ಬೋಲೇ ಜೋ ಕೋಯಲ್ ಹಾಡಿದ ಧೋನಿ!

ಕ್ರೀಡಾ ಜಗತ್ತಿನಲ್ಲಿ ಬಹುಶಃ ಫುಟ್ಬಾಲ್ ನಂತರ ಅತಿ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿದ ಕ್ರೀಡೆ ಕ್ರಿಕೆಟ್ ಎಂದರೆ ಖಂಡಿತಾ ತಪ್ಪಾಗಲಾರದು. ಕ್ರಿಕೆಟ್ ಹುಟ್ಟಿದ್ದು ಇಂಗ್ಲೆಂಡ್ ನಲ್ಲೇ ಇರಬಹುದು ಆದರೆ ಜನಪ್ರಿಯತೆ ಗಳಿಸಿದ್ದು ಏಷ್ಯಾದಲ್ಲಿ ಅದರಲ್ಲೂ ಭಾರತದಲ್ಲಿ. ಭಾರತದ ಕ್ರಿಕೆಟ್ ಅಭಿಮಾನಿಗಳು ಕ್ರಿಕೆಟ್ ಅನ್ನು ಹಾಗೂ ಕ್ರಿಕೆಟಿಗರನ್ನು ಕೇವಲ ಕ್ರೀಡಾಪಟುಗಳಂತೆ ನೋಡದೆ ಯಾವ ಸೆಲೆಬ್ರಿಟಿಗು ನೀಡದ ಪಟ್ಟವನ್ನು ಕಟ್ಟಿ ಬಿಡುತ್ತಾರೆ. ಇಲ್ಲಿ ಸಚಿನ್ ತೆಂಡೂಲ್ಕರ್ ಗೆ ಗಾಡ್ ಆಫ್ ಕ್ರಿಕೆಟ್ ಎಂದು ಕರೆದರೆ. ವಿರಾಟ್ ಕೊಹ್ಲಿ ಗೆ ಕಿಂಗ್ ಕೊಹ್ಲಿ ಎಂದೇ ಪಟ್ಟ ಕಟ್ಟಿದ್ದಾರೆ. ಕ್ರಿಕೆಟ್ ಜಗತ್ತಿನಲ್ಲಿ ಕ್ರಿಕೆಟ್‌ನ ನಾನಾ ತರದ ಟೂರ್ನಮೆಂಟ್ ಗಳು ನಡೆಯಬಹುದು ಆದರೆ ಐಪಿಎಲ್ ಅನ್ನು ಮೀರಿಸುವ ಯಾವುದೇ ಪಂದ್ಯಾಟ ಈತನಕ ನಡೆದಿಲ್ಲ ಮುಂದೆ ನಡೆಯುವುದು ಅನುಮಾನವೇ ಸರಿ.

ಐಪಿಎಲ್ ಎಂದ ಮೇಲೆ ಭರಪೂರ ಮನೋರಂಜನೆ ಏನು ಕೊರತೆ ಇಲ್ಲ. ಇಂತಹುದೇ ಲಘುವಾದ ಕ್ಷಣವೊಂದಯ ಚೆನ್ನೈ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ಪಂದ್ಯದ ವೇಳೆ ಸಂಭವಿಸಿದೆ. ಚೆನ್ನೈನ ಚಿಪಾಕ್ ಸ್ಟೇಡಿಯಂ ನಲ್ಲಿ ಡಿಜೆ ಫಲ್ಗುಣಿ ಫಾಠಕ್ ಅವರ ‘ಬೋಲೇ ಜೋ ಕೋಯಲ್’ ಹಾಡನ್ನು ನುಡಿಸಿದರು, ಹಾಗೂ ಕ್ಷಣ ಕ್ಯಾಮರಾ ಮ್ಯಾನ್ ತಮ್ಮ ಕ್ಯಾಮರವನ್ನು ಎಂ ಎಸ್ ಧೋನಿ ಯವರ ಕಡೆ ತಿರುಗಿಸಿದರು, ಧೋನಿ ಮಾತ್ರ ತನಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬಂತೆ ಕ್ರಿಕೆಟ್‌ನಲ್ಲೇ ಮಗ್ನರಾಗಿದ್ದರು. ಇನ್ನು ಈ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ಬಾರೀ ವೈರಲ್ ಆಗುತ್ತಿದೆ. ಹಾಗಾದರೆ ಈ ಹಾಡಿಗೂ ಪಂದ್ಯಕ್ಕೂ ಸಂಬಂಧವೇನು ನೋಡೋಣ ಬನ್ನಿ.

