“ಐರನ್ ಲೇಡಿ”ಯ ಮಾರ್ಗದಲ್ಲಿ ರಾಹುಲ್, ಸೋನಿಯಾ.

ಪ್ರಸ್ತುತ ವಯನಾಡಿನ ಲೋಕಸಭಾ ಸದಸ್ಯರಾಗಿರುವ ಕಾಂಗ್ರೆಸ್’ನ ಯುವರಾಜ ರಾಹುಲ್ ಗಾಂಧಿಯವರು, 2024ರ ಲೋಕಸಭಾ ಚುನಾವಣೆಯಲ್ಲಿ 2 ಕ್ಷೇತ್ರಗಳಿಂದ ಸ್ಪರ್ಧೇ ಮಾಡಲಿದ್ದಾರೆ. ಅದರಲ್ಲಿ ಕರ್ನಾಟಕದ ಒಂದು ಲೋಕಸಭಾ ಕ್ಷೇತ್ರವು ಕೂಡ ಸೇರ್ಪಡೆಯಾಗಿದೆ ಎಂದು ಕಾಂಗ್ರೆಸ್’ನ ಮೂಲಗಳಿಂದ ತಿಳಿದು ಬರುತ್ತಿವೆ. ಇದರ ಬೆನ್ನಲ್ಲೇ ರಾಹುಲ್ ಗಾಂಧಿಯವರ ತಾಯಿಯವರಾದ ಸೋನಿಯಾ ಗಾಂಧಿ ಅಲಿಯಾಸ್ ಆಂಟೋನಿಯ ಅಲ್ಬೀನ ಮೈನೊ ಅವರು 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ಬದಲಿಗೆ ರಾಜ್ಯಸಭಾ ಸದಸ್ಯರಾಗಿ ಸಂಸತ್ತಿಗೆ ಪ್ರವೇಶ ಮಾಡುತ್ತಾರೆ. ಅದು ಕೂಡ ಕರ್ನಾಟಕದಿಂದಲೇ ಸ್ಪರ್ಧೆ ಮಾಡಲಿದ್ದಾರೆ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಹೇಳುತ್ತಿದೆ.

ಮೇಲಿನ ವಿಚಾರವನ್ನು ಗಮನಿಸಿ ನೋಡಿದಾಗ, ಕಾಂಗ್ರೆಸ್’ನ ಕಿಂಗ್ ಮೇಕರ್ಸ್ ಎಂದು ಕರೆಸಿಕೊಳ್ಳುವ ರಾಹುಲ್ ಹಾಗೂ ಸೋನಿಯಾ ಗಾಂಧಿಯವರಿಗೆ ತಮ್ಮ ಮುಂದಿನ ರಾಜಕೀಯ ಜೀವನ ಏನೇ ಇದ್ದರೂ ಅದು ಕರ್ನಾಟಕದಿಂದಲೇ ಎಂದು ನಿರ್ಧಾರಿಸಿರುವ ಹಾಗಿದೆ. ಕಾರಣ ಡಿಸೆಂಬರ್ 3ನೇ ಮತ್ತು 4ನೇ ತಾರೀಕಿನಂದು ಹೊರಬಿದ್ದ ಪಂಚರಾಜ್ಯ ಚುನಾವಣಾ ಫಲಿತಾಂಶದಿಂದ. ಈ ಒಂದು ಚುನಾವಣೆಯಲ್ಲಿ ಕಾಂಗ್ರೆಸ್ 5ರಲ್ಲಿ 4 ರಾಜ್ಯದಲ್ಲಿ ಹೀನಾಯವಾಗಿ ಸೋಲನ್ನು ಕಂಡಿರುವುದರಿಂದ, ಈ ಫಲಿತಾಂಶಗಳನ್ನು ಗಮನದಲ್ಲಿ ಇಟ್ಟುಕೊಂಡಿರುವ ರಾಹುಲ್ ಹಾಗೂ ಸೋನಿಯ ಹಿಂದೆ ಸ್ಪರ್ಧೆ ಮಾಡಿರುವ ಜಾಗದಲ್ಲಿ ಮತ್ತೆ ಸ್ಪರ್ಧೆ ಮಾಡಿದರೆ ತಮ್ಮ ರಾಜಕೀಯ ಜೀವನ ಮುಗಿದಂತೆ ಎಂದು ಆಲೋಚಿಸಿರಬಹುದು. ಅದಕ್ಕಾಗಿ ಕರ್ನಾಟಕದಲ್ಲಿ ಬಹು ಮತಗಳೊಂದಿಗೆ ಗೆದ್ದಿರುವುದರಿಂದ ಕರ್ನಾಟಕದಿಂದಲೇ ಅಮ್ಮ ಮಗ ಸ್ಪರ್ಧೆ ಮಾಡಬಹುದು ಎಂದು ಮೂಲಗಳು ಹೇಳುತ್ತಿವೆ.

ಈ ಎಲ್ಲಾ ಅಂಶಗಳನ್ನು ಗಮನಿಸಿ ನೋಡಿದಾಗ, ಎಲ್ಲೋ ಒಂದು ಕಡೆ ರಾಹುಲ್ ಹಾಗೂ ಸೋನಿಯಾ ಗಾಂಧಿಯವರು ಐರನ್ ಲೇಡಿ ಇಂದಿರಾ ಗಾಂಧಿಯವರ ಮಾರ್ಗದಲ್ಲಿ ನಡೆಯುವ ತಂತ್ರ ಮಾಡಿದ್ದಾರೆ ಎಂದು ಮೇಲ್ನೋಟಕೆ ಕಂಡು ಬರುತ್ತದೆ.

You might also like
Leave A Reply

Your email address will not be published.