ಪ್ಯಾರಿಸ್ ಒಲಿಂಪಿಕ್ : ಅರ್ಹತಾ ಪಂದ್ಯದಿಂದ ಹೊರಬಿದ್ದ ಬಜರಂಗ್ ಪೂನಿಯಾ!

ಕಳೆದ ಬಾರಿ ಕುಸ್ತಿಪಟುಗಳ ಪ್ರತಿಭಟನೆಯಲ್ಲಿ ಮಂಚೂಣಿಯಲ್ಲಿದ್ದ ಬಜರಂಗ್ ಪೂನಿಯಾ ಅವರು ಪ್ಯಾರಿಸ್ ಒಲಂಪಿಕ್‌ಗೆ ನಡೆಯುತ್ತಿದ್ದ ಅರ್ಹತಾ ಪಂದ್ಯಗಳ ಸಾಲಿನಿಂದ ಅವರಿಗಿಂತ ಕಿರಿಯ ಕುಸ್ತಿಪಟುವಿನ ಎದುರು ಸೋತು ಹೊರಹೋಗಿದ್ದಾರೆ. ಪುರುಷರ ಫ್ರೀ ಸ್ಟೈಲ್ 65kg ವಿಭಾಗದ ಸೆಮಿಫೈನಲ್ ನಲ್ಲಿ ರೋಹಿತ್ ಕುಮಾರ್ ಎದುರು ಪೂನಿಯಾ ಅವರು 9-1 ಅಂತರಗಳಿಂದ ಹೀನಾಯವಾಗಿ ಸೋಲನ್ನನುಭವಿಸಿದರು.‌ ಮೊದಲ ಸುತ್ತಿನಲ್ಲೇ ರವೀಂದರ್ ಎದುರು ಕೂದಲೆಳೆಯ ಅಂತರದಲ್ಲಿ ಸೋಲುವುದರಿಂದ ಪಾರಾಗಿದ್ದರು.

ಅರ್ಹತಾ ಪಂದ್ಯದಿಂದ ಹೊರ ಬೀಳುತ್ತಿದ್ದಂತೆ ಉದ್ದೀಪನ ಮದ್ದು ತಡೆ ಸಂಸ್ಥೆ ಆಧಿಕಾರಿಗಳು ಡೋಪ್ ಪರೀಕ್ಷೆಗಾಗಿ ಮಾದರಿಯನ್ನು ಸಂಗ್ರಹಿಸಲು ಪ್ರಯತ್ನಿಸಿದರೂ ಮೂರನೇ ಮತ್ತು ನಾಲ್ಕನೇ ಸ್ಥಾನದ ಪಂದ್ಯಗಳಿಗೂ ಕಾಯದೇ ತರಾತುರಿಯಲ್ಲಿ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (SAI) ತೊರೆದರು.‌ ಇನ್ನು ಈ ಸಮಯದಲ್ಲಿ ಬಜರಂಗ್ ಅವರ ಪತ್ನಿ ಕುಸ್ತಿಪಟುಗಳ ಪ್ರತಿಭಟನೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಮೋದಿಯವರನ್ನು ಗುರಿಯಾಗಿಸಿಕೊಂಡು ಹಾಕಿದ ಇನ್ಸ್ಟಾಗ್ರಾಮ್ ಸ್ಟೋರಿ ವೈರಲ್ ಆಗುತ್ತಿದ್ದು ಅದರಲ್ಲಿ, ‘ನಾವು ನಿಮ್ಮನ್ನು ತುಳಿಯುತ್ತೇವೆ ಮೋದಿ, ಭ್ರಮೆಯಲ್ಲಿ ಬದುಕಬೇಡಿ’ ಎಂದು ಹಾಕಲಾಗಿತ್ತು. ಈಗ ಕೆಲವರು ಮತ್ತೆ ಅದನ್ನು ಪೋಸ್ಟ್ ಮಾಡುವ ಮೂಲಕ ಮುನ್ನಲೆಗೆ ತಂದಿದ್ದು ಬಜರಂಗ್ ಅರ್ಹತಾ ಸುತ್ತಿನಿಂದ ಹೊರಬಿದ್ದಿದ್ದಾರೆ ಇತ್ತ ಮೋದಿಯವರು ದೊಡ್ಡ ಮಟ್ಟದ ಗೆಲುವಿನೊಂದಿಗೆ ಮತ್ತೆ ಅಧಿಕಾರಕ್ಕೇರಲು ಸಿದ್ಧತೆಮಾಡಿದ್ದಾರೆ ಎಂದು ಕೌಂಟರ್ ನೀಡಿದ್ದಾರೆ.

Paris Olympic: Bajrang Poonia out of the qualifying match!

ಕಳೆದವರ್ಷ ಸಾಕ್ಷಿ‌ಮಲಿಕ್, ವಿನೇಶ್ ಪೋಗಟ್, ಮತ್ತು ಬಜರಂಗ್ ಪೂನಿಯಾ ಸೇರಿದಂತೆ ಇತರೇ ರೆಬೆಲ್ ಕುಸ್ತಿ ಪಟುಗಳು ವ್ರೆಸ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ (WFI) ಹಾಗೂ ಅದರ ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಶರ್ಮಾ ವಿರುದ್ಧ ಒಂದು ವರ್ಷಕ್ಕೂ ಹೆಚ್ಚು ಕಾಲ ಲೈಂಗಿಕ ಕಿರುಕುಳದ ಆರೋಪ ಹೊರಿಸಿ ಪ್ರತಿಭಟನೆ ನಡೆಸಿದರು. ಕಾಲಾನಂತರ ಬ್ರಿಜ್ ಭೂಷ್ ಅವರು ಅವಧಿ ಮುಕ್ತಾಯಗೊಂಡು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಬಳಿಕವೂ ಈ ಪ್ರತಿಭಟನೆ ಮುಂದುವರೆದಿತ್ತು.

ಅದಾದ ನಂತರ WFI ಗೆ ಹೊಸ ಅಧ್ಯಕ್ಷರನ್ನು ಆರಿಸಲು ಚುನಾವಣೆ ನಡೆದಾಗ ಆಯ್ಕೆಯಾದ ವ್ಯಕ್ತಿ ಬ್ರಿಜ್ ಭೂಷಣ್ ಅವರ ಆಪ್ತ ಎಂದು ಹೇಳಿಕೊಂಡು ಬಂಡಾಯವೆದ್ದಿದ್ದ ಕುಸ್ತಿಪಟುಗಳು ಮತ್ತೆ ಪ್ರತಿಭಟನೆ ನಡೆಸಲಾಗಿ ಅಂತಿಮವಾಗಿ ಕೇಂದ್ರ ಕ್ರೀಡಾ ಸಚಿವಾಲಯವು ಕುಸ್ತಿ ಫೆಡರೇಶನ್ ಆಫ್ ಇಂಡಿಯಾವನ್ನು ಅಮಾನತುಗೊಳಿಸಿದ್ದರಿಂದ ಈ ವಿಷಯ ತಾತ್ಕಾಲಿಕವಾಗಿ ಅಂತ್ಯ ಗೊಂಡಿತ್ತು.

You might also like
Leave A Reply

Your email address will not be published.