ಅಯೋಧ್ಯೆಗೆ ಪ್ರಯಾಣಿಸುವ ಕನ್ನಡಿಗರಿಗೆ ಗುಡ್‌ ನ್ಯೂಸ್‌ : ಕರ್ನಾಟಕ ಯಾತ್ರಿ ನಿವಾಸ ನಿರ್ಮಾಣಕ್ಕೆ ಅಸ್ತು

ಇದೇ ಜನವರಿ 22 ರಂದು ಅಯೋಧ್ಯೆಯಲ್ಲಿ (Ayodhya SriRamMandir) ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರದಲ್ಲಿ ರಾಮಲಲ್ಲಾ ಮೂರ್ತಿಯ ಪ್ರತಿಷ್ಠಾಪನೆಯಾಗಲಿದೆ. ಜ.22 ರಿಂದ ಶ್ರೀರಾಮನ ದರ್ಶನವನ್ನು ದೇಶದ ಜನತೆ ಮಾಡಬಹುದು. ಇನ್ನು ಕೆಲವೇ ದಿನಗಳಲ್ಲಿ ಅಯೋಧ್ಯೆ ದೇಶದ ಪ್ರಮುಖ ಭಕ್ತಿಸ್ಥಳವಾಗಿ, ಪ್ರವಾಸಿ ಸ್ಥಳವಾಗಿ ಮಾರ್ಪಡಲಿದೆ.

Ram Lalla Murthy in Sri Rama Mandir

ರಾಜ್ಯ ಸರ್ಕಾರವು ಅಯೋಧ್ಯೆಯ ಶ್ರೀರಾಮ ದರ್ಶನಕ್ಕೆ (Ayodhya SriRamMandir) ತೆರಳುವ ಭಕ್ತಾಧಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅಯೋಧ್ಯೆಯಲ್ಲಿ ಯಾತ್ರಿ ನಿವಾಸ (Karnataka Yatri Niwasa) ನಿರ್ಮಿಸಲು ಸಿದ್ಧತೆ ನಡೆಸಿದೆ. ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯು ಕನ್ನಡಿಗರಿಗೆ ಈ ಮೂಲಕ ಗುಡ್‌ ನ್ಯೂಸ್‌ ಕೊಟ್ಟಿದ್ದು, ಶೀಘ್ರವೇ ಅಯೋಧ್ಯೆಯಲ್ಲಿ ‘ಕರ್ನಾಟಕ ಯಾತ್ರಿ ಭವನ’ ತಲೆ ಎತ್ತಲಿದೆ.

ಕರ್ನಾಟಕದಿಂದ ಸಾಕಷ್ಟು ಸಂಖ್ಯೆಯ ಭಕ್ತರು ಶ್ರೀರಾಮ ದರ್ಶನಕ್ಕಾಗಿ ಅಯೋಧ್ಯೆಗೆ ಬರುತ್ತಾರೆ. ಅವರ ವಸತಿ, ಊಟದ ವ್ಯವಸ್ಥೆಗಾಗಿ ಅತಿಥಿ ಗೃಹ ನಿರ್ಮಾಣ (Karnataka Yatri Niwasa) ಮಾಡಲು ಅವಕಾಶ ಕಲ್ಪಿಸಿಕೊಡುವಂತೆ ರಾಜ್ಯ ಸರ್ಕಾರವು ಉತ್ತರ ಪ್ರದೇಶ ಸರ್ಕಾರಕ್ಕೆ ಪತ್ರ ಬರೆದಿತ್ತು.

2020ರಲ್ಲಿ ಆಗಿನ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು (BS yadiyurappa) ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ (Yogi Adityanath) ಅವರಿಗೆ ಪತ್ರ ಬರೆದು ಸರಯೂ ನದಿ ತೀರದಲ್ಲಿ ಅತಿಥಿ ಗೃಹ ನಿರ್ಮಿಸಲು ಸ್ಥಳಾವಕಾಶ ನೀಡುವಂತೆ ಮನವಿ ಮಾಡಿಕೊಂಡಿದ್ದರು. 2023ರ ಅಗಸ್ಟ್‌ ತಿಂಗಳಲ್ಲಿ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ (Siddaramaiah) ಪತ್ರ ಬರೆದು ವಿನಂತಿಸಿಕೊಂಡಿದ್ದರು. ಈಗ ರಾಜ್ಯದ ಮನವಿಗೆ ಯುಪಿ ಹೌಸಿಂಗ್‌ ಬೋರ್ಡ್‌ ಪ್ರತಿಕ್ರಿಯೆ ಪತ್ರ ಕಳುಹಿಸಿದೆ.

ಯುಪಿ ಸರ್ಕಾರದ ಪ್ರತಿಕ್ರಿಯೆ ಏನು?

ಅಯೋಧ್ಯೆಯಲ್ಲಿ ಕರ್ನಾಟಕ ಅತಿಥಿ ಗೃಹ (Karnataka Yatri Niwasa) ನಿರ್ಮಾಣಕ್ಕೆ ಬೇಕಾದ ಪೂರ್ವ ತಯಾರಿಯನ್ನು ಯುಪಿ ಮುಜರಾಯಿ ಇಲಾಖೆ ಮಾಡುತ್ತಿದೆ. ಈ ಮೂಲಕ ಕರ್ನಾಟಕ ರಾಜ್ಯದ ಪ್ರವಾಸಿಗರಿಗೆ ವಾಸ್ತವ್ಯ ಹೂಡಲು ತೊಂದರೆ ಆಗದಂತೆ ಕ್ರಮಕ್ಕೆ ಮುಂದಾಗಿದ್ದೇವೆ ಅಂತ ತಿಳಿಸಿದೆ.

ಇಡೀ ಭಾರತವೇ ಅಯೋಧ್ಯೆಯ ಶ್ರೀರಾಮ ದರ್ಶನಕ್ಕಾಗಿ (Ayodhya SriRamMandir) ಕಾತರದಿಂದ ಕಾಯುತ್ತಿದೆ. ಕನ್ನಡಿಗರೂ ಅಪಾರ ಪ್ರಮಾಣದಲ್ಲಿ ರಾಮನ ದರ್ಶನಕ್ಕೆ ತೆರಳಲಿದ್ದು, ಅಲ್ಲಿ ಕರ್ನಾಟಕ ಯಾತ್ರಿ ಭವನ ಕನ್ನಡಿಗರ ವಸತಿಗೆ ನೆರವಾಗಲಿದೆ. ಶೀಘ್ರವೇ ಯಾತ್ರಿ ಅಥವಾ ಅತಿಥಿ ಭವನದ ನಿರ್ಮಾಣ ಕಾರ್ಯ ಆರಂಭವಾಗಲಿ, ಪೂರ್ಣಗೊಳ್ಳಲಿ ಎಂದು ರಾಮಭಕ್ತರು ಆಶಿಸುತ್ತಿದ್ದಾರೆ.

You might also like
Leave A Reply

Your email address will not be published.