ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣ – ಆರೋಪಿಗಳಿಗೆ ವಿದೇಶದಿಂದ ಹಣ ವರ್ಗಾವಣೆ

ಬೆಂಗಳೂರಿನ ರಾಮೇಶ್ವರಂ ಕೆಫೆಯ ಸ್ಫೋಟದ ವಿಚಾರವಾಗಿ ರಾಷ್ಟ್ರೀಯ ತನಿಖಾ ದಳವು ಈಗಾಗಲೇ ಕೆಲವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದೆ ಹಾಗೂ ಘಟನೆಯಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭಾಗವಹಿಸಿದ ಕೆಲವರನ್ನು ಈಗಾಗಲೇ ಸಾಕ್ಷಿಯಾಗಿ ಕೂಡಾ ಪರಿಗಣಿಸಿದೆ. ಈಗ ಈ ಘಟನೆಗೆ ಸಂಬಂಧಿಸಿದಂತೆ ಇನ್ನೊಂದು ಸ್ಫೋಟಕ ವಿಚಾರ ಬೆಳಕಿಗೆ ಬರುತ್ತಿದ್ದು ಕೆಫೆಯನ್ನು ಸ್ಫೋಟಿಸಿದ ಆರೋಪಿಗಳಿಗೆ ವಿದೇಶದಿಂದ ಧನ ಸಹಾಯ ದೊರೆತಿರಬಹುದು ಎಂಬ ಮಹತ್ತರವಾದ ವಿಷಯ ಈಗ ಬೆಳಕಿಗೆ ಬರುತ್ತಿದೆ.

ಸ್ಫೋಟದ ಆರೋಪಿಗಳಿಗೆ ವಿದೇಶಿ‌ಮೂಲದಿಂದ ಕ್ರಿಪ್ಟೋ ಕರೆನ್ಸಿಯ ಮೂಲಕ ಧನ ಸಹಾಯ ಒದಗಿಸಿರಬಹುದು ಎಂದು ಹೇಳಲಾಗುತ್ತಿದ್ದು, ಕೆಲವು ವರದಿಗಳ ಪ್ರಕಾರ ಇನ್ನುಮುಂದೆ ಸ್ಫೋಟದ ಸಂಚು ಹೂಡಲು ದೇವಸ್ಥಾನದಂತ ಜಾಗಗಳೇ ಆಗಬೇಕಿಲ್ಲ ಸಾರ್ವಜನಿಕರನ್ನು ಭಯಭೀತಗೊಳಿಸಲು ಜನಸಂದಣಿ ಇರುವ ಯಾವುದೇ ಜಾಗವನ್ನು ಆಯ್ದುಕೊಳ್ಳುವ ಸಾಧ್ಯತೆ ಇರುತ್ತದೆ ಎನ್ನಲಾಗಿದೆ.

ಇನ್ನೊಂದು ಮಾಧ್ಯಮದ ವರದಿಯ ಪ್ರಕಾರ 2020 ನೇ ಸಾಲಿನಲ್ಲಿ ಮಂಗಳೂರಿನ ಸಾರ್ವಜನಿಕ ಪ್ರದೇಶದ ಗೋಡೆಯೊಂದರ ಮೇಲೆ ಐಸಿಸ್‌ಗೆ ಸಂಭಂಧಿಸಿದ ಗೀಚು ಬರಹ ಬರೆದು ಪರಾರಿಯಾದವರೇ ಈಗ ರಾಮೇಶ್ವರ ಕೆಫೆ ಸ್ಪೋಟ ಆರೋಪಿಗಳು ಎಂದು ಗುರುತಿಸಲಾಗಿದ್ದು ಅದರಲ್ಲಿ ತೀರ್ಥಹಳ್ಳಿ ಮೂಲದ ಶಾರಿಖ್ ಎಂಬಾತ ಕೂಡಾ ಸೇರಿದ್ದಾನೆ. 2020ನೇ ಸಾಲಿನಿಂದ ಇಲ್ಲಿಯ ತನಕ ಎಲ್ಲೂ ಕಾಣಿಸಿಕೊಳ್ಳದೇ ಈಗ ಹಠಾತ್ ರಾಮೇಶ್ವರ ಕೆಫೆಯ ಸ್ಫೋಟದಲ್ಲಿ ಅವರು ಭಾಗವಹಿಸಿದ್ದರ ಹಿಂದೆ ನೆರವಿನ ರೂಪದಲ್ಲಿ ವಿದೇಶದಿಂದ ನೇರವಾಗಿ ಹಣ ಪಡೆದ ಸಾಧ್ಯತೆ ದಟ್ಟವಾಗಿದೆ ಎನ್ನಲಾಗುತ್ತಿದೆ.