ಇತ್ತೀಚೆಗೆ ಜಾಹೀರಾತು ಒಂದರಲ್ಲಿ ಎಂ ಎಸ್ ಧೋನಿ ಇ ಬೈಕ್‌ ನಲ್ಲಿ ಸವಾರಿಯನ್ನು ಆನಂದಿಸುತ್ತಿರುವಂತೆ ಒಂದು ವಿಡಿಯೋ ಹೊರಬಂದಿದೆ. ಕೆಲವರು ಹೇಳುವಂತೆ ಎಐ ತಂತ್ರಜ್ಞಾನದ ಮೂಲಕ ಮಹೇಂದ್ರ ಸಿಂಗ್ ಧೋನಿ ಅವರ ಧ್ವನಿಯನ್ನೇ ಹೋಲುವ ಹಾಗೆ ಅಂದರೆ ಅವರೇ ಹಾಡುತ್ತಿರುವಂತೆ ಬೋಲೆ ಜೋಯೆಲ್ ಹಾಡನ್ನು ಆ ಜಾಹೀರಾತಿಗೆ ಬಳಸಿಕೊಳ್ಳಲಾಗಿದೆ ಎಂದರೆ ಇನ್ನು ಕೆಲವರು ಧೋನಿಯೇ ಹಾಡಿದ್ದು ಎನ್ನುತ್ತಿದ್ದಾರೆ ಅದೇನೇ ಇರಲಿ, ಧೋನಿಯ ಈ ಹಾಡಿನ ಆಯ್ಕೆ ಮತ್ತು ಸಲೀಸಾಗಿ ಅವರು ರೈಡ್ ಮಾಡುತ್ತಿರುವ ರೀತಿಯು ಎಲ್ಲರನ್ನು ಮೋಡು ಮಾಡಿದೆ. ಹಾಗೂ ಧೋನಿ ಅಭಿಮಾನಿಗಳಿಗೆ ಇದೊಂದು ಅತ್ಯಂತ ಸಂತಸದ ಕ್ಷಣವಾಗಿ ಅನುರಣಿಸಿದೆ.

ಧೋನಿ ಅವರ ಕ್ಲಾಸಿಕ್ ಹಾಡುಗಳ ಬಗೆಗಿನ ಒಲವು ಗುಟ್ಟಾಗಿ ಏನು ಉಳಿದಿಲ್ಲ ಈ ಹಿಂದೆ ಅವರು ಬಾಲಿವುಡ್‌ನ ‘ಕಭಿ ಕಭಿ’ ಚಿತ್ರದ ‘ಮೇನ್ ಪಾಲ್ ದೋ ಪಾಲ್ ಕ ಶೈರ್ ಹೂನ್’ ಹಾಡು ತನ್ನ ಇಷ್ಟದ್ದು ಎಂದು ಹೇಳಿಕೊಂಡಿದ್ದರು ಹಾಗೂ ಈ ಹಾಡನ್ನು ತಮ್ಮ ಕ್ರಿಕೆಟ್ ನಿಂದ ವಿದಾಯ ಹೇಳಿದ ಇನ್ಸ್ಟಾಗ್ರಾಮ್ ಪೋಸ್ಟಿನ ಬ್ಯಾಕ್‌ಗ್ರೌಂಡ್ ಮ್ಯೂಸಿಕ್‌ನಲ್ಲೂ ಬಳಸಿಕೊಂಡಿದ್ದರು. ಅದೇನೇ ಇರಲಿ ಒಟ್ಟಿನಲ್ಲಿ ಧೋನಿ ಅಭಿಮಾನಿಗಳು ಈ ಕ್ಷಣವನ್ನು ಆನಂದಿಸುತ್ತಿರುವುದಂತೂ ನಿಜ!

 

View this post on Instagram

 

A post shared by M S Dhoni (@mahi7781)

You might also like
Leave A Reply

Your email address will not be published.