ಭರ್ಜರಿ ಏರಿಕೆ ಕಂಡ ಚಿನ್ನದ ಬೆಲೆ : 10 ಗ್ರಾಂ ಚಿನ್ನ ಈಗ 72 ಸಾವಿರ – ಬೆಳ್ಳಿ ಬೆಲೆ ಎಷ್ಟು ನೋಡಿ!

ಪ್ರಸ್ತುತ ದಿನಮಾನಗಳಲ್ಲಿ ಷೇರು ಮಾರುಕಟ್ಟೆಯಲ್ಲಿ ಚಿನ್ನ ಹೂಡಿಕೆಯು ಪ್ರಮುಖ ವಿಚಾರವಾಗಿರುವುದರಿಂದ ಚಿನ್ನದ ದರದಲ್ಲಿ ಪ್ರತಿದಿನವೂ ಏರಿಳಿತವಾಗುವುದು ಸರ್ವೇಸಾಮಾನ್ಯ. ಹಾಗಿದ್ದರೆ ಇಂದಿನ ಚಿನ್ನ ಹಾಗೂ ಬೆಳ್ಳಿ ಆಭರಣ ದರ ಹೇಗಿದೆ? ಬನ್ನಿ ನೋಡೋಣ…

ಒಂದು ಗ್ರಾಂ ಚಿನ್ನ (1GM)

1) 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 6610

2) 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ರೂ. 7,211

ಎಂಟು ಗ್ರಾಂ ಚಿನ್ನ (8GM)

1)22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 52, 880

2)24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ರೂ. 57,688

The price of gold has seen a sharp increase: 10 grams of gold is now 72 thousand - see how much silver costs!

ಹತ್ತು ಗ್ರಾಂ ಚಿನ್ನ (10GM)

1) 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 66,100

2) 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ರೂ. 72,110

ನೂರು ಗ್ರಾಂ ಚಿನ್ನ (100GM)

1) 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 6,61,000
2) 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ರೂ. 7,21,100

ಬೆಂಗಳೂರು ಹಾಗೂ ಇತರೆಡೆ ಇಂದಿನ ಗೋಲ್ಡ್ ರೇಟ್

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು 24 ಕ್ಯಾರೆಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 72,110 ಆಗಿದ್ದರೆ ಚೆನ್ನೈ 73,150 ಮುಂಬೈ 72,110 ಹಾಗೂ ಕೋಲ್ಕತ್ತಾದಲ್ಲಿ 72,110 ಹಾಗೆಯೇ ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 72, 260 ರೂ. ಆಗಿದೆ.

ಇಂದಿನ ಬೆಳ್ಳಿ ದರ:

ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ. ರೂಪಾಯಿ ಮೌಲ್ಯದಲ್ಲಿ ಏರಿಕೆ, ಇಳಿಕೆಯಾದಂತೆಯೂ ಚಿನ್ನ ಬೆಳ್ಳಿ ದರ ವ್ಯತ್ಯಾಸವಾಗುತ್ತಿದೆ.

ಬೆಂಗಳೂರು ಹಾಗೂ ಇತರೆಡೆ ಸಿಲ್ವರ್ ರೇಟ್ :

ಹಾಗೆಯೇ ಬೆಂಗಳೂರಲ್ಲಿ 10 gm, 100 gm, 1000 gm (1ಕೆಜಿ) ಬೆಳ್ಳಿ ದರ ಕ್ರಮವಾಗಿ ರೂ. 840 ರೂ. 8400 ಹಾಗೂ ರೂ. 84,000 ಗಳಾಗಿವೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 89,000 ಆಗಿದ್ದರೆ, ಮುಂಬೈನಲ್ಲಿ ರೂ. 85,500 ಹಾಗೂ ಕೋಲ್ಕತ್ತದಲ್ಲಿ ಸಹ ರೂ. 85,500 ಗಳಾಗಿದೆ. ಅಲ್ಲದೆ, ರಾಷ್ಟ್ರ ರಾಜಧಾನಿ ಹೊಸ ದಿಲ್ಲಿಯಲ್ಲಿ ಸಹ ಇಂದಿನ ಬೆಳ್ಳಿ ದರ ರೂ. 85,500 ಆಗಿದೆ.

The price of gold has seen a sharp increase: 10 grams of gold is now 72 thousand - see how much silver costs!

ಹೂಡಿಕೆದಾರರ ಪಾಲಿಗೆ ಚಿನ್ನ ಅಚ್ಚುಮೆಚ್ಚು:

ಹೌದು, ಹೂಡಿಕೆದಾರರಿಗೆ ಚಿನ್ನ ಅಚ್ಚುಮೆಚ್ಚು. ಬಹುತೇಕ ಹೂಡಿಕೆದಾರರು ಚಿನ್ನವನ್ನು ಹೂಡಿಕೆ ರೂಪದಲ್ಲಿ ನೋಡುತ್ತಾರೆ. ಒಮ್ಮೆ ನೀವು ಚಿನ್ನ ಖರೀದಿಸಿದ್ದೀರಿ ಎಂದಾದರೆ ಅದು ಒಂದು ರೀತಿಯ ಹೂಡಿಕೆಯಂತೆಯೇ. ಅನೇಕರು ಮದುವೆ ಮುಂಜಿಗಳಿಗೆ ಮಾತ್ರವಲ್ಲದೇ ಕಷ್ಟಕಾಲಕ್ಕೆ ನೆರವಿಗೆ ಬರಬಹುದು ಎಂಬ ಕಾರಣಕ್ಕೂ ಚಿನ್ನ ಖರೀದಿಸುತ್ತಾರೆ.

ಅದಾಗ್ಯೂ ಆಭರಣದ ಬದಲು ಚಿನ್ನದ ಬಿಸ್ಕೆಟ್‌, ಚಿನ್ನದ ಬಾಂಡ್ ಖರೀದಿಸಿದರೆ ಅದು ಒಂದು ರೀತಿಯ ಹೂಡಿಕೆಯಂತೆಯೇ, ಇದು ಎಂದಿಗೂ ಸೆಕೆಂಡ್ ಹ್ಯಾಂಡ್ ಆಗುವುದಿಲ್ಲ. ಇದನ್ನು ನೀವು ಆ ದಿನದ ಚಿನ್ನದ ದರ ಹೇಗಿದೆ ಎಂಬುದರ ಮೇಲೆ ಬಹು ವರ್ಷಗಳ ನಂತರವೂ ಉತ್ತಮ ದರವನ್ನು ಪಡೆಯಬಹುದು.

You might also like
Leave A Reply

Your email address will not be published.