ಆಸ್ಕರ್‌ ಪ್ರಶಸ್ತಿ ಘೋಷಿಸಲು ಬೆತ್ತೆಲೆಯಾಗಿ ಬಂದ ನಟ – ಕಾರಣವೇನು ಗೊತ್ತೇ?

ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭವೆಂದರೆ ಸಾಕು ಎಡವಟ್ಟುಗಳ ಸರಮಾಲೆ ಕಣ್ಮುಂದೆ ಬಂದು ನಿಂತುಬಿಡುತ್ತದೆ. ಅದು ತೀರಾ ಕಾಮನ್ ಕೂಡ ಆಗಿಬಿಟ್ಟಿದೆ. ಇದುವರೆಗೆ ನಡೆದ ವಿಚಾರಗಳನ್ನು ಗಮನಿಸಿದರೆ ಶೇ.95 ರಷ್ಟು ವೈರಲ್ ಆಗುವುದರೊಂದಿಗೆ ವಿವಾದ ಸೃಷ್ಟಿ ಮಾಡಿದ್ದೇ ಹೆಚ್ಚು. ಅರೆ ಈ ಬಾರೀ ಏನಾಯಿತಪ್ಪ, ಅಂತೀರಾ? ಬನ್ನಿ ನೋಡುವ..!

ಪ್ರತಿಷ್ಠಿತ 96ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭವು ಈ ಬಾರಿ ಅಮೆರಿಕಾದ ಲಾಸ್ ಏಂಜಲೀಸ್ ನ ಡಾಲ್ಬಿ ಚಿತ್ರಮಂದಿರದಲ್ಲಿ ನಡೆಯಿತು. ಅತ್ಯಂತ ಕುತೂಹಲ ಮೂಡಿಸಿದ್ದ ನಾಮ ನಿರ್ದೇಶನ ಪಟ್ಟಿಯಲ್ಲಿ ಯಾರೆಲ್ಲ ಪ್ರಶಸ್ತಿ ಪಡೆಯಲಿದ್ದಾರೆ ಎನ್ನುವ ಸಹಜ ನಿರೀಕ್ಷೆ ಪ್ರತಿಯೊಬ್ಬರಲ್ಲೂ ಇದ್ದೇ ಇತ್ತು. ಏನೋ ನಡೆಯಲು ಹೋಗಿ, ಏನೋ ನಡೆಯಿತು ಎಂಬಂತೆ ಪುನಃ ಎಡವಟ್ಟು ಮಾಡುವ ಮೂಲಕ ಪ್ರೇಕ್ಷಕರ ನೀರಿಕ್ಷೆಗೆ ಬೀರುಗಾಳಿ ಬೀಸಿದ್ದಾರೆ..

ಸಾಮಾನ್ಯವಾಗಿ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪಟ್ಟಿ ಬಿಡುಗಡೆಯಾಗುವಾಗ, ಅತ್ಯುತ್ತಮ ಕಾಸ್ಟ್ಯೂಮ್ ಡಿಸೈನರ್ ಪ್ರಶಸ್ತಿಯನ್ನು ಘೋಷಣೆ ಮಾಡುವುದಕ್ಕಾಗಿ ಖ್ಯಾತ ಹಾಲಿವುಡ್ ನಟ ಡಬ್ಲುಡಬ್ಲುಇ ಸ್ಟಾರ್ ಜಾನ್ ಸೇನಾ ಅವರನ್ನು ವೇದಿಕೆಗೆ ಆಹ್ವಾನಿಸಲಾಯಿತು. ಪ್ರಶಸ್ತಿ ಘೋಷಿಸಬೇಕಾದವರೆ ಪ್ರೇಕ್ಷಕರು ಹಾಗೂ ನೆರೆದಿದ್ದವರಿಗೆ ಮುಜುಗೊರ ಉಂಟುಮಾಡುವುದರೊಂದಿಗೆ, ಹಾಸ್ಯಾಸ್ಪದಕ್ಕೆ ಒಳಗಾಗಿದ್ದಾರೆ. ಅಷ್ಟಕ್ಕೂ ಅವರು ಮಾಡಿದ್ದಾದರೂ ಏನು?

