ಯಾರ್ಯಾರಿಗೆ ಸಿಗಲಿದೆ ಲೋಕಸಭೆ ಟಿಕೆಟ್‌ – ದೆಹಲಿಗೆ ಹೊರಡುವ ಮುಂಚೆ ಯಡಿಯೂರಪ್ಪ ಹೇಳಿದ್ದಿಷ್ಟು

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲಾ ಪಕ್ಷದ ಅಭ್ಯರ್ಥಿಗಳಲ್ಲೂ ಹೇಳಿಕೊಳ್ಳಲಾರದ ಡವಡವ. ಈ ನಡುವೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಮ್ಮ ಡಾಲರ್ಸ್ ಕಾಲೋನಿ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡುವ ಮೂಲಕ ತಮ್ಮ ವಿಶ್ವಾಸವನ್ನು ವ್ಯಕ್ತಪಡಿಸಿದ್ದು, ಯಾವ್ಯಾವ ಅಭ್ಯರ್ಥಿಯನ್ನು ಯಾವ ಯಾವ ಕ್ಷೇತ್ರದಲ್ಲಿ ಕಣಕಿಳಿಸುತ್ತಿದ್ದಾರೆ ಎಂಬ ಸುಳಿವು ಯಡಿಯೂರಪ್ಪ ಅವರಿಗೆ ಸಿಕ್ಕಿದೆಯಾ ಎಂಬುದು ಹಲವರ ಗೊಂದಲಕ್ಕೆ ಕಾರಣವಾಗಿದೆ. ಏನಿದು ಸ್ಟೋರಿ? ಬನ್ನಿ ನೋಡೋಣ!

ಮಾಧ್ಯಮದವರೊಂದಿಗೆ ಮಾತನಾಡಿದ ಯಡಿಯೂರಪ್ಪ, ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಕಾ 28ಕ್ಕೆ 28 ಗೆಲ್ಲುವ ಗುರಿ ಇದೆ. ಆದರೆ, 28ಕ್ಕೆ 25 ಮಾತ್ರ ಗೆದ್ದೇ ಗೆಲ್ತೀವಿ ಎಂಬ ಆತ್ಮವಿಶ್ವಾಸ ನನ್ನಲ್ಲಿ ತುಸು ಹೆಚ್ಚಾಗೆಯಿದೆ. ಇನ್ನೂ ಇಂದು ದೆಹಲಿಯಲ್ಲಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳ್ಳುವ ಲಕ್ಷಣಗಳಿದ್ದು, ಅದರಲ್ಲೂ ನಮ್ಮ ಕರ್ನಾಟಕದ ಅಂತಿಮ ಪಟ್ಟಿ ಬಿಡುಗಡೆಯಾಗಲಿದೆ. ಈ ನಿಟ್ಟಿನಲ್ಲಿ ವಿಜಯೇಂದ್ರ ಕೂಡ ದೆಹಲಿಯಲ್ಲೇ ಇದ್ದು, ಅಂತಿಮವಾಗಿ ದೀರ್ಘ ಚರ್ಚೆ ಮಾಡಿ ಪಟ್ಟಿ ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದರು.

Who will get Lok Sabha ticket

ನಮ್ಮ ಪ್ರಧಾನಮಂತ್ರಿ ಮೋದಿಜೀ ಅವರ ರಾಜ್ಯ ಪ್ರವಾಸ ನಿಗದಿಯಾಗಿದ್ದು, ಶಿವಮೊಗ್ಗ ಜಿಲ್ಲೆಗೂ ಬರಲಿದ್ದಾರೆ. ಆದ್ದರಿಂದ ಇದಕ್ಕೆ ಬೇಕಾದ ಎಲ್ಲಾ ತಯಾರಿ ನಡೆಸುತ್ತಿದ್ದೇವೆ. ಇನ್ನೂ ಎಲ್ಲಾ ಕಡೆಗಳಿಂದಲೂ ಸಾರ್ವಜನಿಕರನ್ನು ಹೆಚ್ಚಾಗಿ ಸೇರಿಸಬೇಕಿದೆ. ಆದರೆ ನಾವು ಜನರನ್ನು ಸೇರಿಸುವ ಹೊಣೆಗಿಂತಲೂ ಅವರನ್ನು ಶಾಂತನೀಯವಾಗಿ ನೋಡಿಕೊಳ್ಳುವ ಜವಾಬ್ದಾರಿ ಹೆಚ್ಚಾಗಿರುತ್ತದೆ. ಏಕೆಂದರೆ ಮೋದಿ ಬರುತ್ತಾರೆಂದರೆ, ಜನರು ಕಿಕ್ಕಿರಿದು ಸೇರುತ್ತಾರೆ. ಅಲ್ಲದೇ ಹಾಲಿ ಎಂಪಿಗಳಿಗೆ ಟಿಕೆಟ್ ಕೈ ತಪ್ಪುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಆ ಬಗ್ಗೆ ನಾನು ಮಾತಾಡಲ್ಲ, ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದು ಮಾಹಿತಿ ನೀಡಿದರು.

 

You might also like
Leave A Reply

Your email address will not be published.