ದ ವಿಮಾನ ಲ್ಯಾಂಡ್ ಆಗದೇ ಕಣ್ಮರೆಯಾಗಿದೆ. ಅಷ್ಟಕ್ಕೂ ವಿಮಾನ ಎಲ್ಲಿಗೆ ತಲುಪಿದೆ? ನಡೆದ ಘಟನೆಯಾದರೂ ಏನು? ಇಲ್ಲಿದೆ ವರದಿ.

ವಿಮಾನವು ಯಾವುದೇ ಸಿಗ್ನಲ್ ಅಥವಾ ರಾಡಾರ್ ಸಂಪರ್ಕಕ್ಕೆ ಸಿಗುತ್ತಿಲ್ಲ. ನಾಪತ್ತೆಯಾದ ವಿಮಾನ ಹಾಗೂ ಉಪಾಧ್ಯಕ್ಷರ ಪತ್ತೆಗೆ ವಿವಿಧ ರೀತಿಯಲ್ಲಿ ಪ್ರಯತ್ನಿಸಲಾಗುತ್ತಿದೆ ಎಂದು ಮಲಾವಿ ಅಧ್ಯಕ್ಷರ ಕಚೇರಿ ತಿಳಿಸಿದೆ. ಉಪಾಧ್ಯಕ್ಷ ಚಿಲಿಮಾ ಹಾಗೂ ಇತರ ಪ್ರಯಾಣಿಕರ ಶೋಧಕ್ಕಾಗಿ ದೇಶೀಯ ಹಾಗೂ ಅಂತಾರಾಷ್ಟ್ರೀಯ ಏಜೆನ್ಸಿಯ ಸಹಾಯ ಪಡೆಯುವಂತೆಯೂ ಸೂಚನೆ ನೀಡಲಾಗಿದೆ ಎನ್ನಲಾಗಿದೆ.

Malawi's Vice President Chilima's plane is missing? - Here is the report about the finding of the plane.

ಆದರೆ, ಇತ್ತೀಚಿನ ಸುದ್ದಿಯ ಪ್ರಕಾರ, ನಾಪತ್ತೆಯಾದ ಡಾರ್ನಿಯರ್ 228-202K ವಿಮಾನದ ಅವಶೇಷಗಳು ಡೆಬ್ರಿಸ್ ಬೇರಿಂಗ್ ಸಮೀಪದ ತಗ್ಗು ಕಾಡುಪ್ರದೇಶದಲ್ಲಿ ಪತ್ತೆಯಾಗಿವೆ ಎನ್ನಲಾಗಿದ್ದು, ಪ್ರತಿಕೂಲ ಹವಾಮಾನದಿಂದಾಗಿ ವಿಮಾನ ಅಪಘಾತಕ್ಕೀಡಾಗಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. ಅದಕ್ಕೆ ಪುಷ್ಠಿ ನೀಡುವಂತೆ, ವಿಮಾನ ನಾಪತ್ತೆಯಾಗುವ ಕೆಲವು ಕ್ಷಣಗಳ ಮುನ್ನ, ಲ್ಯಾಂಡಿಂಗ್ ಏರಿಯಾದ ಸಮೀಪ ಹವಾಮಾನ ಸರಿ ಇಲ್ಲ ಎನ್ನುವ ಕಾರಣಕ್ಕೆ ಲಿಲಾಂಗ್ವೆಗೆ ಮರಳುವಂತೆ ಸೂಚನೆ ನೀಡಲಾಗಿದ್ದರೂ ಕೂಡ, ಆ ಸಂದೇಶವನ್ನು ಸ್ವೀಕರಿಸುವ ಮುನ್ನವೇ ಹವಾಮಾನ ವೈಪರೀತ್ಯದಿಂದ ವಿಮಾನ ಅವಘಡಕ್ಕೀಡಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

You might also like
Leave A Reply

Your email address will not be published.