ರಾಮಜನ್ಮಭೂಮಿಗೆ ಬಂದಿಳಿದ ಬೃಹತ್ ಘಂಟೆ: ಏನಿದರ ವಿಶೇಷ?

ರಾಮಜನ್ಮಭೂಮಿಯಲ್ಲಿ ರಾಮಮಂದಿರ ಉದ್ಘಾಟನೆಗೆ ಎಟಾಹ್ ಜಿಲ್ಲೆಯ ಜಲೇಸರ್ ಪಟ್ಟಣದಿಂದ ಸುಮಾರು 2,400 ಕೆ.ಜಿ ತೂಕದ ಬೃಹತ್ ಘಂಟೆಯನ್ನು ಜಿಲ್ಲೆಯ ಉಪವಿಭಾಗಗಳಲ್ಲಿ ವಾಹನದ ಮೇಲೆ ಪ್ರದರ್ಶಿಸಿದ ನಂತರ ರೈಲಿನ ಮೂಲಕ ಸಾಗಿಸಲಾಗಿದ್ದು ಇದೀಗ ಅಯೋಧ್ಯೆ ತಲುಪಿದೆ.

ಚಿನ್ನ, ಬೆಳ್ಳಿ, ತಾಮ್ರ, ಸತು, ಸೀಸ, ತವರ, ಕಬ್ಬಿಣ ಮತ್ತು ಪಾದರಸ ಹೀಗೆ ಒಟ್ಟು 8 ಲೋಹಗಳುಳ್ಳ ಈ ಬೃಹತ್ ಘಂಟೆಯನ್ನು ಸುಮಾರು 30 ಕಾರ್ಮಿಕರ ತಂಡವು ತಯಾರಿಸಿದ್ದಾರೆ. ಈ ಘಂಟೆಯ ಅಗಲ 15 ಅಡಿ ಮತ್ತು ಒಳಭಾಗದ ಅಗಲ 5 ಅಡಿ ಇದ್ದು, ಇದನ್ನು ತಯಾರಿಸಲು ಒಂದು ವರ್ಷ ಬೇಕಾಗಿದೆ.

ಲೋಹದ ಉದ್ಯಮಿ ಆದಿತ್ಯ ಮಿತ್ತಲ್ ಮಾತನಾಡಿ, ಸಹೋದರನಾಗಿದ್ದ ಜಲೇಸರ್ ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿಕಾಸ್ ಮಿತ್ತಲ್ ಅವರು ಈಗ ನಮ್ಮೊಂದಿಗಿಲ್ಲ. ಅವರು ದೇವಾಲಯಕ್ಕೆ ಘಂಟೆಯನ್ನು ಕೊಡುಗೆಯಾಗಿ ನೀಡಲು ಬಯಸಿದ್ದರು. ಅದರಂತೆ ನಮ್ಮಿಂದ ಈ ಕೊಡುಗೆಯನ್ನು ಅಯೋಧ್ಯೆಗೆ ನೀಡಲಾಗಿದೆ ಎಂದು ತಿಳಿಸಿದರು.

You might also like
Leave A Reply

Your email address will not be published.