ಏಕಾಏಕಿ ಕುಸಿದು ಬಿದ್ದ 120 ಅಡಿ ಎತ್ತರದ ತೇರು – ಅದೃಷ್ಟವಶಾತ್‌ ಪಾರಾದ ಜನತೆ

ರಾಜಧಾನಿ ಬೆಂಗಳೂರಿನ ಹೊರ ವಲಯದಲ್ಲಿರುವ ಆನೇಕಲ್ ತಾಲೂಕಿನ ಹುಸ್ಕೂರಿನ ಮದ್ದೂರಮ್ಮ ಜಾತ್ರೆಯಲ್ಲಿ ಸುಮಾರು 120 ಅಡಿ ಎತ್ತರದ ತೇರು ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಆನೇಕಲ್ ತಾಲೂಕಿನ ಹೀಲಲಿಗೆಯಿಂದ ಹುಸ್ಕೂರಿಗೆ ಸುಮಾರು 70 ಎತ್ತುಗಳು ಹಾಗೂ ಟ್ರ್ಯಾಕ್ಟರ್ ಮೂಲಕ ತೇರನ್ನು ಎಳೆದುಕೊಂಡು ಹೋಗಲಾಗುತ್ತಿತ್ತು. ಆದರೆ, ಹೀಲಲಿಗೆ ಗ್ರಾಮದ ಬಳಿ ವಾಲಿಕೊಂಡು ಬಿದ್ದಿದೆ. ಇನ್ನೂ ರಥವು ಹೆಚ್ಚು ಎತ್ತರದಲ್ಲಿದ್ದ ಕಾರಣ ನಿಯಂತ್ರಣ ತಪ್ಪಿ ತೇರು ಕುಸಿದು ಬಿದ್ದಿದೆ ಎಂದು ತಿಳಿದುಬಂದಿದೆ.

You might also like
Leave A Reply

Your email address will not be published.