ಭಾರತ ರತ್ನ – ಮೋದಿ ಸರ್ಕಾರದ ಜಾಣ ನಡೆ

ಮಾಜಿ ಪ್ರಧಾನಿ ನರಸಿಂಹರಾವ್‌, ಚೌಧರಿ ಚರಣ್‌ ಸಿಂಗ್‌ ಮತ್ತು ಎಂ.ಎಸ್‌. ಸ್ವಾಮಿನಾಥನ್‌ ಅವರಿಗೆ ಭಾರತ ರತ್ನ ಘೋಷಣೆಯಾದ ಬೆನ್ನಲ್ಲೇ, ದೇಶದ ಅತ್ಯುನ್ನತ ನಾಗರಿಕ ಘೋಷಣೆಯು ಆಗಿದೆ. ಇದರ ಹಿಂದೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮುತ್ಸದ್ಧಿತನದ ಕುರಿತು ನಾನಾ ವಿಶ್ಲೇಷಣೆಗಳು ಕೇಳಿಬರುತ್ತಿದೆ.

ಭಾರತ ರತ್ನ ಪ್ರಶಸ್ತಿ ಹಿಂದೆ ಅಡಗಿದೆ 5M ಮಂತ್ರ

ಹೌದು! ಈ ವರ್ಷ ಘೋಷಿಸಿರುವ 5 ಭಾರತ ರತ್ನಗಳಲ್ಲಿ 5ಎಂ ಮಂತ್ರ ಅಡಗಿದೆ. ಅವುಗಳೆಂದರೆ,

1) ಮಂಡಲ್‌
2) ಮಂದಿರ
3) ಮಾರ್ಕೆಟ್‌
4) ಮಿಲೆಟ್‌
5) ಮಂಡಿ

ಮಂಡಲ್‌ ಆಯೋಗದ ವರದಿಯಂತೆ ಮೀಸಲಾತಿಗೆ ಹೋರಾಡಿದ ಕರ್ಪೂರಿ ಠಾಕೂರ್‌, ರಾಮಮಂದಿರಕ್ಕಾಗಿ ಹೋರಾಡಿದ ಅಡ್ವಾಣಿ, ಮಾರುಕಟ್ಟೆಯನ್ನು ಜಾಗೀಕರಣಗೊಳಿಸಿದ ನರಸಿಂಹರಾವ್‌, ಮಿಲೆಟ್‌ಗಳಿಗೆ ಮಾನ್ಯತೆ ದೊರಕಿಸಿದ ಸ್ವಾಮಿನಾಥನ್‌, ಕೃಷಿ ಮಾರುಕಟ್ಟೆಗಳ ಸುಧಾರಣೆಗೆ ಕಾರಣವಾದ ಚರಣ ಸಿಂಗ್‌ ಅವರು ಭಾರತ ರತ್ನ ಪಡೆದಿದ್ದಾರೆ.

ಮೂರು ಗಣ್ಯರಿಗೆ ‘ಭಾರತ ರತ್ನ’ ಘೋಷಣೆ ಹಿಂದಿನ ಮೋದಿ ಲೆಕ್ಕಾಚಾರ – ಏನದು?

1) ಸ್ವಾಮಿನಾಥನ್‌:

ದೇಶದ ಹಸಿರು ಕ್ರಾಂತಿಯ ಹರಿಕಾರ ಎಂಬ ಹಿರಿಮೆ ಹೊಂದಿರುವ ಸ್ವಾಮಿನಾಥನ್‌ ಅವರಿಗೆ ಅತ್ಯುನ್ನತ ನಾಗರಿಕ ಗೌರವ ಸಲ್ಲಿಕೆಯೊಂದಿಗೆ ಕೃಷಿ ವಲಯ, ರೈತಾಪಿ ವರ್ಗ ಮೊದಲು ಎಂಬ ಸಂದೇಶವನ್ನು ದೇಶಕ್ಕೆ ರವಾನಿಸುವ ಕೆಲಸವನ್ನು ಮೋದಿ ಸರ್ಕಾರ ಮಾಡಿದೆ.

