ಕಾಂಗ್ರೆಸ್ ಆಡಳಿತದಲ್ಲಿ ಭಾರತ ಕಳೆದುಕೊಂಡ ಭೂಮಿ ಅಕ್ಸಾಯ್ ಚಿನ್, ಕಚ್ಚತೀವು ದ್ವೀಪಕ್ಕೆ ಮಾತ್ರ ಸೀಮಿತವೇ?

ಚುನಾವಣಾ ದಿನ ಹತ್ತಿರಕ್ಕೆ ಬರುತ್ತಿದೆ ಬಿಜೆಪಿ ಕಾಂಗ್ರೆಸ್ ಆದಿಯಾಗಿ‌ ಎಲ್ಲಾ ರಾಜಕೀಯ ಪಕ್ಷಗಳು ಮತಭೇಟೆಗಾಗಿ ಹೆಚ್ಚಿನ ಸಮಯವನ್ನು ಜನರ ನಡುವಲ್ಲೇ ಕಳೆಯುತ್ತಿದ್ದಾರೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿಯವರು ಭಾರತೀಯ ಜನತಾ ಪಾರ್ಟಿಯ ಪರವಾಗಿ ಎಲ್ಲಾ ರಾಜ್ಯಗಳನ್ನು ಸುತ್ತುತ್ತಿದ್ದು ತಮಿಳುನಾಡಿನ ಪ್ರವಾಸದ ವೇಳೆ ಕಚ್ಚತೀವು ದ್ವೀಪದ ಬಗ್ಗೆ ಮತ್ತೆ ಮಾತನಾಡಿದ್ದಕ್ಕೆ ಕಾಂಗ್ರೆಸಿಗರ ಕಣ್ಣು ಕೆಂಪಾಗಿವೆ.

ಭಾರತೀಯ ಜನತಾ ಪಾರ್ಟಿ ಮತ್ತು ಕಾಂಗ್ರೆಸ್ ಪಕ್ಷದ ನಡುವೆ ಕಚ್ಚತೀವು ದ್ವೀಪದ ಬಗ್ಗೆ ದಿನದಿಂದ ದಿನಕ್ಕೆ ವಾಕ್ಸಮರ ಹೆಚ್ಚುತ್ತಲೇ ಇದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಕಚ್ಚತೀವು ದ್ವೀಪದ ಬಗ್ಗೆ ಕಾಂಗ್ರೆಸ್ ಮತ್ತು ಡಿಎಂಕೆ ಪಕ್ಷಗಳು ರಾಜ್ಯವನ್ನು ಸುಮಾರು ವರ್ಷಗಳ ತನಕ‌ ಕತ್ತಲೆಯಲ್ಲಿ ಇಟ್ಟಿದ್ದರು, ಭಾರತಕ್ಕೆ ಸೇರಿದ ಕಚ್ಚತೀವು ದ್ವೀಪವನ್ನು ಶ್ರೀಲಂಕಾಗೆ ಕೊಟ್ಟ ವಿಚಾರ ಎಲ್ಲರಿಂದ ಮುಚ್ಚಿಟ್ಟಿದ್ದವು ಎಂದು ಮಾತನಡಿದ್ದಕ್ಕೆ ಪ್ರತಿಯಾಗಿ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಅವರು ಪ್ರತಿಕ್ರಿಯೆ ನೀಡಿದ್ದು, ಇದೊಂದು ಅಸಂಬದ್ಧ ವಿಷಯವಾಗಿದೆ ಅಷ್ಟಕ್ಕೂ ಕಚ್ಚತೀವು ದ್ವೀಪದಲ್ಲಿ ಯಾರಾದರೂ ವಾಸಿಸುತ್ತಾರೆಯೇ ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನು ಮುಂದುವರೆದು ಮಾತನಾಡಿದ ದಿಗ್ವಿಜಯ ಸಿಂಗ್ ಅವರು ಆ ದ್ವೀಪದಲ್ಲಿ ಯಾರಾದರೂ ವಾಸಿಸುತ್ತಾರೆಯೇ ಎಂದು ನಾನು ಕೇಳಲು ಬಯಸುತ್ತೇನೆ. ಇನ್ನು ಕಚ್ಚತೀವು ದ್ವೀಪಕ್ಕೆ ಹೋಗಿ ಅಲ್ಲಿ ಬಂಧನಕ್ಕೆ ಒಳಗಾದ ಭಾರತೀಯ ಮೀನುಗಾರರ ಬಗ್ಗೆ ಕೇಳಿದ ಪ್ರಶ್ನೆಗೆ, ಮೋದಿಯವರು ಯಾವುದೇ ಪುರಾವೆಗಳಿಲ್ಲದೆ ತಲೆ ಬುಡವಿಲ್ಲದೆ ಮಾತನಾಡುತ್ತಾರೆ ಎಂದು ಹಾರಿಕೆಯ ಉತ್ತರ ನೀಡಿದರು.

