ಇಸ್ರೇಲ್‌ನ ಯುದ್ಧ ನೀತಿಯನ್ನು ಖಂಡಿಸಿದ ಅಮೇರಿಕಾ ಅಧ್ಯಕ್ಷ ಜೋ ಬೈಡೆನ್!

ಅಮೇರಿಕಾದ ಅಧ್ಯಕ್ಷ ಖಾಸಗಿ ಸಂದರ್ಶನ ಒಂದರಲ್ಲಿ ಮಾತನಾಡುವಾಗ ಇಸ್ರೇಲ್ ನತ್ತು ಪ್ಯಾಲೆಸ್ಟೈನ್ ಯುದ್ಧದ ಕುರಿತು ಮಾತನಾಡಿದ್ದು ಸದ್ಯ ಆ ವಿಷಯ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಇಸ್ರೇಲ್‌ನ ಪ್ರಧಾನಿ ಶ್ರೀ ಬೆಂಜಮಿನ್ ನೆತನ್ಯಾಹೂ ಅವರು ಗಾಜಾ ಪಟ್ಟಿಯ ವಿಷಯದಲ್ಲಿ ತಪ್ಪು ಮಾಡುತ್ತಿದ್ದಾರೆ.‌ ಗಾಜಾ ಪಟ್ಟಿಯ ಕುರಿತಾದ ಅವರ ಅಪ್ರೋಚ್ ಅನ್ನು ನಾನು ಒಪ್ಪುವುದಿಲ್ಲ. ‌ಇಸ್ರೇಲ್ ಮೇಲೆ ಗಾಜಾಪಟ್ಟಿಯಿಂದ ಹಮಾಸ್ ಉಗ್ರರ ದಾಳಿಯ ನಂತರ ಅಕ್ಟೋಬರ್‌ 7 ರಂದು ಪ್ರಾರಂಭವಾದ ಯುದ್ಧದ ಕುರಿತು ಮಾತನಾಡುವಾಗ ಇಸ್ರೇಲ್‌ನ ಕ್ರಮಕ್ಕೆ ಅಸಮ್ಮತಿ ವ್ಯಕ್ತಪಡಿಸಿದ್ದಾರೆ.

ಅಮೆರಿಕದ ಬ್ರಾಡ್‌ಕಾಸ್ಟರ್ ಯುನಿವಿಷನ್‌ನೊಂದಿಗೆ ಮಾತನಾಡಿದ ಅಮೇರಿಕಾದ ಅಧ್ಯಕ್ಷ ಜೋ ಬೈಡೆನ್, ನಡೆಯುತ್ತಿರುವ ಯುದ್ಧವನ್ನು ಕೊನೆಗಾಣಿಸಲು ಕರೆನೀಡಿದ ಅವರು, ‘Well I will tell you, I think what he’s doing is a mistake, I don’t agree with Hus approach’ ( ಇಸ್ರೇಲ್ ಏನು ಮಾಡುತ್ತಿದೆಯೋ ಅದು ತಪ್ಪು ನಾನು ಅವರ ಅಪ್ರೋಚ್‌ನೊಂದಿಗೆ ಅಸಮ್ಮತಿ ವ್ಯಕ್ತ ಪಡಿಸುತ್ತೇನೆ) ಎಂದಿದ್ದಾರೆ. ಇಸ್ರೇಲಿ ಸ್ಟ್ರೈಕ್ ನಿಂದ‌ ಮಡಿದ ವರ್ಲ್ಡ್ ಸೆಂಟ್ರಲ್ ಕಿಚನ್‌ನ ಕಾರ್ಮಿಕರ ಕುರಿತು ಮಾತನಾಡುವಾಗ, ಹೈವೆಯಲ್ಲಿ ಹೋಗುತ್ತಿದ್ದ ಆ ಮೂರು ವಾಹನಗಳನ್ನು ಹೊಡೆದುರುಳಿಸಿರುವುದು ಅತಿರೇಕದ ಸಂಗತಿಯಾಗಿದೆ. ಅಲ್ಲಿ ಯಾವುದೇ ಗಲಭೆಗಳು ನಡೆಯುತ್ತಿರಲಿಲ್ಲ, ಆದರೂ ಈ ಸ್ಟ್ರೈಕ್ ನಡೆದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಸಾವುಗಳಿಗೆ ಇಸ್ರೇಲ್‌ ಮಿತ್ರರಾಷ್ಟ್ರಗಳಿಂದಲೂ ತೀವ್ರವಾದ ಟೀಕೆಗಳನ್ನು ಎದುರಿಸಬೇಕಾಯಿತು.

