ಪಾಸ್ ಪೋರ್ಟ್ ಕಳೆದುಹೋದ್ರೆ ಏನ್ ಮಾಡ್ತಿರಿ? ಎಷ್ಟು ಬಗೆಯ ಪಾಸ್ ಪೋರ್ಟ್ ಗಳಿವೆ? – ನಿಮಗಿದು ಗೊತ್ತೆ?

ನೀವು ಬೇರೆ ದೇಶಕ್ಕೆ ಪ್ರಯಾಣಿಸಲು ಅಗತ್ಯವಾಗಿ ಬೇಕಾಗಿರುವ ದಾಖಲೆ ಅಂದ್ರೆ ಪಾಸ್ ಪೋರ್ಟ್. ಅಪ್ಲೇ ಮಾಡೋದು ಏನು ಸುಲಭದ ಮಾತೇ? ಅಬ್ಬಾ, ಏನೇನೋ ಮಾಡಿ ಪಾಸ್ ಪೋರ್ಟ್ ಕೈಗೆ ಸೇರಿದ ಮೇಲೆ ಒಂದು ವೇಳೆ ಕಳೆದೋದ್ರೆ…?

ನಮ್ ಆಧಾರ್, ವೋಟರ್, ಪಾನ್ ಕಾರ್ಡ್ ಮಿಸ್ ಆದ್ರೆನೆ ಉರಿಯೋ ಬೆಂಕಿಗೆ ತುಪ್ಪ ಸುರಿದಂಗೆ ಎದುರಾದವರ ಮೇಲೆಲ್ಲ ಎಗರಾಡ್ತಿವಿ. ಅಂತದ್ರಲ್ಲಿ ಪಾಸ್ ಪೋರ್ಟ್ ಕಳೆದೋದ್ರಂತು ಕೇಳ್ಬೇಕೆ? ಆದ್ರು ಸುಧಾರಿಸ್ಕೊಳಿ, ಯಾಕಂದ್ರೆ ಅದಕ್ಕೆ ಒಳ್ಳೆ ಉಪಾಯ ನಾವಿಲ್ಲಿ ಕೊಡ್ತಿದ್ದಿವಿ. ಸೋ ಜಾಸ್ತಿ ಚಿಂತೆ ಮಾಡ್ದೆ ಪಾಸ್‌ಪೋರ್ಟ್‌ಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಎದುರಾದ್ರು ಹೀಗೆ ಮಾಡಿ ಸಾಕು.

ನೀವು ವಿದೇಶದ ಪ್ರವಾಸದಲ್ಲಿದ್ದು, ನಿಮ್ಮ ಪಾಸ್ಪೋರ್ಟ್ ಏನಾದ್ರು ಕಳೆದುಹೋದರೆ ಗಾಬರಿಗೊಳಗಾಗದೆ ತಕ್ಷಣ ಹತ್ತಿರದ ಪೊಲೀಸ್ ಠಾಣೆ, ಪಾಸ್ಪೋರ್ಟ್ ಕಚೇರಿ ಅಥವಾ ಭಾರತೀಯ ರಾಯಭಾರಿ ಕಚೇರಿಗೆ ಹೋಗಿ ದೂರು ನೀಡಿ. ನಕಲಿ ಪಾಸ್ಪೋರ್ಟ್ ನೀಡಲು ಅಸಾಧ್ಯವಾದರೂ, ಹೊಸ ಪಾಸ್ಪೋರ್ಟ್ ಸಂಖ್ಯೆ ಹೊಂದಿರುವಂತಹ ಪಾಸ್ಪೋರ್ಟ್ ಅನ್ನು ನೀವು ಪಡೆಯುತ್ತೀರಿ.

ಪಾಸ್ಪೋರ್ಟ್ನ ‘ಮರು-ವಿತರಣೆ’ಗೆ ನೀವು ಅರ್ಜಿಯನ್ನು ಸಲ್ಲಿಸಬಹುದಾದ ಅವಕಾಶಗಳು ಇದಾವೆ. ಅರ್ಜಿ ನಮೂನೆ ಜೊತೆಗೆ ಸಲ್ಲಿಸಲು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ನಿಮ್ಮ ಬಳಿ ಇದಾವ ಅನ್ನೋದನ್ನು ಖಚಿತಪಡಿಸಿಕೊಳ್ಳಿ.

ಪಾಸ್ ಪೋರ್ಟ್ ಕಳುವಾದಾಗ ತಕ್ಷಣಕ್ಕೆ ತೆಗೆದುಕೊಳ್ಳುವ ಕ್ರಮಗಳೇನು?

