ಭಗವಾನ್ ರಾಮನಿಲ್ಲದೆ ಭಾರತವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ – ಅಮಿತ್ ಶಾ

ಅಯೋಧ್ಯೆಯ ರಾಮಮಂದಿರದ ಪ್ರತಿಷ್ಠಾಪನೆಯ ದಿನವಾದ ಜನವರಿ 22 ಭಾರತದ ಹೊಸ ಪ್ರಯಾಣದ ಆರಂಭ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಲೋಕಸಭೆಯಲ್ಲಿ ತಿಳಿಸಿದ್ದಾರೆ.

ಲೋಕಸಭೆಯಲ್ಲಿ ರಾಮಮಂದಿರ ನಿರ್ಮಾಣ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಗವಾನ್ ರಾಮನಿಲ್ಲದೆ ಭಾರತವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಜನವರಿ 22 ರಿಂದಲೇ ಭವ್ಯ ಭಾರತದ ಆರಂಭವಾಗಿದೆ ಎಂದರು.

India cannot be imagined without Lord Rama - Amit Shah

ಇನ್ನೂ ರಾಮನಿಲ್ಲದ ದೇಶವನ್ನು ಕಲ್ಪಿಸಿಕೊಳ್ಳುವವರು ನಮ್ಮ ದೇಶದ ಬಗೆಗೆ ಚೆನ್ನಾಗಿ ಅರಿತುಕೊಂಡಿಲ್ಲ ಮತ್ತು ಅವರು ವಸಾಹತುಶಾಹಿ ದಿನಗಳನ್ನು ಪುನಃ ಪ್ರತಿನಿಧಿಸುತ್ತಾರೆ. ಇತಿಹಾಸವನ್ನು ತಿಳಿಯದವರು ಎಂದಿಗೂ ಗೆಲ್ಲುವುದಿಲ್ಲ. ಇಂತಹವರಿಗೆ ಸೋಲೆಂಬುದು ಕಟ್ಟಿಟ್ಟ ಬುತ್ತಿ.

ರಾಮಮಂದಿರಕ್ಕಾಗಿ ಪ್ರಧಾನಿ ಅವರು ಸಾಕಷ್ಟು ಸೇವೆಯನ್ನು ಸಲ್ಲಿಸಿದ್ದಾರೆ. ಮೋದಿ ಅವರ ನೇತೃತ್ವದಲ್ಲಿ 300 ವರ್ಷಗಳ ಕನಸು ನನಸಾಯಿತು ಮತ್ತು ಪಿಎಂ ಮೋದಿ ಮತ್ತು ಬಿಜೆಪಿ ಅವರು ಭರವಸೆ ನೀಡಿದ್ದನ್ನು ಈಡೇರಿಸಿದ್ದಾರೆ ಎಂದು ಹೇಳಿದರು.

ರಾಮಮಂದಿರ ಆಂದೋಲನವನ್ನು ನಿರ್ಲಕ್ಷಿಸುವ ಮೂಲಕ ಈ ದೇಶದ ಇತಿಹಾಸವನ್ನು ಯಾರೂ ಓದಲು ಸಾಧ್ಯವಿಲ್ಲ. 1528 ರಿಂದ, ಪ್ರತಿ ಪೀಳಿಗೆಯು ಈ ಚಳವಳಿಯನ್ನು ಯಾವುದಾದರೂ ಒಂದು ರೂಪದಲ್ಲಿ ನೋಡಿದೆ ಎಂದರು.

ಚರ್ಚೆಯನ್ನು ಆರಂಭಿಸಿದ ಸತ್ಯಪಾಲ್ ಸಿಂಗ್ ರಾಮ ಇರುವಲ್ಲಿ ಧರ್ಮವಿದೆ. ಧರ್ಮವನ್ನು ನಾಶಪಡಿಸುವವರನ್ನು ಕೊಲ್ಲಲಾಗುತ್ತದೆ ಮತ್ತು ಧರ್ಮವನ್ನು ರಕ್ಷಿಸುವವರನ್ನು ರಕ್ಷಿಸಲಾಗುತ್ತದೆ. ಕಾಂಗ್ರೆಸ್ ಶ್ರೀರಾಮನನ್ನು ತಿರಸ್ಕರಿಸಿದ್ದರಿಂದಲೇ ಇಂದು ಈ ಪರಿಸ್ಥಿತಿಯಲ್ಲಿದೆ ಎಂದರು.

You might also like
Leave A Reply

Your email address will not be published.