ಇನ್ನು ಕಾಂಗ್ರೆಸ್ ನಾಯಕನ‌ ಈ ಉತ್ತರವನ್ನು ಬಿಜೆಪಿ ಖಂಡಿಸಿದ್ದು, ಭಾರತದ ಭೂಭಾಗಗಳನ್ನು ಬೇರೆ ದೇಶಕ್ಕೆ ನೀಡಿದ ಬಳಿಕ ಅದರ ಬಗ್ಗೆ ಲಘುವಾಗಿ ಪ್ರತಿಕ್ರಿಯೆ ನೀಡುವ ಕಾಂಗ್ರೆಸ್ ನಾಯಕರ ಕಾಮೆಂಟ್‌ಗಳು ಕಾಂಗ್ರೆಸ್ ಪಕ್ಷದ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಇಂತಹ ಸಂವೇದನೆ ಇಲ್ಲದ ಹೇಳಿಕೆಗಾಗಿ ಕಾಂಗ್ರೆಸ್ ಪಕ್ಷವು ತಮಿಳುನಾಡಿನ ಮೀನುಗಾರರ ಬಳಿ ಭೇಷರತ್ ಕ್ಷಮೆ ಯಾಚಿಸಬೇಕು ಎಂದು ಹೇಳಿದೆ.

ಇನ್ನು ದಿಗ್ವಿಜಯ ಸಿಂಗ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ತಮಿಳುನಾಡು ಬಿಜೆಪಿಯ ರಾಜ್ಯಾಧ್ಯಕ್ಷ ಕೆ ಅಣ್ಣಮಲೈಯವರು ತಮ್ಮ ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ, ದೇಶದ ವಿಚಾರವಾಗಿ ಹೀಗೆ ಬೇಜವಬ್ದಾರಿತನದಿಂದ ಹೇಳಿಕೆ ನೀಡಲು ಕಾಂಗ್ರೆಸ್ ನಾಯಕರಿಗೆ ಯಾವುದೇ ಅಪರಾಧಿ ಮನೋಭಾವ ಕಾಡುವುದಿಲ್ಲ ಹಾಗೂ ತಮಿಳುನಾಡಿನ ಮೀನುಗಾರರ ಪ್ರಾಣಕ್ಕೆ ಕುತ್ತು ತಂದದ್ದಕ್ಕಾಗಿ ಕಾಂಗ್ರೆಸ್ಗೆ ಯಾವುದೇ ಪಶ್ಚತ್ತಾಪವಿಲ್ಲ. ಈ ಮೊದಲು ಅಕ್ಸಾಯ್ ಚಿನ್ ನಲ್ಲಿ ಒಂದು ಹುಲ್ಲು ಕೂಡ ಬೆಳೆಯುವುದಿಲ್ಲ ಎಂದು ಹೇಳಿದ್ದರು ಈಗ ಕಚ್ಚತೀವು ದ್ವೀಪದಲ್ಲಿ ಯಾರು ವಾಸಿಸುತ್ತಾರೆ ಎಂದು ಕೇಳಿದ್ದಾರೆ. ಇದು ಕಾಂಗ್ರೆಸ್‌ನ ಅಸಲಿ ಮೈಂಡ್ ಸೆಟ್ ಆಗಿದೆ ಇಂತಹ ಹೇಳಿಕೆಗಾಗಿ ಕಾಂಗ್ರೆಸ್ ದೇಶದ ಜನತೆಗೆ ಭೇಷರತ್ ಕ್ಷಮೆ ಯಾಚಿಸಬೇಕು ಎಂದು ಬರೆದುಕೊಂಡಿದ್ದಾರೆ.