1. ಪಾಸ್ಪೋರ್ಟ್ ಕಳುವಾದರೆ ಹತ್ತಿರದ ಪೊಲೀಸ್ ಠಾಣೆಯಲ್ಲಿ ನಿಮ್ಮ ಪಾಸ್ಪೋರ್ಟ್ಗಳ ಪ್ರತಿಯೊಂದಿಗೆ ಎಫ್ಐಆರ್ ದಾಖಲಿಸಬೇಕು.
2. ಒಂದು ವೇಳೆ ಪೊಲೀಸ್‌ ಠಾಣೆಗೆ ದೂರು ನೀಡಿಲ್ಲದಿದ್ದರೆ, ನೀವು ಹತ್ತಿರದ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ (RPO) ಯೊಂದಿಗೆ ಅಪಾಯಿಂಟ್‌ಮೆಂಟ್ ಕಾಯ್ದಿರಿಸಿ.
3. ವಿಳಾಸದ ಪುರಾವೆ, ಆಧಾರ್ ಕಾರ್ಡ್ ಮತ್ತು ಜನನ ಪ್ರಮಾಣಪತ್ರ ಸೇರಿದಂತೆ ಎಲ್ಲಾ ದಾಖಲೆಗಳು ಇದಾವ ಎಂದು ಖಚಿತಪಡಿಸಿಕೊಳ್ಳಿ.
4. ಬಳಕೆದಾರರು ಅಧಿಕೃತ ಪಾಸ್‌ಪೋರ್ಟ್ ಸೇವಾ ವೆಬ್‌ಸೈಟ್ ಮೂಲಕ ಆನ್‌ಲೈನ್ ಅಪ್ಲಿಕೇಶನ್ ಪ್ರಕ್ರಿಯೆಗೆ ಹೋಗಬಹುದು.
5. ನಿಮ್ಮ ನೋಂದಾಯಿತ ಐಡಿಯೊಂದಿಗೆ ಲಾಗ್ ಇನ್ ಮಾಡಿ ಮತ್ತು ‘ತತ್ಕಾಲ್’ ಆಯ್ಕೆಯನ್ನು ಸಹ ಆಯ್ಕೆ ಮಾಡಿಕೊಳ್ಳಬಹುದು.
6. ಕಳೆದುಹೋದ ಪಾಸ್‌ಪೋರ್ಟ್ಗಳಿಗೆ ಸಂಸ್ಕರಣಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂಬುದು ತಿಳಿದಿರಲಿ.

4 ಬಗೆಯ ಪಾಸ್ ಪೋರ್ಟ್ ಬಗೆಗೆ ನಿಮಗೆ ತಿಳಿದಿದೆಯೇ?

ನಮ್ಮ ಭಾರತದಲ್ಲಿ ಎಷ್ಟು ರೀತಿಯ ಪಾಸ್ ಪೋರ್ಟ್‌ಗಳನ್ನು ನೀಡಲಾಗುತ್ತದೆ ಎಂಬುದರ ಬಗ್ಗೆ ನಿಮಗೇನಾದರೂ ಮಾಹಿತಿ ಇದೆಯೇ? ಪಾಸ್‌ಪೋರ್ಟ್‌ನಲ್ಲಿ ಕೇವಲ 1 ಬಗೆಯ ಪಾಸ್‌ಪೋರ್ಟ್‌ ಮಾತ್ರ ಇಲ್ಲ ಬದಲಾಗಿ 4 ಬಗೆಯ ಪಾಸ್ ಪೋರ್ಟ್‌ಗಳಿವೆ. ಅವುಗಳು ಯಾವುವು

passport

1. ಸಾಮಾನ್ಯ ಪಾಸ್‌ಪೋರ್ಟ್ (Ordinary Passports):

ಹೆಸರೇ ಸೂಚಿಸುವಂತೆ ಇದೊಂದು ಸಾಮಾನ್ಯ ಪಾಸ್‌ಪೋರ್ಟ್‌ ಆಗಿದ್ದು, ನೀಲಿ ಬಣ್ಣದಿಂದ ಕೂಡಿರುತ್ತದೆ. ಈ ಪಾಸ್ ಪೋರ್ಟ್ ಅನ್ನು ಸಾಮಾನ್ಯವಾಗಿ ಎಲ್ಲರೂ ನೋಡಿರುತ್ತೀರಿ. ವಲಸೆ ಮತ್ತು ಕಸ್ಟಮ್ಸ್ ಅಧಿಕಾರಿಗಳಿಗೆ ಈ ಪಾಸ್‌ಪೋರ್ಟ್‌ ನೀಡಲಾಗುತ್ತದೆ. ಉನ್ನತ ಹುದ್ದೆಯಲ್ಲಿರುವ ಭಾರತದ ಸರ್ಕಾರಿ ಅಧಿಕಾರಿಗಳ ನಡುವೆ ವ್ಯತ್ಯಾಸವನ್ನು ಈ ಪಾಸ್‌ಪೋರ್ಟ್‌ ತಿಳಿಸುತ್ತದೆ.