ಈಗ ಇಸ್ರೇಲಿಗಳು ಆರರಿಂದ ಎಂಟುವಾರ ಯುದ್ಧ ವಿರಾಮ ಘೋಷಣೆ ಮಾಡಿದರೆ ಗಾಜಾ ಪಟ್ಟಿಯಲ್ಲಿ ಬರಗಾಲದಂತ ವಿಷಮ‌ ಪರಿಸ್ಥಿತಿ ಎದುರಿಸುತ್ತಿರುವ ಸಂತ್ರಸ್ತರಿಗೆ ಅಗತ್ಯವಿರುವ ಆಹಾರ ಮತ್ತು ಔಷಧಿಗಳನ್ನು ಒದಗಿಸಲು ಅನುವುಮಾಡಿಕೊಡುತ್ತದೆ ಎಂದರು. ಇಸ್ರೇಲ್ ಕದನ ವಿರಾಮ ಘೋಷಣೆ ಮಾಡಬಹುದು ಅದರ ಕುರಿತಾಗಿ ಕೆಲವು ಹೆಜ್ಜೆಗಳನ್ನು ತೆಗೆದುಕೊಂಡಿದೆ ಎಂದು ಅಮೇರಿಕಾದ ವೈಟ್ ಹೌಸ್ ಹೇಳಿದರೆ, ಇತ್ತ ಹಮಾಸ್ ಮಾತ್ರ ಇದಕ್ಕೆ ತದ್ವಿರುದ್ಧವಾಗಿ ಇಸ್ರೇಲ್‌ ಅನ್ನು ಕೆಣಕುತ್ತಲೇ ಇದೆ. ಸಂತ್ರಸ್ತರಿಗೆ ವೈದ್ಯಕೀಯ ಹಾಗೂ ಆಹಾರದ ನೆರವು ನೀಡದಿರಲು ಯಾವುದೇ ಕಾರಣಗಳಿಲ್ಲ. ನಾನು ಈಗಾಗಲೇ ಸೌದಿ ಅರೇಬಿಯಾ, ಜೋರ್ಡಾನ್, ಈಜಿಪ್ಟ್‌ನೊಂದಿಗೆ ಮಾತುಕತೆ ನಡೆಸಿದ್ದು ಅವರು ತೆರಳಲು ಸಿದ್ದ ಮಾಡಿಕೊಂಡಿದ್ದರೆ‌ ನೆರವು ನೀಡುವ ಕಾರ್ಯ ಈಗಲೇ ಆಗಬೇಕು ಎಂದು ಹೇಳಿದ್ದಾರೆ.

ಇಸ್ರೇಲಿನ‌ ಅಂಕಿ ಅಂಶಗಳ ಪ್ರಕಾರ ಅಕ್ಟೊಬರ್ 7ನೇ ತಾರೀಖಿನಂದು ಹಮಾಸ್ ಆರಂಭಿಸಿದ ಯುದ್ಧದಲ್ಲಿ ಈ ವರೆಗೆ 1,170 ಜನ ಮೃತಪಟ್ಟಿದ್ದು ಅದರಲ್ಲಿ ಹೆಚ್ಚಿನವರು ನಾಗರಿಕರೇ ಸೇರಿದ್ದಾರೆ ಎನ್ನಲಾಗಿದೆ.

You might also like
Leave A Reply

Your email address will not be published.