ಲೋಕಾಸಭೆ ಚುನಾವಣೆ ನಂತರ ಮೊಬೈಲ್ ಬಿಲ್ ದರ ಹೆಚ್ಚಳ!

ವಾಟರ್ ಬಿಲ್, ಕರೆಂಟ್ ಬಿಲ್, ಹಾಲು, ಹೋಟೆಲ್ ಸೇರಿದಂತೆ ಅತ್ಯವಶ್ಯಕ ವಸ್ತುಗಳ ಬೆಲೆ ಏರಿಕೆಯಾಗಿದೆ. ಇದರಿಂದಾಗಿ ಬೇಸತ್ತ ಜನರಿಗೆ ಮತ್ತೊಂದು ಶಾಕ್ ಎದುರಾಗಲಿದೆ. ಅರೇ ಮತ್ಯಾವುದರ ಬೆಲೆ ಹೆಚ್ಚಿಸ್ತಾರಪ್ಪ ಅಂತೀರ? ಇಲ್ಲಿದೆ ನೋಡಿ ಆ ಮಾಹಿತಿ..

ಲೋಕಸಭಾ ಚುನಾವಣೆ ಮುಗಿದ ಬಳಿಕ ಟೆಲಿಕಾಂ ಕಂಪನಿಗಳು ವಿವಿಧ ಸೇವೆಗಳ ದರವನ್ನು ಶೇ. 20ರಷ್ಟು ಹೆಚ್ಚಿಸಬಹುದು ಎಂದು ಬ್ಯಾಂಕ್ ಆಫ್ ಅಮೆರಿಕಾ ಸೆಕ್ಯೂರಿಟೀಸ್ (Bank of America Securities) ಕಂಪನಿ ಹೇಳಿದೆ.

ಈ ಸಂಸ್ಥೆಯ ಪ್ರಕಾರ ಈ ಸುದ್ದಿ ನಿಜವಾದರೆ, ಎರಡು ವರ್ಷದ ಬಳಿಕ ಶೇ. 20ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ದರ ಹೆಚ್ಚಳ ಕಾಣಲಿದ್ದೇವೆ. ಟೆಲಿಕಾಂ ಉದ್ಯಮದ ದೃಷ್ಟಿಕೋನದಿಂದ ದರ ಹೆಚ್ಚಳ ಆಗುವುದು ಸೂಕ್ತ. ಅದರಲ್ಲೂ ವೊಡಾಫೋನ್ ಐಡಿಯಾ ಎಂಬಂತಹ ಕಂಪನಿಗಳಿಗೆ ದರ ಹೆಚ್ಚಳವಾಗುವುದು ಅವಶ್ಯವಾಗಿದೆ. ಎಂದು ಬ್ರೋಕರೇಜ್ ಸಂಸ್ಥೆಯಾದ ಬ್ಯಾಂಕ್ ಆಫ್ ಅಮೆರಿಕಾ ಸೆಕ್ಯೂರಿಟೀಸ್ನ ಅನಾಲಿಸ್ಟ್ ಹೇಳಿದ್ದಾಗಿ ದಿ ಮಿಂಟ್ ಪತ್ರಿಕೆ ವರದಿ ಮಾಡಿದೆ.

