ರಾಮಲಲಾ ಪ್ರಾಣ ಪತ್ರಿಷ್ಠೆಗೂ ಮುನ್ನ 1008 ಶಿವಲಿಂಗಗಳ ರಾಮನಾಮ ಮಹಾಯಜ್ಞ – ಈ ವರದಿ ನೋಡಿ

ಅಯೋಧ್ಯೆ ರಾಮ ಮಂದಿರದಲ್ಲಿ ರಾಮ ಪ್ರಾಣ ಪ್ರತಿಷ್ಠೆಗೆ ಕೆಲವೇ ಕೆಲವು ದಿನಗಳು ಬಾಕಿ ಇದೆ. ದಿನ ಸಮೀಪಿಸುತ್ತಿದ್ದಂತೆ ಕಾತುರವು ಹೆಚ್ಚಾಗಿದೆ. ಈ ಕುತೂಹಲ ಹೆಚ್ಚಿಸಲು ಮತ್ತೊಂದು ಸಂತಸದ ಸುದ್ದಿ ಏನಂದ್ರೆ, ರಾಮಲಲಾ ಪ್ರಾಣ ಪತ್ರಿಷ್ಠೆಗೂ ಮುನ್ನ 1008 ಶಿವಲಿಂಗಗಳನ್ನು ಸ್ಥಾಪಿಸಿ, ರಾಮನಾಮ ಮಹಾ ಯಜ್ಞ ಏರ್ಪಡಿಸಿರುವುದು! ನಿಮಗಿದು ಗೊತ್ತೆ? ಯಜ್ಞ ನಡೆಯುವ ಸ್ಥಳ ಯಾವುದು? ಎಂಬಿತ್ಯಾದಿ ಮಾಹಿತಿ ಇಲ್ಲಿದೆ..

ಯಜ್ಞ ನಡೆಯುವ ಸ್ಥಳ ಯಾವುದು?

ರಾಮಮಂದಿರದಿಂದ 2 ಕಿ.ಮೀ ದೂರದಲ್ಲಿರುವ ಸರಯೂ ನದಿಯ ಮರಳು ಘಾಟ್‌ನಲ್ಲಿರುವ 100 ಎಕರೆ ಪ್ರದೇಶದಲ್ಲಿ ಈ ಯಜ್ಞ ಮಂಟಪಗಳನ್ನು ಸ್ಥಾಪಿಸಲಾಗಿದೆ.

ಯಾಗದಲ್ಲಿ 1008 ಶಿವಲಿಂಗಗಳ ಸ್ಥಾಪನೆ:

ಸರಯೂ ನದಿ ದಂಡೆಯಲ್ಲಿ 1008 ಶಿವಲಿಂಗಗಳನ್ನು ಸ್ಥಾಪಿಸಲಾಗುತ್ತದೆ. ಈ ವಿಶೇಷ ಧಾರ್ಮಿಕ ಕಾರ್ಯಕ್ರಮಕ್ಕೆ ನೇಪಾಳದಿಂದ 21 ಸಾವಿರ ಯತಿಗಳು ಆಗಮಿಸಲಿದ್ದಾರೆ. ಮಹಾಯಾಗವನ್ನು ನಡೆಸಿ ಅದರಲ್ಲಿ ಶಿವಲಿಂಗಗಳನ್ನು ಇರಿಸಲು ಈಗಾಗಲೇ 1008 ಯಜ್ಞ ಮಂಟಪವನ್ನು ನಿರ್ಮಿಸಲಾಗಿದೆ. ಈ ಪೈಕಿ ದೊಡ್ಡ ಯಾಗ ಶಾಲೆಯ ಛಾವಣಿ 11 ಪದರಗಳನ್ನು ಹೊಂದಿರುವುದು ವಿಶೇಷ.

ಯಜ್ಞ ನಡೆಯುವ ದಿನಾಂಕ:

ಜನವರಿ 14 ರಿಂದ 25 ರವರೆಗೆ ಭವ್ಯವಾದ ರಾಮನಾಮ ಮಹಾ ಯಜ್ಞ ನಡೆಯಲಿದೆ.

ಮಹಾಯಜ್ಞ ಆಯೋಜಕರು ಯಾರು?

ಅಯೋಧ್ಯೆ ಮೂಲದ ಈಗ ನೇಪಾಳದಲ್ಲಿ ನೆಲೆಸಿರುವ ಆತ್ಮಾನಂದ ದಾಸ್ ಮಹಾತ್ಯಾಗಿ (ನೇಪಾಳಿ ಬಾಬಾ) ಅವರು ಈ ಯಾಗವನ್ನು ಆಯೋಜಿಸಿದ್ದಾರೆ. ಪ್ರತಿ ವರ್ಷದ ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ನಾನು ಈ ಯಾಗವನ್ನು ಮಾಡುತ್ತೇನೆ. ಆದರೆ ಈ ವರ್ಷ ರಾಮ ಮಂದಿರದ ಪ್ರತಿಷ್ಠಾಪನೆ ಸಮಾರಂಭದ ಹಿನ್ನೆಲೆಯಲ್ಲಿ ಯಜ್ಞ ಮಂಟಪಗಳ ಸಂಖ್ಯೆಯನ್ನು ಹೆಚ್ಚಿಸಿದ್ದೇನೆ ಎಂದು ತಿಳಿಸಿದರು.

ಯಾಗದಲ್ಲಿ 50 ಸಾವಿರ ಭಕ್ತರಿಗೆ ಅವಕಾಶ:

ಪ್ರತಿದಿನ 50 ಸಾವಿರ ಭಕ್ತರಿಗೆ ಮಹಾಯಜ್ಞದಲ್ಲಿ ಅವಕಾಶ ಕಲ್ಪಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಹಾಗೂ ಪ್ರತಿನಿತ್ಯ ಸುಮಾರು 1 ಲಕ್ಷ ಭಕ್ತರಿಗೆ ಅನ್ನಸಂತರ್ಪಣೆ ಆಯೋಜಿಸಲಾಗಿದೆ. ಮಹಾ ಯಾಗ ಮುಗಿದ ನಂತರ 1008 ಶಿವಲಿಂಗಗಳನ್ನು ಸರಯೂ ನದಿಯಲ್ಲಿ ವಿಸರ್ಜಿಸಲಾಗುತ್ತದೆ.

24 ಸಾವಿರ ರಾಮಾಯಣ ಶ್ಲೋಕ ಪಠಣೆ:

ಜನವರಿ 17 ರಿಂದ 24,000 ರಾಮಾಯಣದ ಶ್ಲೋಕಗಳ ಪಠಿಸಲಾಗುತ್ತದೆ. ಪ್ರತಿದಿನ 1008 ಶಿವಲಿಂಗಗಳಿಗೆ ಅಭಿಷೇಕ ನಡೆಯಲಿದೆ. ಶಿವಲಿಂಗಗಳ ಕೆತ್ತನೆಗಾಗಿ ಮಧ್ಯಪ್ರದೇಶದ ನರ್ಮದಾ ನದಿಯಿಂದ ಕಲ್ಲುಗಳನ್ನು ತರಲಾಗಿದೆ ಎಂದು ನೇಪಾಳಿ ಬಾಬಾ ಹೇಳಿದರು.

You might also like
Leave A Reply

Your email address will not be published.