AI ತಂತ್ರಜ್ಞಾನ ಬಳಸಿ ಮಗುವಿನ ಪ್ರಾಣ ಕಾಪಾಡಿದ ಬಾಲಕಿ – ಪ್ರಶಂಸೆಗಳ ಸುರಿಮಳೆ

ತಂತ್ರಜ್ಞಾನವನ್ನು ಸರಿಯಾಗಿ ಬಳಸಲು ಕಲಿತಲ್ಲಿ ಎಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲದು ಎಂಬುದಕ್ಕೆ ಉದಾಹರಣೆ ಉತ್ತರ ಪ್ರದೇಶದಲ್ಲಿ ನಡೆದ ಈ ಘಟನೆ. ‌AI ಸಾಧನ ಅಲೆಕ್ಸಾ ಸಹಾಯದಿಂದ ಇಲ್ಲೋರ್ವ 13 ವರ್ಷದ ಬಾಲಕಿ ತನ್ನನ್ನು ರಕ್ಷಿಸಿಕೊಂಡು ತನ್ನ ಪುಟ್ಟಸೊಸೆಯನ್ನೂ ಕೂಡಾ ರಕ್ಷಿಸಿದ ಘಟನೆ ವರದಿಯಾಗಿದೆ.

ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ 13 ವರ್ಷದ ನಿಖಿತಾ ತನ್ನ ಒಂದು ವರ್ಷದ ಸೊಸೆಯೊಂದಿಗೆ ಆಟವಾಡುತ್ತಿದ್ದಾಗ ಮಂಗವೊಂದು ದಾಳಿ ಮಾಡಿದೆ. ಅಮೆಜಾನ್ ವರ್ಚುವಲ್ ಧ್ವನಿಯ ಸಹಾಯದ ಮೂಲಕ ನಿಖಿತಾ ಕೋತಿಯನ್ನು ಹೆದರಿಸಿ ಬಚವಾಗಿದ್ದಾಳೆ. ಮನೆಗೆ ಬಂದ ಅತಿಥಿಗಳು ತೆರೆದ ಗೇಟ್ ಬಾಗಿಲನ್ನು ಮುಚ್ಚಲು ಮರೆತು ಹಾಗೆಯೇ ಒಳಗೆ ಹೋಗಿದ್ದಾರೆ ಅದೇ ಗೇಟ್‌ನಿಂದ ಒಳಗೆ ಬಂದ ಕೋತಿಯೊಂದು ಅಡುಗೆ ಮನೆಗೆ ಪ್ರವೇಶಿಸಿ ಎಲ್ಲೆಂದರಲ್ಲಿ ಪಾತ್ರೆಗಳನ್ನು ಎಸೆಯಲು ಪ್ರಾರಂಭಿಸಿತು ಮತ್ತು ಮಗುವಿನ ಮೇಲೆ ದಾಳಿ ಎಸಗಲು ಆರಂಭಿಸಿತು. ‌

ಮಗು ಹೆದರಿ ತನ್ನ ತಾಯಿಯನ್ನು ಕರೆಯಲು ಪ್ರಾರಂಭಿಸಿದಾಗ ಆ ಕೋತಿ ಇನ್ನಷ್ಟು ಪ್ರಚೋದನೆಗೊಂಡಿತು ಇನ್ನೊಂದು ಕೋಣೆಯಲ್ಲಿದ್ದ ನಿಖಿತಾ ಧಾವಿಸಿ ಅಮೆಜಾನ್‌ನ ಅಲೆಕ್ಸಾಗೆ ನಾಯಿಯಂತೆ‌ ಬೊಗಳುವ ಹಾಗೆ ಆದೇಶ ನೀಡಿದಳು. ಅಲೆಕ್ಸಾವು ನಾಯಿಯಂತೆ ಜೋರಾಗಿ ಬೊಗಳುವ ಶಬ್ದ‌ಮಾಡಿ ಕೋತಿಯನ್ನು ಹೆದರಿಸಿತು. ಇನ್ನು ANI ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ನಿಖಿತಾ, ‘ಕೆಲವು ಅತಿಥಿಗಳು ನಮ್ಮ ಮನೆಗೆ ಭೇಟಿ ನೀಡಿದರು ಮತ್ತು ಅವರು ಗೇಟ್ ಅನ್ನು ತೆರದರು. ಮಂಗಗಳು ಅಡುಗೆ ಕೋಣೆಗೆ ನುಗ್ಗಿ ವಸ್ತುಗಳನ್ನು ಅಲ್ಲಿ ಇಲ್ಲಿ ಎಸೆಯಲು ಪ್ರಾರಂಭಿಸಿದವು. ಮಗು ಹೆದರಿಕೊಂಡು ಕೂಗಲು ಆರಂಭಿಸಿತು, ನಾನು ಅಲೆಕ್ಸಾದೊಂದಿಗೆ ನಾಯಿಯಂತೆ ಬೊಗಳುವಂತೆ ಆದೇಶ ನೀಡಿದೆ, ಆ ಬೊಗಳುವಿಕೆಯ ಶಬ್ದ ಕೇಳಿ ಕೋತಿಗಳು ಹೆದರಿ ಓಡಿಹೋದವು ಎಂದು ತಿಳಿಸಿದ್ದಾರೆ.

ಕಳೆದ ವರ್ಷ ನವೆಂಬರ್‌ನಲ್ಲಿ ಗುಜರಾತ್‌ನ ಗಾಂಧಿನಗರದಲ್ಲಿ ಸ್ನೇಹಿತರೊಂದಿಗೆ ಆಟವಾಡುತ್ತಿದ್ದ ಹತ್ತು ವರ್ಷದ ಬಾಲಕನ ಮೇಲೆ ಕೋತಿಗಳ ಭಯಾನಕ ದಾಳಿ ನಡೆದು, ಕೋತಿಗಳ ದಾಳಿಯಲ್ಲಿ ಆ ಬಾಲಕನ ಕರುಳನ್ನೇ ಕಿತ್ತ ಪರಿಣಾಮ ಆಸ್ಪತ್ರೆಗೆ ಸಾಗಿಸುವಷ್ಟರಲ್ಲೇ ಮೃತಪಟ್ಟ ಘಟನೆ ಕಣ್ಣಮುಂದೆಯೇ ಇದೆ. ಉತ್ತರ ಪ್ರದೇಶದ ಈ ಘಟ‌ನೆಯಲ್ಲಿ ತಂತ್ರಜ್ಞಾನದ ಸರಿಯಾದ ಬಳಕೆಯಿಂದ ತನ್ನ ಜೀವದ ಜೊತೆಗೆ ಮಗುವಿನ ಜೀವ ಉಳಿಸಿದ ಈಗ ನಿಖಿತಾಳ ಸಮಯ ಪ್ರಜ್ಞೆಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

You might also like
Leave A Reply

Your email address will not be published.