ಅಶ್ವಿನಿ ಪುನೀತ್‌ʼ ರಾಜ್‌ʼಕುಮಾರ್ʼಗೆ ಅಪಮಾನ : ಕಿಡಿಗೇಡಿ ಅಭಿಮಾನಿಗಳ ಬೆಂಡೆತ್ತಿದ ನಟ ಜಗ್ಗೇಶ್

ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದವರ ವಿರುದ್ಧ ಕ್ರಮಕ್ಕೆ ದಿನದಿಂದ ದಿನಕ್ಕೆ ಒತ್ತಡ ಹೆಚ್ಚಾಗುತ್ತಿದ್ದು, ಅಪ್ಪು ಅಭಿಮಾನಿಗಳಲ್ಲದೇ, ಸಿನಿಮಾ ರಂಗದ ಅನೇಕರು ಹಾಗೂ ಸಾಮಾಜಿಕ ಜಾಲತಾಣಗಳು ಈಗಾಗಲೇ ಅಶ್ವಿನಿ ವಿರುದ್ಧ ಹಾಕಿದ ಪೋಸ್ಟ್ ವಿರುದ್ಧ ಧ್ವನಿ ಎತ್ತಿದ್ದಾರೆ. ಈಗ ಅಪ್ಪು ಫ್ಯಾನ್ಸ್ ಗೃಹ ಸಚಿವರನ್ನು ಭೇಟಿ ಮಾಡಿ, ಕ್ರಮಕ್ಕಾಗಿ ಒತ್ತಾಯ ಮಾಡಿದ್ದಾರೆ. ಈ ಕುರಿತಂತೆ ಸಿಎಂ ಸಿದ್ಧರಾಮಯ್ಯ ಕೂಡ ಕಠಿಣ ಕ್ರಮದ ಮಾತುಗಳನ್ನು ಆಡಿದ್ದಾರೆ. ಅಷ್ಟಕ್ಕೂ ನಡೆದ ಘಟನೆ ಏನು?

ಕಳೆದ ಮಾರ್ಚ್ ತಿಂಗಳು 19ನೇ ತಾರೀಕಿನಂದು ಬೆಂಗಳೂರಿನ ಆರ್‌’ಸಿಬಿ ಅನ್‌’ಬಾಕ್ಸ್ ಇವೆಂಟ್‌’ನಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರನ್ನು ಆಹ್ವಾನಿಸಿದ್ದರು. ಅದರಂತೆ ಅಶ್ವಿನಿ ಅವರು ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದಾದ ನಂತರ ಐಪಿಎಲ್ ಪ್ರಾರಂಭವಾಗಿ ಆರ್‌’ಸಿಬಿ ತಂಡ ಕೆಲ ಪಂದ್ಯಗಳಲ್ಲಿ ಸೋತಿದೆ.

ದರ್ಶನ್, ಸುದೀಪ್ ಹೆಸರಲ್ಲಿ ಅಶ್ವಿನಿ ಹೆಸರಿಗೆ ಕಳಂಕ: ಏನದು ಸ್ಟೋರಿ?

ದರ್ಶನ್ ಅಭಿಮಾನಿ ಎಂದು ಹೇಳಿಕೊಂಡಿರುವ ಗಜಪಡೆ ಹೆಸರಿನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ, ಅಶ್ವಿನಿ ಪುನೀತ್ ರಾಜ್‌’ಕುಮಾರ್ ಅವರು ಆರ್‌’ಸಿಬಿ ಕಾರ್ಯಕ್ರಮಕ್ಕೆ ಬಂದಿದ್ದಕ್ಕೆ ತಂಡ ಸೋತಿದೆ ಎಂದು ನಿಂದಿಸಲಾಗಿದೆ.

ಅಭಿಮಾನಿಗಳಿಂದ ವಿರೋಧ ವ್ಯಕ್ತವಾಗುತ್ತಿದ್ದಂತೆ ‘ಸುದೀಪ್ ಅಭಿಮಾನಿ’ ಎಂದು ಖಾತೆಯ ಹೆಸರು ಬದಲಿಸಿದ್ದಾರೆ. ಇದರ ವಿರುದ್ಧ ಅಪ್ಪು ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಕಾನೂನು ಸಮರ ಸಾರಿದ್ದಾರೆ.

ಅಶ್ವಿನಿ ಪುನೀತ್ ರಾಜ್‌’ಕುಮಾರ್ ಬಗ್ಗೆ ಬರೆದ ಕೀಳು ಮಟ್ಟದ ಪೋಸ್ಟ್‌’ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಅದರಲ್ಲೂ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವಹೇಳನಕಾರಿ ಪೋಸ್ಟ್ ಮಾಡಿದವರ ವಿರುದ್ಧ ಈಗಾಗಲೇ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್‌’ಐಆರ್ ದಾಖಲಿಸಲಾಗಿದೆ.

ಅಶ್ವಿನಿ ಪರ ನಿಂತ ನವರಸನಾಯಕ:

ಆರ್‌’ಸಿಬಿ ಸೋಲಿಗೆ ಅಶ್ವಿನಿ ಅವರೇ ಕಾರಣ ಎಂದು ನಿಂದಿಸಿದವರಿಗೆ ನವರಸನಾಯಕ ಜಗ್ಗೇಶ್ ಕೂಡ ಸಾಮಾಜಿಕ ಜಾಲತಾಣದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಹೆಣ್ಣು ಕುಲಕ್ಕೆ ಅಗೌರವ ತೋರಿಸಿದರೆ ಉದ್ಧಾರ ಆಗ್ತಾರಾ ಎಂದು ಜಗ್ಗೇಶ್ ಹಿಡಿಶಾಪ ಹಾಕಿದ್ದಾರೆ.

ಪುನೀತನ ಮಡದಿ ಅಣಕಿಸಿದ ನತದೃಷ್ಟರೆ ನಿಮಗೂ ತಾಯಿ ಇರಬೇಕು. ತಾಯಿ ಬೆಲೆ ಗೊತ್ತಿರಬೇಕು. ಒಂದು ವೇಳೆ, ತಾಯಿ ಮತ್ತು ಹೆಣ್ಣಿಗೆ ಗೌರವ ಕೊಡಲ್ಲ ಎಂದರೆ ಖಂಡಿತಾ ಅಂಥವರು ಮನುಕುಲಕ್ಕೆ ಅನರ್ಹ. ಪುನೀತ್ ಮಡದಿ ಅನಾಥೆಯಲ್ಲ. ಪುನೀತ್ ತನ್ನನ್ನು ಪ್ರೀತಿಸುತ್ತಿದ್ದ ಕೋಟ್ಯಾಂತರ ಅಭಿಮಾನಿಗಳನ್ನು ಬಳುವಳಿ ಕೊಟ್ಟು ಹೋಗಿದ್ದಾನೆ ಎಂದು ಜಗ್ಗೇಶ್ ಅಪ್ಪು ಅಭಿಮಾನಿಗಳ ಕಡೆ ತೋರಿಸಿದ್ದಾರೆ. ಹೆಣ್ಣು ಕುಲಕ್ಕೆ ನೋವು ಕೊಟ್ಟವ ಉದ್ಧಾರ ಆದ ಇತಿಹಾಸವಿಲ್ಲ ಎಂದು ಜಗ್ಗೇಶ್ ಅಶ್ವಿನಿ ಪರ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಜಗ್ಗೇಶ್ ಪ್ರತಿಕ್ರಿಯೆ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

You might also like
Leave A Reply

Your email address will not be published.