Rameswaram cafe blast case - Transfer of money from abroad to the accused

ಇನ್ನು ಮೂಲಗಳ ಪ್ರಕಾರ, ಕೆಫೆಯನ್ನು ಆಯ್ದುಕೊಂಡ ಕಾರಣಗಳನ್ನು ನೋಡುವುದಾದರೆ ಅಲ್ಲಿ ಜಾಸ್ತಿ‌ಜನ ಸೇರುವುದರಿಂದ ಸ್ಫೋಟಗೊಳಿಸುವ ಮೂಲಕ ಇನ್ನೂ ಹೆಚ್ಚಿನ ಪ್ರಚಾರ ಪಡೆಯಲು ಆರೋಪಿಗಳು ರಾಮೇಶ್ವರಂ ಕೆಫೆಯನ್ನು ಆಯ್ದುಕೊಂಡಿದ್ದು, ಮಧ್ಯಾಹ್ನ ಊಟದ ಸಮಯದಲ್ಲಿ ಅಂತರರಾಷ್ಟ್ರೀಯ ಕಂಪೆನಿಯಲ್ಲಿ ಕೆಲಸ ಮಾಡುವ ಹೆಚ್ಚಿನ ಸಾಪ್ಟ್‌ವೇರ್ ಉದ್ಯೋಗಿಗಳೇ ಅಲ್ಲಿ ಬರುವುದರಿಂದ ಕಂಪನಿಗೆ ಭಾರತದ ಅವರಿಗೆ ಅಸುರಕ್ಷಿತ ಎಂಬ ಸಂದೇಶ ನೀಡುವ ಕೆಲಸ ಎರಡನೆಯದ್ದಾಗಿತ್ತು ಎಂದು ಬಹಿರಂಗಪಡಿಸಿದೆ.

ರಾಮೇಶ್ವರ ಕೆಫೆಯು ಆರೋಪಿಗಳ ಸ್ಪೋಟಿಸಬೇಕಾದ ಜಾಗಗಳ ಪಟ್ಟಿಯಲ್ಲಿ ಇರಲೇ ಇಲ್ಲ, ಕೊನೆಯ ಕ್ಷಣದಲ್ಲಿ ಸೇರಿಕೊಂಡಿತು.‌ ಸ್ಫೋಟಕ್ಕೂ ಮುನ್ನ ಆರೋಪಿಗಳು ಭಾರತದ ಹಲವು ಪ್ರವಾಸಿ ತಾಣಗಳನ್ನು ಸುತ್ತಿ ಸ್ಫೋಟಿಸಲು ಸೂಕ್ತ ಜಾಗ ಪರಿಶೀಲನೆ ಮಾಡಿದ್ದರು ಎನ್ನಲಾಗಿದೆ. ‌

ರಾಮೇಶ್ವರ ಕೆಫೆ ಸ್ಫೋಟವು ಐಸಿಸ್ ಹಾಗೂ ಇತರ ಭಯೋತ್ಪಾದನಾ ಘಟಕಗಳೊಂದಿಗೆ ಸಂಭಾವ್ಯ ನಂಟನ್ನು ಹೊಂದಿರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಅಷ್ಟೇ ಅಲ್ಲದೇ, ಮಂಗಳೂರು ಕುಕ್ಕರ್ ಸ್ಫೋಟ ಪ್ರಕರಣದಂತೆಯೇ ಇದೂ ಕೂಡಾ ಇರುವುದರಿಂದ ಎರಡೂ ಘಟನೆಗೆ ಇರುವ ಸಾಮ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಮೂಲಗಳು ಹೇಳುತ್ತಿವೆ.

You might also like
Leave A Reply

Your email address will not be published.