ಹಾಟ್ ಹಾಟ್ ಬೆಂಗಳೂರಿಗೆ ಮಳೆಯಿಂದ ಕೂಲ್ ಕೂಲ್ – ಪರಿಣಾಮ ಅಸ್ತವ್ಯಸ್ತ

ಕಳೆದ ಮೂರ್ನಾಲ್ಕು ದಿನಗಳಿಂದ ಸುರಿದ ಮಳೆಗೆ ಬೆಂಗಳೂರು ಫುಲ್ ಕೂಲ್ ಕೂಲ್ ಆಗಿದ್ದೆನೋ ನಿಜ. ಆದರೆ, ಅದರಿಂದ ಬೀರಿದ ಪರಿಣಾಮದಿಂದ ಹಲವೆಡೆ ತುಂಬಾ ಲಾಸ್ ಆಗಿದೆ. ಮಳೆಗಾಗಿ ಹಂಬಲಿಸುತ್ತಿದ್ದ ಜನರ ಬಾಯಲ್ಲಿ ಹಿಡಿ ಶಾಪವೂ ಕೇಳಿ ಬರುತ್ತಿರುವುದು ದುಸ್ಥಿತಿ‌.

ನಿನ್ನೆ ಸತತವಾಗಿ 4 ಗಂಟೆಗೂ ಹೆಚ್ಚಿನ ಕಾಲ ಮಳೆ ಸುರಿದ ಪರಿಣಾಮ ನಗರದ ಕೆಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಅದರಲ್ಲೂ ಪ್ರಮುಖ ರಸ್ತೆಗಳಲ್ಲಿ ನೀರು ನಿಂತಿತ್ತು.
ಇನ್ನೂ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ವಿಮಾನ ಹಾರಾಟದ ಮೇಲೆ ಕೂಡ ಹಾನಿಯುಂಟಾಗಿದ್ದು, ನಗರದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಅಧಿಕಾರಿಗಳು ಗುರುವಾರ, ಶುಕ್ರವಾರ ಕೂಡ ಗಮನಾರ್ಹವಾದ ತೊಂದರೆಯನ್ನು ಎದುರಿಸಿದರು.

ನಿರಂತರ ಮಳೆಯಿಂದಾಗಿ ವಿಮಾನ ನಿಲ್ದಾಣದ ಟರ್ಮಿನಲ್ 2 ನಲ್ಲಿ ಸೋರಿಕೆ ಕಂಡುಬಂತು. ಪರಿಣಾಮ ನೀರು ನಿಂತು ಪ್ರಯಾಣಿಕರು ಪರದಾಡಿದರು. ಪ್ರಯಾಣಿಕರು ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ನೀರು ಸರಾಗವಾಗಿ ಹರಿದು ಹೋಗದಿರಲು ಅಸಮರ್ಪಕವಾದ ಚರಂಡಿ ವ್ಯವಸ್ಥೆಯೇ ಇದಕ್ಕ ಕಾರಣ ಎಂದು ದೂರಿದ್ದಾರೆ.

ಬಿರುಸಿನ ಗಾಳಿಯೊಂದಿಗೆ ಭಾರೀ ಮಳೆಯು ರಾತ್ರಿ 9:35 ರಿಂದ 10:29 ರವರೆಗೆ ಸುರಿದ ಪರಿಣಾಮ ವಿಮಾನಗಳು ಲ್ಯಾಂಡಿಂಗ್ ಆಗಲು ತೀವ್ರ ಕಷ್ಟವಾಯ್ತು. ಅಂತರರಾಷ್ಟ್ರೀಯ ವಿಮಾನಗಳು ಸೇರಿದಂತೆ ಹಲವಾರು ವಿಮಾನಗಳ ಮಾರ್ಗವನ್ನು ಬದಲಾಯಿಸಲಾಯ್ತು ಎಂದು ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ (BIAL) ಅಧಿಕೃತ ಹೇಳಿಕೆ ತಿಳಿಸಿದೆ.

Thirsty Bengaluru hit by heavy rains. Residents face traffic woes and travel disruptions

ಶುಕ್ರವಾರದ ಪ್ರತಿಕೂಲ ಹವಾಮಾನದ ಕಾರಣ 13 ದೇಶೀಯ ವಿಮಾನಗಳು, ಮೂರು ಅಂತರರಾಷ್ಟ್ರೀಯ ಪ್ರಯಾಣಿಕರ ವಿಮಾನಗಳು ಮತ್ತು ಒಂದು ಅಂತರರಾಷ್ಟ್ರೀಯ ಸರಕು ವಿಮಾನವನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡಲು ವ್ಯವಸ್ಥೆ ಮಾಡಲಾಯ್ತು.

ಶುಕ್ರವಾರ ಸಂಜೆ ವೇಳೆಗೆ ಮತ್ತೆ ಬೆಂಗಳೂರಿನಲ್ಲಿ ಮಳೆ ಆರಂಭವಾಗಿ ತಡರಾತ್ರಿವರೆಗೂ ಸುರಿಯಿತು. ಪರಿಣಾಮ ಯಲಹಂಕ, ಜಕ್ಕೂರು, ಯಶವಂತಪುರ, ಕೆಂಗೇರಿ, ವಿಜಯನಗರ, ಜಯನಗರ ಸೇರಿದಂತೆ ಬಹುತೇಕ ಸ್ಥಳಗಳಲ್ಲಿ ಭಾರೀ ಮಳೆಯಾಗಿ ಸಮಸ್ಯೆಯಾಯ್ತು. ರಾಜಕಾಲುವೆಗಳಲ್ಲಿ ಹೆಚ್ಚು ನೀರು ಹರಿದು ಕೆಲವು ತಗ್ಗು ಪ್ರದೇಶಗಳಿಗೆ ನೀರು ತುಂಬಿತು.

ಬಿರುಗಾಳಿಯ ವಾತಾವರಣವು ಜಯನಗರ, ನೃಪತುಂಗ ನಗರ ಮತ್ತು ಆರ್‌ಆರ್ ನಗರ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಹಲವಾರು ಮರಗಳು ಉರುಳಿವೆ ಎಂದು ಸಂಸ್ಥೆ ವರದಿ ಮಾಡಿದೆ.

ಆದಾಗ್ಯೂ, ಅವ್ಯವಸ್ಥೆಯ ನಡುವೆ, ಮಳೆಯು ಬೇಸಿಗೆಯ ಬಿಸಿಲಿನ ತಾಪಮಾನದಿಂದ ಬೆಂಗಳೂರಿನ ನಿವಾಸಿಗಳಿಗೆ ಹೆಚ್ಚು ಅಗತ್ಯವಾದ ವಿಶ್ರಾಂತಿಯನ್ನು ಒದಗಿಸಿತು, ಇದು ಹಲವು ದಶಕಗಳ ನಂತರ ಅಪರೂಪದ ಅನುಭವವಾಗಿದೆ.

You might also like
Leave A Reply

Your email address will not be published.