2. ಅಧಿಕೃತ ಪಾಸ್‌ಪೋರ್ಟ್ (Official Passport):

ಈ ವಿಶೇಷವಾದ ಪಾಸ್‌ಪೋರ್ಟ್‌ ಅನ್ನು ಭಾರತೀಯ ರಾಜತಾಂತ್ರಿಕರು ಮತ್ತು ಹಿರಿಯ ಸರ್ಕಾರಿ ಅಧಿಕಾರಿಗಳಿಗೆ ನೀಡಲಾಗುತ್ತದೆ. ಸರ್ಕಾರದಿಂದ ಅಧಿಕೃತವಾಗಿ ಗುರುತಿಸಿ ಕೊಂಡಿರುವವರ ಬಳಿ ಈ ಪಾಸ್‌ಪೋರ್ಟ್‌ ಇರುತ್ತದೆ. ಈ ಪಾಸ್‌ಪೋರ್ಟ್‌ ವಿದೇಶ ಪ್ರವಾಸದ ಸಮಯದಲ್ಲಿ ಬಹಳ ಪ್ರಯೋಜನಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಒಟ್ಟಾರೆ ಸಾಮಾನ್ಯ ಪಾಸ್‌ಪೋರ್ಟ್‌ಗಿಂತ ಇದು ಹೆಚ್ಚು ಬಲಿಷ್ಟವಾದ ಪಾಸ್‌ಪೋರ್ಟ್‌ ಎನ್ನಬಹುದು.

3. ಕಿತ್ತಳೆ ಪಾಸ್‌ಪೋರ್ಟ್ (Orange Passport)

ಕಿತ್ತಳೆ ಪಾಸ್‌ಪೋರ್ಟ್‌ ಸಾಕಷ್ಟು ಹಳೆಯದಲ್ಲ. ಇದು ಇತ್ತೀಚೆಗೆ ಪರಿಚಯ ಮಾಡಲಾಗಿರುವ ಪಾಸ್‌ಪೋರ್ಟ್‌. ಸರ್ಕಾರವು 2018 ರಿಂದ ಭಾರತೀಯ ನಾಗರಿಕರಿಗೆ ಇದನ್ನು ನೀಡಲು ಪ್ರಾರಂಭಿಸಲಾಯಿತು. ವಾಸ್ತವವಾಗಿ ಈಗಾಗಲೇ ಹೇಳಿರುವ 2 ಪಾಸ್‌ಪೋರ್ಟ್ಗಳಿಗಿಂತ ಇದು ಸಾಕಷ್ಟು ವಿಭಿನ್ನವಾಗಿದೆ. ಶೈಕ್ಷಣಿಕ ಆರ್ಹತೆ ಹೊಂದಿರದ ಜನರಿಗೆ ಈ ಪಾಸ್‌ಪೋರ್ಟ್‌ ನೀಡಲಾಗುತ್ತದೆ. ಅಂದರೆ 10 ನೇ ತರಗತಿಯನ್ನು ಪೂರ್ತಿ ಮಾಡಿರದ ಜನರಿಗೆ ಈ ಪಾಸ್‌ಪೋರ್ಟ್‌ ನೀಡಲಾಗುತ್ತದೆ.

4. ಬಿಳಿ ಪಾಸ್‌ಪೋರ್ಟ್ (White Passport)

ಇದು ಅತ್ಯಂತ ಶಕ್ತಿಶಾಲಿ ಪಾಸ್ಪೋರ್ಟ್ ಆಗಿದೆ. ಅಧಿಕೃತ ಕೆಲಸಕ್ಕಾಗಿ ವಿದೇಶಕ್ಕೆ ಹೋಗುವ ಪ್ರಯಾಣಿಕರಿಗೆ ಈ ಪಾಸ್ಪೋರ್ಟ್ ನೀಡಲಾಗುತ್ತದೆ. ಈ ಪಾಸ್ಪೋರ್ಟ್ ಅನೇಕ ರೀತಿಯಿಂದ ಅಧಿಕಾರಿಗಳಿಗೆ ಪ್ರಯೋಜನಕಾರಿಯಾಗಿದೆ. ಜೊತೆಗೆ ಆರೋಗ್ಯ ಚಿಕಿತ್ಸೆಗೂ ಇದು ವರದಾನವಾಗಿರುತ್ತದೆ.

You might also like
Leave A Reply

Your email address will not be published.