ನಮ್ಮ ಮೆಟ್ರೋಗೆ ಬಂಪರ್ ಆದಾಯ

ಹೊಸ ವರ್ಷದ ಪ್ರಯುಕ್ತ ಡಿಸೆಂಬರ್ 31 ರಂದು ಬಿ.ಎಂ.ಆರ್.ಸಿ.ಎಲ್ (BMRCL) ಗೆ ಬಂತು ಬಂಪರ್ ಕೊಡುಗೆ. ಒಂದೇ ದಿನದಲ್ಲೇ 1 ಕೋಟಿ 64 ಲಕ್ಷದ 74 ಸಾವಿರದ 918 ರೂಪಾಯಿ ಆದಾಯ ಗಳಿಸಿದ ನಮ್ಮ ಮೆಟ್ರೋ, ಈ ಕುರಿತು ಸಂಪೂರ್ಣ ಮಾಹಿತಿಯನ್ನು ಇದೀಗ ಹಂಚಿಕೊಂಡಿದೆ.

ಹೊಸ ವರ್ಷದ ಹಿನ್ನೆಲೆ ಒಂದೇ ದಿನದಲ್ಲಿ ಅಂದರೆ ಡಿ.31ರಂದು BMRCL ಬರೋಬ್ಬರಿ 1 ಕೋಟಿ 64 ಲಕ್ಷದ 74 ಸಾವಿರದ 918 ರೂಪಾಯಿ ಆದಾಯ ಬಂದಿದೆ. ಹಾಗೆ ಡಿಸೆಂಬರ್ ತಿಂಗಳಲ್ಲಿ ಬರೋಬ್ಬರಿ 2 ಕೋಟಿ ಜನರು ಮೆಟ್ರೋ ಬಳಕೆ ಮಾಡಿದ್ದು, 55 ಕೋಟಿ ರೂ. ಆದಾಯ ಸಂಗ್ರಹವಾಗಿದೆ ಎಂದು ನಮ್ಮ ಮೆಟ್ರೋ ತಿಳಿಸಿದೆ.

BMRCL

ನಮ್ಮ ಮೆಟ್ರೋ ಮೊದಲ ಬಾರಿಗೆ ಒಂದೇ ತಿಂಗಳಲ್ಲಿ ಅತ್ಯಧಿಕ ಪ್ರಯಾಣಿಕರಿಗೆ ಸೇವೆ ನೀಡುವ ಮೂಲಕ ದಾಖಲೆ ಬರೆದಿದೆ. ಇನ್ನೂ ದಿನದಿಂದ ದಿನಕ್ಕೆ ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಕುರಿತಾದ ಅಂಕಿ-ಅಂಶಗಳು ಇಲ್ಲಿದೆ.

•  ಡಿಸೆಂಬರ್ ನ ಒಟ್ಟು ಪ್ರಯಾಣಿಕರ ಸಂಖ್ಯೆ 2,13,34,076
•  ದಿನದ ಸರಾಸರಿ ಪ್ರಯಾಣಿಕರ ಸಂಖ್ಯೆ 6,88,196
•  ಡಿಸೆಂಬರ್ 31 ರಂದು ಒಟ್ಟು ಪ್ರಯಾಣಿಕರ ಸಂಖ್ಯೆ 6,26,202

Bangalore

ಸಾಮಾನ್ಯವಾಗಿ ಭಾನುವಾರ ಮೆಟ್ರೋ ಪ್ರಯಾಣಿಕರ ಸಂಖ್ಯೆ 5 ಲಕ್ಷ ದಾಟೋದು ಡೌಟ್. ಆದರೆ ಡಿ.31ರಂದು ಹೊಸ ವರ್ಷ ಬಂದ ಹಿನ್ನೆಲೆ ಮೆಟ್ರೋ ಸೇವೆಯನ್ನು ರಾತ್ರಿ 2.15 ಗಂಟೆಯವರೆಗೆ ವಿಸ್ತರಿಸಲಾಗಿತ್ತು. ವಿಸ್ತರಣೆಯಿಂದ‌ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಬಾರಿ ಏರಿಕೆಯಾಗಿತ್ತು.

ಜನದಟ್ಟಣೆ ಹೆಚ್ಚಿರುವ ಹಿನ್ನೆಲೆ ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ನಿಲ್ದಾಣಗಳಲ್ಲಿ ಮಧ್ಯರಾತ್ರಿ ಟಿಕೆಟ್‌ ವಿತರಣೆ ನಿಷೇಧಗೊಳಿಸಲಾಗಿದ್ದು, ಆ ನಿಲ್ದಾಣಗಳಿಂದ ಪ್ರಯಾಣಿಸುವವರಿಗೆ 50 ರೂಪಾಯಿ ರಿಟರ್ನ್‌ ಜರ್ನಿ ಪೇಪರ್‌ ಟಿಕೆಟ್ ಗಳನ್ನು ವಿತರಿಸಲಾಗಿತ್ತು. ಕೆಲ ಪ್ರಯಾಣಿಕರು ರಿಟರ್ನ್ ಜರ್ನಿ ಟಿಕೇಟ್ ಗಳನ್ನು ಮುಂಚಿತವಾಗಿಯೇ ಖರೀದಿ ಮಾಡಿದ್ದರು. ಇನ್ನು ಸ್ಮಾರ್ಟ್‌ ಕಾರ್ಡ್ ಮತ್ತು ಕ್ಯೂಆರ್‌ ಕೋಡ್ ಟಿಕೆಟ್‌‌ ಗೆ ಎಂದಿನಂತೆ ರಿಯಾಯಿತಿ ಇತ್ತು. ಅಲ್ಲದೆ ರಾತ್ರಿ 11.30ರ ನಂತರ ಎಂ.ಜಿ. ರಸ್ತೆಯ ಮೆಟ್ರೋ ನಿಲ್ದಾಣ ಪ್ರವೇಶ ನಿರ್ಬಂಧವಿತ್ತು.

You might also like
Leave A Reply

Your email address will not be published.