ಕುಸಿಯುತ್ತಿದೆ ಹಿಂದೂಗಳ ಜನಸಂಖ್ಯೆ – ಏನಿದು ಬೆಳವಣಿಗೆ ಈ ವರದಿ ಓದಿ

ದೇಶದಲ್ಲಿ ಹಿಂದು ಜನಸಂಖ್ಯೆ‌ ದಿನದಿಂದ ದಿನಕ್ಕೆ ಕುಸಿತವಾಗುತ್ತಿರುವುದು ತೀವ್ರ ಆತಂಕಕಾರಿ ಬೆಳವಣಿಗೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹಿಂದುಗಳ ಜನಸಂಖ್ಯೆ ಕ್ಷೀಣಿಸುತ್ತಿರುವ ಬಗ್ಗೆ ತಕ್ಷಣಕ್ಕೆ ಯಾವುದೇ ನಿರ್ಧಾರಕ್ಕೆ ಬರಲಾಗುವುದಿಲ್ಲ. ಆದರೆ, ಸಮಗ್ರ ಅಧ್ಯಯನ ನಡೆಸಬೇಕಿದೆ. ಈ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗಲೇ ಎಚ್ಚೆತ್ತುಕೊಂಡು ಪರ್ಯಾಯ ಕ್ರಮ ಕೈಗೊಳ್ಳಬೇಕಿದೆ ಎಂದರು.

ಜಗತ್ತಿನಲ್ಲೇ ಏಕೈಕ ಜಾತ್ಯತೀತ ರಾಷ್ಟ್ರ ಭಾರತ. ಜಾತ್ಯತೀತತೆ ಎನ್ನುವುದು ಭಾರತೀಯರ ರಕ್ತ, ಸ್ವಭಾವದಲ್ಲೇ ಬಂದಿದೆ. ಮುಂದೊಂದು ದಿನ ಇದಕ್ಕೆ ಧಕ್ಕೆ ಉಂಟಾಗಬಹುದು ಎಂದು ಕಳವಳ ವ್ಯಕ್ತಪಡಿಸಿದರು.

Hindu Population in India Decreases by 8%, Minority Groups Expand

ಇದೇ ವೇಳೆ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್ ಪಕ್ಷ ತಲ ತಲಾಂತರದಿಂದಲೂ ಒಂದಾಗಿರುವ ದೇಶವನ್ನು ಒಡೆಯುವ ಹುನ್ನಾರ ಮಾಡುತಿದೆ. ಕಾಂಗ್ರೆಸ್‌ನವರು ದಕ್ಷಿಣ ಭಾರತ, ಉತ್ತರ ಭಾರತ ಎಂದು ಪ್ರತ್ಯೇಕತೆಯ ಮಾತನಾಡುತ್ತಿದ್ದಾರೆ. ದಕ್ಷಿಣ ಭಾರತದವರು ಆಫ್ರಿಕನ್ನರ ತರ, ಪೂರ್ವೋತ್ತರ ಭಾರತೀಯರು ಚೀನಿಸ್ ತರ ಕಾಣುತ್ತಾರೆ ಎಂದೆಲ್ಲ ಹೇಳುತ್ತ ದೇಶ ಒಂದಾಗಿಲ್ಲ ಎಂಬ ಸಂದೇಶ ಸಾರುವ ಪ್ರಯತ್ನ ಮಾಡುತ್ತಿದ್ದಾರೆ. ಉತ್ತರದಲ್ಲಿ ಕಾಶಿ ವಿಶ್ವನಾಥನ ದೇವಸ್ಥಾನ ವಿದ್ದರೆ, ದಕ್ಷಿಣದಲ್ಲಿ ರಾಮೇಶ್ವರ ದೇಗುಲವಿದೆ. ಆದರೆ, ಎರಡರಲ್ಲೂ ಈಶ್ವರನನ್ನೇ ಕಂಡ ದೇಶ ನಮ್ಮದು ಎಂದರು.

ವರ್ಣ, ಬಣ್ಣ, ಚರ್ಮ ಕಾಂತಿ, ವಿಭಿನ್ನ ಸಂಸ್ಕೃತಿ ಎನ್ನುತ್ತ ಪ್ರತ್ಯೇಕತೆ ಭಾವ ಮೂಡಿಸುವುದು ಶೋಭೆ ತರದು. ಜಾತಿ, ಸಂಸ್ಕೃತಿ, ಬಣ್ಣ ಎಲ್ಲವನ್ನೂ ಭಾರತ ಸಾಂಸ್ಕೃತಿಕವಾಗಿ ಬಹು ವಿಶಾಲವಾಗಿದೆ. ಅಫ್ಘಾನಿಸ್ತಾನದವರೆಗೂ ಭಾರತ ವಿಸ್ತಾರವಾಗಿದೆ. ಆದರೂ ಸಾಂಸ್ಕೃತಿಕವಾಗಿ ತಲ ತಲಾಂತರದಿಂದಲೂ ಒಂದಾಗೇ ಉಳಿದಿದೆ ಎಂದು ಪ್ರತಿಪಾದಿಸಿದರು.

ಭಾರತ ಪ್ರಮುಖವಾಗಿ ಹಿಂದುಗಳ ದೇಶವೆಂದರೂ ಸರ್ವ ಧರ್ಮೀಯರನ್ನು ಒಳಗೊಂಡಿದೆ. ಆದರೆ, ಈಗ ಹಿಂದುಗಳ ಸಂಖ್ಯೆಯೇ ಕುಸಿಯುತ್ತಿದೆ ಎಂಬುದು ಸರ್ಕಾರ, ಸಮಾಜ ಗಂಭೀರವಾಗಿ ಚಿಂತಿಸಬೇಕಾದ ಸಂಗತಿ ಎಂದು ಎಚ್ಚರಿಸಿದರು.

You might also like
Leave A Reply

Your email address will not be published.