ರಾಮನ ಭಕ್ತರಿಗೆ ಅಯೋಧ್ಯೆಯಲ್ಲಿ ದೊರಕುವ ವಿವಿಧ ಸೌಲಭ್ಯಗಳ ಮಾಹಿತಿ – ಈ ವರದಿ ಓದಿ

ಅಯೋಧ್ಯೆ ಶ್ರೀ ರಾಮಮಂದಿರವು ಈಗಾಗಲೇ ಜಗತ್ತಿನ ಗಮನ ಸೆಳೆದಿದ್ದು, ಉದ್ಘಾಟನೆಯ ನಂತರದಲ್ಲಿ ಪ್ರವಾಸಿಗರ ಸಂಖ್ಯೆಯು ದ್ವಿಗುಣವಾಗಲಿದೆ. ಒಂದು ಅಂದಾಜಿನ ಪ್ರಕಾರ, ಬರುವ ವರ್ಷದಲ್ಲಿ ಕನಿಷ್ಠ ಮೂರು ಲಕ್ಷ ಪ್ರವಾಸಿಗರ ಸಂಖ್ಯೆ ದಾಟಬಹುದು ಎಂದು ಅಂದಾಜಿಸಲಾಗಿದೆ. ಈ ನಿಟ್ಟಿನಲ್ಲಿ ಅಯೋಧ್ಯೆ ನವೀಕರಣ ಯೋಜಿಸುವ ಜವಾಬ್ದಾರಿಯನ್ನು ದೀಕ್ಷು ಕುಕ್ರೇಜಾ ಅವರಿಗೆ ವಹಿಸಿದ್ದಾರೆ.

ಸಿ.ಪಿ. ಕುಕ್ರೇಜಾ ಆರ್ಕಿಟೆಕ್ಟ್ಸ್ ಸಂಸ್ಥೆಯ ಮುಖ್ಯಸ್ಥರಾದ ದೀಕ್ಷು ಅಯೋಧ್ಯೆಯ ವಿವಿಧ ಸೌಕರ್ಯಗಳ ವ್ಯವಸ್ಥೆಗಳ ಕುರಿತು ತೆಗೆದುಕೊಂಡಿರುವ ಪ್ಲ್ಯಾನಿಂಗ್ ಏನು ಎಂಬುದನ್ನು ತಿಳಿಯೋಣ!

1. ಅಪಾರ ಸಂಖ್ಯೆಯ ಪ್ರವಾಸಿಗರಿಗೆ ಆತಿಥ್ಯ ನೀಡಲು ಸಾಧ್ಯವಾಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಅದಕ್ಕಾಗಿ ಹೆಚ್ಚಿನ ಪ್ರವಾಸಿಗರು ಹೋಗುವ ದೇಶ ವಿದೇಶಗಳಲ್ಲಿನ ಇತರ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿನ ಮೂಲಸೌಕರ್ಯ ವ್ಯವಸ್ಥೆಯನ್ನು ಗಮನಿಸಲಾಗಿದೆ.
2. ಆಂಧ್ರದ ತಿರುಪತಿ, ಪಂಜಾಬಿನ ಅಮೃತಸರ್, ಅಷ್ಟೇ ಅಲ್ಲ, ವ್ಯಾಟಿಕನ್ ಸಿಟಿ, ಕಾಂಬೋಡಿಯಾ, ಜೆರುಸಲೆಮ್ ಮೊದಲಾದ ಸ್ಥಳಗಳಲ್ಲಿನ ವ್ಯವಸ್ಥೆಯನ್ನು ಅಧ್ಯಯನ ಮಾಡಲಾಗಿದೆ.
3. ಅಯೋಧ್ಯೆಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಧಕ್ಕೆಯಾಗದ ರೀತಿಯಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು.
4. ನೆಲದ ಸಮರ್ಪಕ ಬಳಕೆ ಮಾಡುವುದು, ಜನದಟ್ಟನೆ ಹೆಚ್ಚಾಗದಂತೆ ನೋಡಿಕೊಳ್ಳುವುದು, ಧರ್ಮಶಾಲೆಗಳು, ಧರ್ಮಛತ್ರಗಳು, ಹೋಮ್ ಸ್ಟೇ ಗಳ ನಿರ್ಮಾಣ ಮಾಡುವುದು ನವೀಕರಣ ಯೋಜನೆಯ ಭಾಗವಾಗಿರುತ್ತವೆ.

‘ಅಯೋಧ್ಯೆಯು ಜಾಗತಿಕ ಪ್ರವಾಸೋದ್ಯಮ ಸ್ಥಳವಾಗಿ ಬೆಳೆಯುವ ನಿರೀಕ್ಷೆ ಇದ್ದು, ಪ್ರವಾಸ, ಆರ್ಥಿಕ ಮತ್ತು ಧಾರ್ಮಿಕ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಲಿದೆ. ಮುಂದಿನ ಮೂರು ನಾಲ್ಕು ವರ್ಷಗಳಲ್ಲಿ ಅಯೋಧ್ಯೆಗೆ ನಿತ್ಯವೂ ಮೂರು ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ಕೊಡುವ ಸಾಧ್ಯತೆ ಇರುತ್ತದೆ’ ಎಂದು ದೀಕ್ಷು ಕುಕ್ರೇಜಾ ಅಭಿಪ್ರಾಯ ಪಟ್ಟಿದ್ದಾರೆ.

You might also like
Leave A Reply

Your email address will not be published.