ಬೆಂಗಳೂರು ಟ್ರಾಫಿಕ್‌ ಮಧ್ಯೆಯೇ ಟೈಮ್‌ ಮ್ಯಾನೇಜ್ಮೆಂಟ್‌ ಮಾಡಿದ ಗೃಹಿಣಿ – ವೈರಲ್‌ ಆಯ್ತು ಈ ವಿಡಿಯೋ

ಐಟಿ-ಬಿಟಿ ಕಂಪನಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುವ ರಾಜಧಾನಿಯಲ್ಲಿ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಎಂಬುದೇ ಇಲ್ಲ. ನಮ್ಮ ಟ್ರಾಫಿಕ್ ಪೊಲೀಸರು ಕೂಡ ಅದೆಷ್ಟೋ ಪ್ರಮುಖ ಉಪಾಯಗಳ ಪ್ರಯೋಗಗಳನ್ನು ಮಾಡಿದ್ದಾದರೂ, ದಿನದಿಂದ ದಿನಕ್ಕೆ ವಾಹನಗಳ ದಟ್ಟನೆ ಏರುತ್ತಲೇ ಇದೆಯೇ ಹೊರತು ಕಡಿಮೆಯಾಗುವ ಯಾವ ಲಕ್ಷಣಗಳು ಕಾಣಿಸುತ್ತಿಲ್ಲ. ನಮ್ ಜನರೋ ಇದ್ರಿಂದ ಬೇಸತ್ತು ಹೋಗಿದ್ದಾರೆ. ಇನ್ನೂ ಕೆಲಸಕ್ಕೆ ಹೋಗುವ ಮಹಿಳೆಯರಂತೂ ಆಫೀಸ್ ಮುಗಿಸಿ ಮನೆಗೆ ಬರುವುದರೊಳಗೆ ತಡವಾಗಿ ಹೋಗಿರುತ್ತದೆ. ಮನೆ ಕೆಲಸ ಬಿಡಿ, ಒಂಚೂರು ರೆಸ್ಟ್ ಮಾಡೋಕು ಅವರಿಗೆ ಟೈಮ್ ಸಿಗೋದಿಲ್ಲ.

ಇದ್ರ ನಡುವೆಯೂ ಇಲ್ಲೊಬ್ರು ಮಹಿಳೆ ನಾನು ಈ ಟ್ರಾಫಿಕ್ ನಲ್ಲಿ ಸುಮ್ಮನೆ ಕುಳಿತು ಸಮಯ ವ್ಯರ್ಥ ಮಾಡುವ ಬದಲು ಏನಾದ್ರೂ ಕೆಲಸ ಮಾಡ್ಬೋದಲ್ವಾ ಎನ್ನುತ್ತಾ ಟ್ರಾಫಿಕ್ ಮಧ್ಯೆ ನಡು ರಸ್ತೆಯಲ್ಲಿಯೇ ಮಾರುಕಟ್ಟೆಯಿಂದ ತಂದ ಬಟಾಣಿಯ ಸಿಪ್ಪೆ ಬಿಡಿಸುತ್ತಿದ್ದ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಏನಿದೆ ಎಂಬುದನ್ನು ತಿಳ್ಕೊಳೋಣ ಬನ್ನಿ!

 

View this post on Instagram

 

A post shared by ghantaa (@ghantaa)

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು ರಸ್ತೆ ಮಧ್ಯೆ ನಿಂತು ಬಟಾಣಿ ಸಿಪ್ಪೆ ಬಿಡಿಸುತ್ತಿರುವ ದೃಶ್ಯವನ್ನು ಕಾಣಬಹುದು. @ghantaa ಎಂಬ ಹೆಸರಿನ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, “ಟೈಮ್ ಮ್ಯಾನೆಜ್ಮೆಂಟ್” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.

ವೈರಲ್ ವಿಡಿಯೋದಲ್ಲಿ ಯಾವುದೋ ಒಂದು ನಗರದಲ್ಲಿ ಸಂಜೆ ಹೊತ್ತಿನಲ್ಲಿ ಫುಲ್ ಟ್ರಾಫಿಕ್ ಜಾಮ್ ಆಗಿರುತ್ತದೆ. ಅಲ್ಲಿದ್ದ ವಾಹನ ಸವಾರರೆಲ್ಲರೂ ಅಬ್ಬಬ್ಬಾ ಈ ಟ್ರಾಫಿಕ್ ಯಾವಾಗ ಕ್ಲೀಯರ್ ಆಗುತ್ತೋ, ನಾವು ಯಾವಾಗ ಮನೆಗೆ ಹೋಗಿ ತಲುಪುತ್ತೆವೆಯೋ ಎಂದು ತಲೆ ಬಿಸಿ ಮಾಡಿಕೊಂಡು ಕೂತಿರುತ್ತಾರೆ. ಈ ಮಧ್ಯೆ ತಲೆ ಬಿಸಿ ಮಾಡಿಕೊಂಡ್ರೆ ಏನ್ ಪ್ರಯೋಜನ, ಟೈಮ್ ಸೇವ್ ಮಾಡಲು ಇಲ್ಲೇ ಏನಾದ್ರೂ ಮನೆ ಕೆಲಸ ಮಾಡ್ಬೋದಲ್ವಾ ಎನ್ನುತ್ತಾ ಮಹಿಳೆಯೊಬ್ಬರು ನಡುರಸ್ತೆಯಲ್ಲಿ ತಮ್ಮ ಸ್ಕೂಟಿಯ ಮೇಲೆ ಮಾರುಕಟ್ಟೆಯಿಂದ ತಂದಂತಹ ಬಟಾಣಿಯನ್ನಿಟ್ಟು, ಅಲ್ಲೇ ನಿಂತುಕೊಂಡು ಬಟಾಣಿ ಸಿಪ್ಪೆ ಸುಳಿಯುವಂತಹ ದೃಶ್ಯವನ್ನು ಕಾಣಬಹುದು.

ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 2.3 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 80 ಸಾವಿರಕ್ಕೂ ಅಧಿಕ ಲೈಕ್‌ʼಗಳನ್ನು ಪಡೆದುಕೊಂಡಿದೆ. ಅನೇಕರು ಈ ದೃಶ್ಯ ವಾಸ್ತವವಾಗಿ ತಾಯಂದಿರ ಕಠಿಣ ಪರಿಶ್ರಮ ಮತ್ತು ಅವರಿಗಿರುವ ಕೆಲಸದ ಒತ್ತಡದ ಪ್ರಮಾಣವನ್ನು ತೋರಿಸುತ್ತದೆ. ತಾಯಿ ಯಾವಾಗಲೂ, ಎಲ್ಲಿದ್ದರೂ ತನ್ನ ಕುಟುಂಬಕ್ಕಾಗಿಯೇ ಶ್ರಮಿಸುತ್ತಾಳೆ ಎಂದು ಹೇಳಿದ್ದಾರೆ.

You might also like
Leave A Reply

Your email address will not be published.