ಡಬ್ಲುಡಬ್ಲುಇ ಸ್ಟಾರ್ ಜಾನ್ ಸೇನಾ ಅವರು ವೇದಿಕೆಗೆ ಬರುವಾಗಲೇ ಬೆತ್ತಲೆಯಾಗಿ ಬಂದಿದ್ದು, ಸ್ಟೋರಿ ಬೋರ್ಡ್ ನಿಂದ ಖಾಸಗಿ ಅಂಗಾಂಗ ಮುಚ್ಚಿಕೊಂಡು ಮೈಕ್ ಮುಂದೆ ನಿಂತಿದ್ದಾರೆ. ನಂತರ ಅವರಿಗೆ ವೇದಿಕೆಯ ಮೇಲೆ ಡಿಸೈನರ್ ಬಟ್ಟೆ ತೊಡಿಸಲಾಗಿದೆ. ಇವರ ಈ ನಡೆ ಸಾಕಷ್ಟು ವಿರೋಧಕ್ಕೂ ಕಾರಣವಾಗಿದೆ.

The actor who came naked to announce the Oscar award - do you know the reason?

ಇನ್ನೂ ಈ ಬಾರಿಯ ಆಸ್ಕರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡವರ ಪಟ್ಟಿ ಇಲ್ಲಿದೆ:

1) ಅತ್ಯುತ್ತಮ ನಟ ಪ್ರಶಸ್ತಿ – ಓಪನ್ ಹೈಮರ್ ಸಿನಿಮಾಗಾಗಿ ಸಿಲಿಯನ್ ಮರ್ಫಿ
2) ಅತ್ಯುತ್ತಮ ನಟಿ ಪ್ರಶಸ್ತಿ – ಪೂರ್ ಥಿಂಗ್ಸ್ ಸಿನಿಮಾಗಾಗಿ ಎಮ್ಮಾ ಸ್ಟೋನ್
3) ಅತ್ಯುತ್ತಮ ಚಿತ್ರ ಪ್ರಶಸ್ತಿ – ಓಪನ್ ಹೈಮರ್ ಸಿನಿಮಾ
4) ಅತ್ಯುತ್ತಮ ನಿರ್ದೇಶಕ – ಕ್ರಿಸ್ಟೋಫರ್ ನೋಲನ್ (ಓಪನ್ ಹೈಮರ್ ಸಿನಿಮಾ)
5) ಅತ್ಯುತ್ತಮ ಪೋಷಕ ನಟ ಪ್ರಶಸ್ತಿ – ರಾಬರ್ಟ್ ಡೌನಿ ಜ್ಯೂ (ಓಪನ್ ಹೈಮರ್ ಚಿತ್ರ)
6) ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ – ಡೇವಿನ್ ಜಾಯ್ ರಾಂಡೋಲ್ಫ್ (ದಿ ಹೋಲ್ಡೋವರ್ಸ್ ಸಿನಿಮಾ)

The actor who came naked to announce the Oscar award - do you know the reason?

ಭಾರತಕ್ಕೆ ಒಲಿಯದ ಆಸ್ಕರ್:

ಕಳೆದ ಬಾರಿ ಭಾರತಕ್ಕೆ ಎರಡು ಆಸ್ಕರ್ ಪ್ರಶಸ್ತಿ ಬಂದಿದ್ದವು. ಆರ್.ಆರ್.ಆರ್ ಸಿನಿಮಾದ ನಾಟು ನಾಟು ಹಾಡಿಗೆ ಆಸ್ಕರ್ ಬಂದಿದ್ದರೆ, ದಿ ಎಲಿಫೆಂಟ್ ವಿಸ್ಪರರ್ಸ್ ಕಿರುಚಿತ್ರವೂ ಆಸ್ಕರ್ ಪ್ರಶಸ್ತಿ ಪಡೆದಿತ್ತು. ಈ ಬಾರಿ ಭಾರತದ ಯಾವುದೇ ಚಿತ್ರಕ್ಕೆ ಅಥವಾ ಡಾಕ್ಯುಮೆಂಟರಿಗೆ ಪ್ರಶಸ್ತಿ ಬಾರದೇ ನಿರಾಸೆ ಮೂಡಿಸಿದೆ. ಸಾಕ್ಷ್ಯಚಿತ್ರ ವಿಭಾಗದಲ್ಲಿ ಟು ಕಿಲ್ ಎ ಟೈಗರ್ ಸಾಕ್ಷ್ಯ ಚಿತ್ರವಿತ್ತು. ಆದರೆ, ಅದಕ್ಕೆ ಈ ಬಾರಿ ಪ್ರಶಸ್ತಿ ಬಂದಿಲ್ಲ.

You might also like
Leave A Reply

Your email address will not be published.