ಇನ್ನು ದಿಗ್ವಿಜಯ ಸಿಂಗ್ ಅವರ ಕಾಮೆಂಟ್‌ಗೆ ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕಂಗನಾ ರನೌತ್ ಕೂಡ ಪ್ರತಿಕ್ರಿಯೆ ನೀಡಿದ್ದು ಕಾಂಗ್ರೆಸ್‌ನ ಇಂತಹ ಮನಸ್ಥಿತಿಯಿಂದಾಗಿಯೇ ಕಾಂಗ್ರೆಸ್ ಆಡಳಿತ ಇರುವಾಗ ದೇಶದಲ್ಲಿ ಅಭಿವೃದ್ಧಿ ಸಾಧ್ಯವಾಗಲಿಲ್ಲ ಅಕ್ಸಾಯ್ ಚಿನ್ ಅನ್ನು ಬರಡುಭೂಮಿ ಎಂದು ಕರೆದ ನೆಹರು ಅವರ ಚಿಂತನೆಯು ಕಾಂಗ್ರೆಸ್ ನಲ್ಲಿ ಇನ್ನೂ ಜೀವಂತವಾಗಿದೆ ಎಂದು ಬರೆದುಕೊಂಡಿದ್ದಾರೆ.

ಭಾರತೀಯ ಜನತಾ ಪಾರ್ಟಿಯ ವಕ್ತಾರ ಶೆಹಜಾದ್ ಪೂನವಾಲ ಕೂಡ ತಿರುಗೇಟು ನೀಡಿದ್ದು ಪ್ರತಿಯೊಬ್ಬ ಕಾಂಗ್ರೆಸ್ ನಾಯಕರು ದೇಶದ ಭೂಮಿಯನ್ನು ತಮ್ಮ ವೈಯಕ್ತಿಕ ಆಸ್ತಿಯನ್ನು ಭಾವಿಸುತ್ತಾರೆ ಹಿಂದಿನ ಕಾನೂನು ಹಾಗೂ ಐತಿಹಾಸಿಕ ಅಭಿಪ್ರಾಯವನ್ನು ನೋಡಿದರೆ ಶ್ರೀಲಂಕಾಕ್ಕೆ ಕಚ್ಚತೀವು ದ್ವೀಪವನ್ನು ಬಿಟ್ಟುಕೊಡುವುದಕ್ಕೆ ವಿರುದ್ಧವಾಗಿತ್ತು ಹಾಗೂ ನಮ್ಮ ದೇಶದ ಮೀನುಗಾರರಿಗೆ ಈ ದ್ವೀಪವು ತುಂಬಾ ಮಹತ್ವದ್ದಾಗಿತ್ತು. ಆದರೆ ಈಗ ಕಾಂಗ್ರೆಸ್ ಅದನ್ನು ಸಮರ್ಥಿಸಿಕೊಳ್ಳುತ್ತಿದೆ ಏಕೆಂದರೆ ಕಾಂಗ್ರೆಸ್ ತುಕ್ಡೆ ತುಕ್ಡೆ ಮನಸ್ಥಿತಿಯನ್ನು ಹೊಂದಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

You might also like
Leave A Reply

Your email address will not be published.