2047ರ ವರೆಗೂ ಭಾರತದ ಜಿಡಿಪಿ ದರ ಶೇ. 8ರಷ್ಟಿರಲಿದೆ ಎಂದ ಸುಬ್ರಮಣಿಯನ್‌ – ಅಧಿಕೃತ ಹೇಳಿಕೆ ಅಲ್ಲವೆಂದ ವಿಶ್ವಸಂಸ್ಥೆ

ಭಾರತದ ಆರ್ಥಿಕ ಬೆಳವಣಿಗೆ ಕುರಿತಂತೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಕಾರ್ಯ ನಿರ್ವಾಹಕ ನಿರ್ದೇಶಕ ಕೃಷ್ಣಮೂರ್ತಿ ಸುಬ್ರಮಣಿಯನ್ ನೀಡಿರುವ ಹೇಳಿಕೆ ವೈಯಕ್ತಿಕ. ಅದು ಐಎಂಎಫ್ ನ ಅಧಿಕೃತ ಹೇಳಿಕೆಯಲ್ಲ ಎಂದು ಐಎಂಎಫ್ ವಕ್ತಾರೆ ಜೂಲಿ ಕೊಜಾಕ್ ಹೇಳಿದ್ದಾರೆ. ಅಷ್ಟಕ್ಕೂ ಸುಬ್ರಮಣಿಯನ್ ಹೇಳಿದ್ದೇನು? ಇದಕ್ಕೆ ಜೂಲಿ ಕೊಜಾಕ್ ಕೊಟ್ಟ ಪ್ರತಿಕ್ರಿಯೆ ಏನು?

“ಕಳೆದ ಹತ್ತು ವರ್ಷಗಳಲ್ಲಿ ಕೇಂದ್ರ ಸರಕಾರ ಉತ್ತಮ ಆರ್ಥಿಕ ನೀತಿಗಳನ್ನು ರೂಪಿಸಿದ್ದು, ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ. ಇನ್ನಷ್ಟು ಸುಧಾರಣೆಗಳನ್ನು ಮಾಡಿದರೆ, 2047ರ ತನಕ ಭಾರತದ ಜಿಡಿಪಿ ದರ ಶೇ. 8ರಷ್ಟಿರಲಿದೆ,” ಎಂದು ಕೃಷ್ಣಮೂರ್ತಿ ಸುಬ್ರಮಣಿಯನ್ ಅವರು ಇತ್ತೀಚೆಗೆ ಹೇಳಿಕೆ ನೀಡಿದ್ದರು. ಇದು ತೀವ್ರ ಚರ್ಚೆಗೆ ಒಳಗಾಗಿತ್ತು.

India's GDP rate will be 8 percent till 2047- Subramanian

ಇದಕ್ಕೆ ಪ್ರತಿಕ್ರಿಯಿಸಿರುವ ಐಎಂಎಫ್ ವಕ್ತಾರೆ ಜೂಲಿ ಕೊಜಾಕ್, “ಕೃಷ್ಣಮೂರ್ತಿ ಸುಬ್ರಮಣಿಯನ್ ಅವರು ಐಎಂಎಫ್’ನಲ್ಲಿ ಭಾರತವನ್ನಷ್ಟೇ ಪ್ರತಿನಿಧಿಸುತ್ತಾರೆ. ಅವರ ಹೇಳಿಕೆಯು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ನೀತಿ ಮತ್ತು ಧೋರಣೆಗಳನ್ನು ಪ್ರತಿಬಿಂಬಿಸುವುದಿಲ್ಲ. ಕಾರ್ಯಕಾರಿ ಮಂಡಳಿಯ ಕಾರ್ಯ ನಿರ್ವಾಹಕ ನಿರ್ದೇಶಕರು ಆಯಾ ರಾಷ್ಟ್ರಗಳನ್ನಷ್ಟೇ ಪ್ರತಿನಿಧಿಸುತ್ತಾರೆ. ಶೀಘ್ರದಲ್ಲೇ ವಿಶ್ವ ಆರ್ಥಿಕತೆಯ ಮುನ್ನೋಟದ ವರದಿಯನ್ನು ಪರಿಷ್ಕರಿಸಿ ಪ್ರಕಟಿಸಲಾಗುತ್ತದೆ,” ಎಂದು ತಿಳಿಸಿದ್ದಾರೆ.

You might also like
Leave A Reply

Your email address will not be published.