Swaminathan

2) ನರಸಿಂಹರಾವ್‌:

ನರಸಿಂಹರಾವ್‌ ಕಾಂಗ್ರೆಸ್‌ ನ ಕಟ್ಟಾಳಾಗಿದ್ದವರು. ಅವರದ್ದೇ ಪಕ್ಷದಿಂದ ಪ್ರಧಾನಿಯಾದವರು. ದೇಶದ ಆರ್ಥಿಕ ಕ್ರಾಂತಿಯ ಹರಿಕಾರ ಕೂಡಾ ಹೌದು. ಆದರೆ ಕಡೆಯ ಸಮಯದಲ್ಲಿ ಪಕ್ಷ ಅವರನ್ನು ಅಗೌರವವಾಗಿ ನಡೆಸಿಕೊಂಡಿತ್ತು. ಯುಪಿಎ ಸರ್ಕಾರದ ಅವಧಿಯಲ್ಲಿ ಅವರಿಗೆ ಯಾವುದೇ ಗೌರವ ನೀಡಿರಲಿಲ್ಲ. ಆದರೆ ಇದೀಗ ಪಕ್ಷಾತೀತವಾಗಿ ರಾವ್‌ ಅವರನ್ನು ಗುರುತಿಸಿ ಮೋದಿ ಸರ್ಕಾರ ರಾಜಕೀಯ ಮುತ್ಸದ್ಧಿತನ ಪ್ರದರ್ಶಿಸಿದೆ.

ಜೊತೆಗೆ ಉತ್ತರ – ದಕ್ಷಿಣ ವಿಭಜನೆಯ ಮಾತುಗಳು ಭಾರೀ ಚರ್ಚೆಗೆ ಗ್ರಾಸವಾಗಿರುವ ಹೊತ್ತಿನಲ್ಲೇ ಈ ಪ್ರಶಸ್ತಿ ಪ್ರಕಟ ಮಾಡಿರುವುದು, ಮೋದಿ ಸರ್ಕಾರ ದಕ್ಷಿಣ ಭಾರತವನ್ನು ಕಡೆಗಣಿಸುತ್ತಿದೆ ಎಂಬ ಚರ್ಚೆಗೆ ಬ್ರೇಕ್‌ ಹಾಕುವ ಉದ್ದೇಶವನ್ನೂ ಹೊಂದಿದೆ ಎನ್ನಲಾಗಿದೆ.

Narasimha Rao

3) ಚರಣ್‌ಸಿಂಗ್‌:

ಚರಣ್‌ಸಿಂಗ್‌, ಜಾಟ್‌ ಸಮುದಾಯದ ಪ್ರಮುಖ ನಾಯಕ. ಸ್ವಾತಂತ್ರ್ಯ ಹೋರಾಟಗಾರ ಕೂಡಾ ಹೌದು. ಜನತಾ ಪಕ್ಷದಿಂದ ಸಂಸತ್ತಿಗೆ ಕಾಂಗ್ರೆಸ್‌ ಬೆಂಬಲದೊಂದಿಗೆ ಪ್ರಧಾನಿಯಾಗಿದ್ದರು. ಹೀಗೆ ಅನ್ಯಪಕ್ಷದ ರಾಜಕೀಯ ನಾಯಕರ ಗೌರವಿಸುವ ಮೂಲಕ ಮೋದಿ ಸರ್ಕಾರ ರಾಜಕೀಯ ಮುತ್ಸದ್ಧಿತನ ಮತ್ತು ಚಾಣಾಕ್ಷತನ ತೋರಿದೆ ಎನ್ನಲಾಗಿದೆ. ಉತ್ತರಪ್ರದೇಶದಲ್ಲಿ ಜಾಟ್‌ ಸಮುದಾಯದ ಅತ್ಯಂತ ಪ್ರಭಾವಿ.

Charan Singh

ಇನ್ನೂ ಚರಣ್‌ಸಿಂಗ್‌ ಸ್ಥಾಪಿಸಿದ್ದ ರಾಷ್ಟ್ರೀಯ ಲೋಕದಳಕ್ಕೆ ಅವರ ಮೊಮ್ಮಗ ಜಯಂತ್‌ ಸಿಂಗ್‌ ಇದೀಗ ಅಧ್ಯಕ್ಷ. ಕಳೆದ ಬಾರಿ ಸಮಾಜವಾದಿ ಪಕ್ಷದ ಜೊತೆಗಿದ್ದ ಜಯಂತ್‌ ಇದೀಗ ಬಿಜೆಪಿ ಜೊತೆ ಹೆಜ್ಜೆ ಹಾಕಲು ಸಜ್ಜಾಗಿದ್ದಾರೆ. ಈ ಬೆಳವಣಿಗೆ ಮುಂಬರುವ ಲೋಕಸಭಾ ಚುನಾವಣೆಯ ಮೇಲೆ ಪರಿಣಾಮ ಬೀರಿದೆ.

You might also like
Leave A Reply

Your email address will not be published.