ಹೃದ್ರೋಗಿಗಳ ತುರ್ತು ಪರಿಸ್ಥಿತಿಗೆ “ರಾಮ್ ಕಿಟ್” ವಿತರಣೆ: ಕಿಟ್ ಅಲ್ಲಿ ಏನಿದೆ?

ಹೃದಯಾಘಾತವಾದ ಕ್ಷಣ ಗೋಲ್ಡನ್ ಟೈಮ್ ಆಗಿದ್ದು, ಆ ಕ್ಷಣ ನೀಡುವ ಚಿಕಿತ್ಸೆಗಳು ಒಬ್ಬ ವ್ಯಕ್ತಿಯ ಜೀವ ಉಳಿಸುವಲ್ಲಿ ಪ್ರಮುಖವಾಗಿರುತ್ತದೆ. ಈ ನಿಟ್ಟಿನಲ್ಲಿ ಅಗತ್ಯ ಔಷಧ ಹೊಂದಿರುವ ಕಿಟ್ ಅನ್ನು ಉತ್ತರ ಪ್ರದೇಶದ ಆಸ್ಪತ್ರೆಯೊಂದು “ರಾಮ್ ಕಿಟ್” ಎಂಬ ಹೆಸರಲ್ಲಿ ವಿತರಿಸುತ್ತಿರುವುದು ಶ್ಲಾಘನೀಯ! ರಾಮ್ ಕಿಟ್ ಅಲ್ಲಿ ಏನಿದೆ? ಯಾವ ಆಸ್ಪತ್ರೆ? ಇಲ್ಲಿ ನೋಡೋಣ..

ಕಾನ್ಪುರದ ಲಕ್ಷ್ಮೀಪತ್ ಸಿಂಘಾನಿಯಾ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಾಜಿ ಮತ್ತು ಕಾರ್ಡಿಯಾಕ್ ಸರ್ಜರಿ ಸಂಸ್ಥೆಯ ಅಧಿಕಾರಿ ಪ್ರಯಾಗ್ರಾಜ್ ಜಿಲ್ಲೆಯ ಸುಮಾರು 5 ಸಾವಿರ ಕುಟುಂಬಗಳಿಗೆ ರಾಮ್ ಕಿಟ್ ನೀಡುತ್ತಿದ್ದು, ಈ ರೀತಿಯ ಕಿಟ್ ವಿತರಿಸುತ್ತಿರುವ ಮೊದಲ ಆಸ್ಪತ್ರೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದಾರೆ.

ರಾಮನ ಚಿತ್ರದೊಂದಿಗೆ ಜೀವ ಉಳಿಸುವ ಪ್ರಮುಖ ಔಷಧಗಳು ಮತ್ತು ಆಸ್ಪತ್ರೆಯ ಸಹಾಯವಾಣಿಯ ಸಂಖ್ಯೆ ಇದೆ. ಜೊತೆಗೆ ‘ನಾವು ಚಿಕಿತ್ಸೆ ನೀಡುತ್ತೇವೆ. ರಾಮ ಗುಣಪಡಿಸುತ್ತಾರೆ’ ಎಂಬ ಪರಿಕಲ್ಪನೆಯನ್ನು ಈ ಕಿಟ್ ಹೊಂದಿದೆ.

ಕಿಟ್ನಲ್ಲಿ ಏನಿದೆ?

ರಾಮ್ ಕಿಟ್ ಅಲ್ಲಿ ಕೆಲ ಔಷಧಿಗಳನ್ನು ಇರಿಸಲಾಗಿದ್ದು, ಇವು ಹೃದಯದ ಸಮಸ್ಯೆ ಹೊಂದಿರುವವರಿಗೆ ತಕ್ಷಣದ ಪರಿಹಾರ ನೀಡುತ್ತದೆ. ಯಾವುದದು ಔಷಧಿ:

1. ಇಕೋಸ್ಪಿನ್ (ರಕ್ತ ತೆಳುಗೊಳಿಸುವ),
2. ರೋಸುವಾಸ್ಟಾಟಿನ್ (ಕೊಲೆಸ್ಟ್ರಾಲ್ ನಿಯಂತ್ರಣ) ಮತ್ತು
3. ಸೋರ್ಬಿಟ್ರೇಟ್ (ಹೃದಯದ ಉತ್ತಮ ಕಾರ್ಯಾಚರಣೆ)

ಚಳಿಗಾಲದಲ್ಲಿ ಹೃದ್ರೋಗ ಮತ್ತು ಮಿದುಳಿನ ಪಾರ್ಶ್ವವಾಯು ಪ್ರಕರಣ ಹೆಚ್ಚುವ ಹಿನ್ನೆಲೆಯಲ್ಲಿ ರಾಮ್ ಕಿಟ್ ಪ್ರತಿಯೊಬ್ಬರಿಗೂ ಉಪಯೋಗವಾಗಲಿದೆ. ರೋಗಿಯ ಗೋಲ್ಡನ್ ಹವರ್ನಲ್ಲಿ ಜೀವ ಉಳಿಸಲು ಸಹಾಯ ಮಾಡುತ್ತದೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ.ಎಸ್.ಕೆ ಪಾಂಡೆ ವಿವರಿಸಿದ್ದಾರೆ.

ಈ ಸಂಬಂಧ ಕಾನ್ಪುರದ ಲಕ್ಷ್ಮೀಪತ್ ಸಿಂಘಾನಿಯಾ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಾಜಿ ಮತ್ತು ಕಾರ್ಡಿಯಾಕ್ ಸರ್ಜರಿಯ ಹಿರಿಯ ಹೃದ್ರೋಗ ತಜ್ಞ ಡಾ.ನೀರಜ್ ಕುಮಾರ್ ಪ್ರತಿಕ್ರಿಯಿಸಿ, ರಾಮನ ಮೇಲೆ ಇರುವ ನಂಬಿಕೆಯೇ ಇದಕ್ಕೆ ರಾಮ್ ಕಿಟ್ ಎಂದು ಹೆಸರಿಡಲು ಕಾರಣ ಎಂದಿದ್ದಾರೆ.

You might also like
Leave A Reply

Your email address will not be published.