ಇನ್ನೂ, ಟೆಲಿಕಾಂ ಸೇವೆಗಳ ದರ ಹೆಚ್ಚಳದಿಂದ ಭಾರ್ತಿ ಏರ್ಟೆಲ್ ಸಂಸ್ಥೆಗೂ ಹೆಚ್ಚು ಅನುಕೂಲವಾಗಬಹುದು. ಏರ್ಟೆಲ್ನಲ್ಲಿ ಹೈ ಎಂಡ್ ಯೂಸರ್ಗಳ ಸಂಖ್ಯೆ ಹೆಚ್ಚಿರುವುದರಿಂದ ಅದಕ್ಕೆ ಬೆಲೆ ಏರಿಕೆಯ ಲಾಭ ಹೆಚ್ಚಾಗಬಹುದು ಎಂದು ಅಭಿಪ್ರಾಯ ಪಟ್ಟಿರುವ ಬ್ರೋಕರೇಜ್ ಸಂಸ್ಥೆ, ಇದೇ ಕಾರಣಕ್ಕೆ ಏರ್ಟೆಲ್ ಗೆ ತಾನು ಅಂಡರ್ ಪರ್ಫಾರ್ಮಿಂಗ್ ಎಂದು ನೀಡಿದ್ದ ರೇಟಿಂಗ್ ಅನ್ನು ನ್ಯೂಟ್ರಲ್ ಗೆ ಬದಲಾಯಿಸಿದೆ.

Telecom service

2021ರ ಡಿಸೆಂಬರ್ ತಿಂಗಳಲ್ಲಿ ಟೆಲಿಕಾಂ ಕಂಪನಿಗಳು ಗಣನೀಯವಾಗಿ ದರಗಳನ್ನು ಹೆಚ್ಚಿಸಿದ್ದವು. ಅಲ್ಲಿಂದೀಚೆಗೆ ಟೇಲಿಕಾಂ ದರಗಳಲ್ಲಿ ಹೆಚ್ಚಿನ ಏರಿಕೆ ಆಗಿರಲಿಲ್ಲ. ಇನ್ನೂ 2023ರ ಅಕ್ಟೋಬರ್ನಿಂದ ಡಿಸೆಂಬರ್ವರೆಗಿನ ಕ್ವಾರ್ಟರ್ನಲ್ಲಿ ಭಾರತದ ಟೆಲಿಕಾಂ ಕಂಪನಿಗಳು ಹೆಚ್ಚು ಆದಾಯ ಪಡೆದಿರುವ ಸಾಧ್ಯತೆ ಇದೆ. ಪ್ರತೀ ಬಳಕೆದಾರನಿಂದ ಸಿಗುವ ಸರಾಸರಿ ಆದಾಯವನ್ನು (ಎಆರ್ಪಿಯು) ಎಲ್ಲಾ ಟೆಲಿಕಾಂ ಕಂಪನಿಗಳು ಕಾಣಲಿವೆ. ಈ ಹಿನ್ನೆಲೆಯಲ್ಲಿ ಏಪ್ರಿಲ್, ಮೇ ತಿಂಗಳ ನಂತರ ಶೇ. 20ರಷ್ಟು ದರ ಹೆಚ್ಚಾದರೆ ಟೆಲಿಕಾಂ ಕಂಪನಿಗಳ ಆರೋಗ್ಯ ಗಣನೀಯವಾಗಿ ಸುಧಾರಿಸುವ ಸಾಧ್ಯತೆ ಇದೆ ಎಂದು ತಿಳಿಸಿದೆ.

ಕುತೂಹಲದ ಸಂಗತಿ ಎಂದರೆ ಭಾರತದಲ್ಲಿರುವ ಟೆಲಿಕಾಂ ದರಗಳು ಜಾಗತಿಕ ಸರಾಸರಿಗೆ ಹೋಲಿಸಿದರೆ ಬಹಳ ಕಡಿಮೆ ಇದೆ. ರಿಲಾಯನ್ಸ್ ಜಿಯೋ ಮಾರುಕಟ್ಟೆಗೆ ಬಂದ ಬಳಿಕ ದರಗಳು ಬಹಳಷ್ಟು ಇಳಿಕೆಯಾಗಿದ್ದವು. ಈಗ ಒಮ್ಮತದಿಂದ ಎಲ್ಲಾ ಕಂಪನಿಗಳು ಬೆಲೆಗಳನ್ನು ಹೆಚ್ಚಿಸುತ್ತಿವೆ.

You might also like
Leave A Reply

Your email address will not be published.