ಚುಮುಚುಮು ಮಳೆ: ಇದು ಆನಂದವೋ? ಕೋವಿಡ್ ಭಯವೋ?

ಈ ತಂಡಿಗಾಳಿ, ಚುಮುಚುಮು ಮಳೆ ಲೈಕ್ ಮಾಡೋರಿಗೆ ಕೇಳದೆಯೇ ಸಿಕ್ಕ ಸೌಭಾಗ್ಯವಾದರೆ, ಆರೋಗ್ಯದ ದೃಷ್ಟಿಯಿಂದ ದೌರ್ಭಾಗ್ಯವಾಗಿದೆ. ಅದಾಗ್ಯೂ ಈ ಕೊರೋನ ಬರುವುದಕ್ಕೂ ಈ ತಂಡಿ ಗಾಳಿ ಬೀಸುವುದಕ್ಕೂ ಸರಿಯಾಗೆ ಇದೆ ಅನ್ಬೋದೇನೋ? ಯಾಕಂದ್ರೆ ಸ್ವಲ್ಪ ಶೀತ, ಜ್ವರ ಬಂದ್ರು ಕೋವಿಡ್ ಟೆಸ್ಟ್, ಪಾಸಿಟಿವ್ ವರದಿ.. ಇದೆಲ್ಲ ಬೇಕಾ? ಸ್ವಲ್ಪ ಹುಷಾರಾಗಿರಿ ಹಾಗೇ ಹವಾಮಾನ ಇಲಾಖೆ ಯಾವ ಮುನ್ಸೂಚನೆ ಕೊಟ್ಟಿದೆ ಎಂಬ ಮಾಹಿತಿಯನ್ನು ಓದಿ.

ಬೇಸಿಗೆಯಲ್ಲೂ ಚುಮುಚುಮು ಮಳೆ, ಶೀತದ ವಾತಾವರಣ, ಮೋಡ ಕವಿದ ವಾತಾವರಣ – ಅಬ್ಬಾ! ಜನವರಿಯಲ್ಲೂ ಈ ರೀತಿಯ ವಾತಾವರಣ ಅನುಭವಿಸುತ್ತಿರೋ ನಾವೇ ಧನ್ಯರು ಅಲ್ವೇ? ಈ ವಾತಾವರಣ ಇಂದಿಗೆ ಮುಗಿಯೋದಿಲ್ಲ, ಇನ್ನೂ ಎರಡು ದಿನಗಳ ಕಾಲ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಈಗಾಗಲೇ ರಾಜ್ಯದ್ಯಂತ ಶೀತಗಾಳಿಯೊಂದಿಗೆ ಕಳೆದ ಮೂರ್ನಾಲ್ಕು ದಿನಗಳಿಂದ ಮಂಗಳೂರು, ಪಣಂಬೂರು, ಉಡುಪಿ, ಮುಲ್ಕಿ, ಮಾಣಿ, ಮೈಸೂರು ಸೇರಿದಂತೆ ಅಲ್ಲಲ್ಲಿ ಮಳೆಯಾಗಿದೆ. ಕರಾವಳಿಯ ಕೆಲವು ಕಡೆಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ, ಉತ್ತರ ಒಳನಾಡಿನಲ್ಲಿ ಒಣಹವೆ ಇದ್ದು, ಮುಂದಿನ ಎರಡು ದಿನಗಳ ಕಾಲವು ಮುಂದುವರೆಯಲಿದೆ.

ಯೆಲ್ಲೋ (Yellow) ಅಲರ್ಟ್ ಘೋಷಣೆ:

ಉತ್ತರ ಕನ್ನಡ, ಉಡುಪಿ, ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಹಾವೇರಿ, ಕಲಬುರಗಿ, ವಿಜಯಪುರ, ಬಳ್ಳಾರಿ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಮಂಡ್ಯ, ಕೋಲಾರ, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲೂ ಮಳೆಯಾಗಲಿದೆ. ಅದಾಗ್ಯೂ ದಕ್ಷಿಣ ಕನ್ನಡ, ಹಾಸನ, ಕೊಡಗು, ಮೈಸೂರು ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಲಿದ್ದು, ಯೆಲ್ಲೋ (Yellow) ಅಲರ್ಟ್ ಘೋಷಿಸಲಾಗಿದೆ.

ಯಾವ ಜಿಲ್ಲೆಗಳಲ್ಲಿ ಎಷ್ಟೆಷ್ಟು ಉಷ್ಣಾಂಶ ದಾಖಲು?

1. ಬೀದರ್ ನಲ್ಲಿ 16.0 ಡಿಗ್ರಿ ಸೆಲ್ಸಿಯಸ್ ಅತ್ಯಂತ ಕನಿಷ್ಠ ಉಷ್ಣಾಂಶ
2. ಬೆಂಗಳೂರಿನಲ್ಲಿ 25 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 18 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ
3. ಎಚ್ಎಎಲ್ನಲ್ಲಿ 23.3 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 17.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ
4. ಬೆಂಗಳೂರು ನಗರ ಪ್ರದೇಶಗಳಲ್ಲಿ 23.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ
5. ಕೆಐಎಎಲ್ನಲ್ಲಿ 19.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ
6. ಮಂಗಳೂರಿನಲ್ಲಿ 31.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 22.9 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ
7. ಬಾಗಲಕೋಟೆಯಲ್ಲಿ 30.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 22.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ
8. ಹಾಸನದಲ್ಲಿ 29.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 12.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ

 

You might also like
Leave A Reply

Your email address will not be published.