ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸಬೇಕೆ? ಹಾಗಾದರೆ, ನಿಮಗಿದೆ ಇಲ್ಲಿ ಅವಕಾಶ.

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಬೇಕು ಎಂಬುದು ಇಂದಿನ ಯುವಜನತೆಯ ಕನಸು.‌ ಹಾಗಾದರೆ ಇನ್ಯಾಕೆ ತಡ? ಕೇಂದ್ರ ಸರ್ಕಾರ ಅಂತವರಿಗಾಗಿಯೇ ಅಗ್ನಿವೀರ್ ಯೋಜನೆಯನ್ನು ಜಾರಿ ಮಾಡಿದ್ದು ಅದರ ಸದುಪಯೋಗ ಹೇಗೆ ಪಡೆದುಕೊಳ್ಳಬಹುದು‌ ಎಂಬುದನ್ನು ತಿಳಿಯೋಣ.

Agniveer scheme

ಭಾರತೀಯ ವಾಯುಪಡೆಗೆ ಅಗ್ನಿ ವೀರರ ನೆರಮಕಾತಿಗೆ 2024ರ ಸಾಲಿನ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ.‌ ಇಂಡಿಯನ್ ಏರ್ ಫೋರ್ಸ್ ಅಗ್ನಿವೀರ್ ವಾಯು ನೇಮಕಾತಿಯ ನೋಂದಣಿಯು ಇದೇ ಬರುವ 17 ರಿಂದ ಆರಂಭವಾಗಲಿದೆ. ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಹತೆಗಳನ್ನು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ನೋಡಬಹುದಾಗಿದೆ.

ಅರ್ಜಿ ಸಲ್ಲಿಸಲು ನೀವು ಮಾಡಬೇಕಾದದ್ದು ಇಷ್ಟೇ,
ಅಧಿಕೃತ ಜಾಲತಾಣವಾದ agnipathvayu.cdac.in ಗೆ ತೆರಳಿ ವಯಸ್ಸಿನ ಮಿತಿ, ಅರ್ಜಿಶುಲ್ಕ, ನೇಮಕಾತಿ ವಿವರಗಳು ಮತ್ತು ಖಾಲಿ ಇರುವ ಹುದ್ದೆಗಳನ್ನು ಪರೀಕ್ಷಿಸಬಹುದಾಗಿದೆ ಹಾಗೂ 2024, ಫೆಬ್ರವರಿ 6 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಆಯ್ಕೆಯಾದ ಅಭ್ಯರ್ಥಿಗಳಿಗೆ ಭಾರತೀಯ ವಾಯುಪಡೆಯು ಪರೀಕ್ಷೆ ನಡೆಸಲಿದ್ದು, ಸೇವಾ ಅಗತ್ಯಕ್ಕೆ ಅನುಗುಣವಾಗುವಂತೆ ಮಹಿಳಾ ಅಭ್ಯರ್ಥಿಗಳ ಸಂಖ್ಯೆಯ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ವಾಯುಪಡೆಯ ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.

You might also like
Leave A Reply

Your email address will not be published.