Rupert Murdoch : 92 ರ ಇಳಿಯವಸ್ಸಲ್ಲೂ 5ನೇ ಮದುವೆಗೆ ಸಿದ್ಧನಾದ ಮಾಧ್ಯಮ ಲೋಕದ ದಿಗ್ಗಜ

20-30 ವರ್ಷಕ್ಕೆ ಮೂಗುಮುರಿಯುವ ಈ‌ ಕಾಲಘಟ್ಟದಲ್ಲಿ ಈ ವ್ಯಕ್ತಿ ತಮ್ಮ 92ನೇ ಇಳಿವಯಸ್ಸಿನಲ್ಲೂ ಮದುವೆ ಆಗುವ ಉತ್ಸಾಹ ತೋರಿರುವುದು ಹಲವರಲ್ಲಿ ಅಚ್ಚರಿ ಮೂಡಿಸಿದೆ. ಯಾರಪ್ಪ ಈ ಮಹಾನುಭಾವ? ಅಷ್ಟಕ್ಕೂ ಇವರನ್ನು ಕೈ ಹಿಡಿಯುವ ಆ ವಧು ಯಾರಪ್ಪ, ಅಂತೀರ? ಇದಕ್ಕೆ ಈ ಸ್ಟೋರಿ ಓದಿ.

ಮಾಧ್ಯಮ ಉದ್ಯಮಿ ಅಮೆರಿಕದ ರೂಪರ್ಟ್ ಮುರ್ಡೋಕ್ ಅವರು ತಮ್ಮ 92ರ ಈ ಇಳಿವಯಸ್ಸಿನಲ್ಲೂ ಮತ್ತೊಂದು ಮದುವೆಗೆ ಸಿದ್ದತೆ ನಡೆಸಿದ್ದು, ರಷ್ಯಾ ಮೂಲದ ಎಲೆನಾ ಜುಕೋವ (67 ವರ್ಷ) ಎಂಬ ಮಹಿಳೆಯನ್ನು ಬರುವ ಜುಲೈನಲ್ಲಿ ಮದುವೆಯಾಗಲಿದ್ದಾರೆ. ಈ ಇಬ್ಬರ ಮದುವೆ ಕ್ಯಾಲಿಪೋರ್ನಿಯಾದ ರೂಪರ್ಟ್ ಅವರ ಫಾರ್ಮ್‌ಹೌಸ್‌ ವೈನ್‌ಯಾರ್ಡ್‌ನಲ್ಲಿ ಅದ್ಧೂರಿಯಾಗಿ ನಡೆಯಲಿದೆ.

ಈಗಾಗಲೇ ರೂಪರ್ಟ್ ಅವರು ನಾಲ್ಕು ಮದುವೆಯಾಗಿದ್ದು, ಒಟ್ಟು ಆರು ಮಕ್ಕಳಿದ್ದಾರೆ. ಕಳೆದ ವರ್ಷಾರಂಭದಲ್ಲಿ ಆನ್ನಾ ಲೆಸ್ಲಿ ಸ್ಮಿತ್ ಎನ್ನುವ ಮಹಿಳೆಯನ್ನು ಅವರು ಮದುವೆಯಾಗಿದ್ದರು. ಆದರೆ, ಕಾರಣಾಂತರಗಳಿಂದ ಆ ಮದುವೆ ಮುರಿದು ಬಿದ್ದಿತ್ತು. ಇದೀಗ 5ನೇ ಮದುವೆಗೆ ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ.

Rupert Murdoch: The tycoon of the media world who is ready for his 5th marriage even at the age of 92

ಹಾಗಾದ್ರೆ ಯಾರು ಈ ರೂಪರ್ಟ್?

ಆಸ್ಟ್ರೇಲಿಯಾ ಮೂಲದ ಅಮೆರಿಕನ್ ಉದ್ಯಮಿಯಾಗಿ ಬೆಳೆದಿರುವ ರೂಪರ್ಟ್ ಅವರು ಸುಮಾರು ₹ 2.50 ಲಕ್ಷ ಕೋಟಿ ಆಸ್ತಿಯ ಮಾಲೀಕ. ದಿ ವಾಲ್ ಸ್ಟ್ರೀಟ್ ಜರ್ನಲ್, ಫಾಕ್ಸ್ ನ್ಯೂಸ್ ಅಂತಹ ಜಾಗತಿಕ ಮಾಧ್ಯಮ ಕಂಪನಿಗಳ ಒಡೆತನ ಪ್ರಮುಖವಾಗಿ ಹೊಂದಿದ್ದಾರೆ.

ಸದ್ಯ ಉದ್ಯಮ ಜಗತ್ತಿಗೆ ವಿದಾಯ ಹೇಳಿರುವ ಅವರು ತಮ್ಮ ಹಿರಿಯ ಮಗ ಲಾಚ್‌’ಲಾನ್ ಅವರಿಗೆ ಹೊಣೆಗಾರಿಕೆ ನೀಡಿದ್ದಾರೆ.

You might also like
Leave A Reply

Your email address will not be published.