ರಾಹುಲ್ ಗಾಂಧಿಗೆ ವಯನಾಡೇ ಗತಿಯಾಯ್ತಾ ? – ಅಲ್ಲಿಂದಲೂ ಗಂಟು-ಮೂಟೆ ಕಟ್ತಾರಾ ಕಾಂಗ್ರೆಸ್‌ ಯುವರಾಜ?

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಚುನಾವಣಾ ರಂಗ ಕಾವೇರುತ್ತಿದೆ. ಕೇವಲ ಒಂದು ತಿಂಗಳು ನಡುವೆ ಇರುವಂತೆಯೇ, ಬಿಜೆಪಿಗಿಂತ ಕಾಂಗ್ರೆಸ್ ಪಾಳಯದಲ್ಲಿ ತಿಕ್ಕಾಟ-ತಿಣುಕಾಟ ದಿನೇ ದಿನೇ ಹೆಚ್ಚಾಗುತ್ತಿದೆ. ಈ ನಡುವೆ ಆ ಕ್ಷೇತ್ರ ಈ ಕ್ಷೇತ್ರ ಎಂದು ಗೊಂದಲ ಹುಟ್ಟಿಸುತ್ತಿದ್ದ ಕಾಂಗ್ರೆಸ್‌ನ ಯುವ ನಾಯಕನೆಂದು ಗುರುತಿಸಿಕೊಂಡಿರುವ ಅಭ್ಯರ್ಥಿ ಕಳೆದ ಬಾರಿಯ ಕ್ಷೇತ್ರವನ್ನೇ ಆಯ್ದುಕೊಂಡಂತಿದೆ.

ತನ್ನ ಕಳೆದ ಬಾರಿಯ ಕ್ಷೇತ್ರಕ್ಕೆ ಮತ್ತೆ ಸ್ಪರ್ಧಿಸಲಿರುವ ವ್ಯಕ್ತಿ ಬೇರಾರೂ ಅಲ್ಲ. ಕಾಂಗ್ರೆಸ್ಸಿನ ನಾಯಕ ರಾಹುಲ್ ಗಾಂಧಿ. ಕೇರಳದ ವಯನಾಡಿನಲ್ಲಿ ಸ್ಪರ್ಧಿಸಿ ಕಳೆದ ಬಾರಿ ಜಯಭೇರಿ ಬಾರಿಸಿದ್ದ ರಾಹುಲ್, ಈ ಬಾರಿ ಬೇರೆ ಕ್ಷೇತ್ರದಲ್ಲಿ ನಿಲ್ಲುವ ಇಚ್ಛೆ ಹೊಂದಿದ್ದರೂ ಕೂಡ, ಕೊನೆಗೆ ಯಾವುದೂ ಗತಿಯಿಲ್ಲದಂತೆ ವಯನಾಡಿನಲ್ಲೇ ಕಣಕ್ಕಿಳಿಯುವಂತೆ ಕಾಣುತ್ತಿದೆ.

ಮಲ್ಲಿಕಾರ್ಜುನ್ ಖರ್ಗೆ ನೇತೃತ್ವದ ಕಾಂಗ್ರೆಸ್ ತನ್ನ ಲೋಕಸಭಾ ಚುನಾವಣಾ ಅಭ್ಯರ್ಥಿಗಳ‌ ಮೊದಲ ಲಿಸ್ಟ್ ಬಿಡುಗಡೆ ಮಾಡಿದ್ದು, ಬಿಡುಗಡೆಯಾದ 39 ಅಭ್ಯರ್ಥಿಗಳ ಪಟ್ಟಿಯಲ್ಲಿ ಕೇರಳದ ಶಶಿ ತರೂರ್, ಕೆ.ಸಿ.ವೇಣುಗೋಪಾಲ್, ಛತ್ತೀಸ್‍ಘಡ್ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಾಘೆಲ್ ಕೂಡ ಸ್ಥಾನ‌ ಪಡೆದಿದ್ದಾರೆ.

ನಾವು ಗೆಲುವಿನ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡಿದ್ದೇವೆ. ಹೀಗೆಂದವರು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್.

ನಾವು ಗೆಲುವಿನ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡಿದ್ದೇವೆ. ಹೀಗೆಂದವರು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್.

“ನಾವು ಗೆಲ್ಲುವ ಸಾಮರ್ಥ್ಯವನ್ನು ಗುರಿಯಾಗಿಟ್ಟುಕೊಂಡು ಪಟ್ಟಿಯನ್ನು ಮತ್ತು ಕ್ಷೇತ್ರಗಳನ್ನು ಆಯ್ಕೆ ಮಾಡಿದ್ದೇವೆ. ಮಲ್ಲಿಕಾರ್ಜುನ ಖರ್ಗೆಯವರ ನೇತೃತ್ವದ ಕೇಂದ್ರೀಯ ಆಯ್ಕೆ ಸಮಿತಿಯ ನೇತೃತ್ವದಲ್ಲಿ ತಯಾರಾದ ಮೊದಲ ಪಟ್ಟಿ ಇದು. ಮಾರ್ಚ್ 11 ಕ್ಕೆ ಇನ್ನೊಂದು ಸಭೆಯನ್ನು ನಡೆಸಲಿದ್ದೇವೆ” ಎಂದು ವೇಣುಗೋಪಾಲ್ ತಿಳಿಸಿದ್ದಾರೆ.

ಇನ್ನು 39 ಕ್ಷೇತ್ರಗಳಿಗೆ ಘೋಷಿಸಲಾದ ಅಭ್ಯರ್ಥಿಗಳ ಪಟ್ಟಿಯಲ್ಲಿ ಸಾಮಾನ್ಯ ವರ್ಗದಿಂದ 24 ಅಭ್ಯರ್ಥಿಗಳು ಹಾಗೂ ಎಸ್.ಸಿ/ಎಸ್‌.ಟಿ/ಓ.ಬಿ.ಸಿ ವರ್ಗಗಳಿಂದ ಒಟ್ಟು 15 ಅಭ್ಯರ್ಥಿಗಳು ಸೇರಿ ಒಟ್ಟು 39 ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆಗೊಳಿಸಿದೆ.

ಈ ಪಟ್ಟಿಯಲ್ಲಿ ಕೇರಳದ 16, ಕರ್ನಾಟಕದ 07, ಛತ್ತೀಸ್‍ಘಡ್ ನಿಂದ 06, ತೆಲಂಗಾಣದಿಂದ 04, ಮೇಘಾಲಯದಿಂದ 02, ನಾಗಾಲ್ಯಾಂಡ್, ಸಿಕ್ಕಿಂ ಮತ್ತು ತ್ರಿಪುರದಿಂದ ತಲಾ 1 ಹಾಗೂ ಲಕ್ಷದ್ವೀಪದಿಂದ ಕೂಡ 1 ಸ್ಥಾನಕ್ಕೆ ಪಟ್ಟಿಯನ್ನು ಘೋಷಿಸಿದೆ. ವಯನಾಡಿನಲ್ಲಿ ಕಾಂಗ್ರೆಸ್ಸಿನ I.N.D.I ಒಕ್ಕೂಟದ ಮಿತ್ರಪಕ್ಷವಾದ ಸಿ.ಪಿ.ಐ, ತನ್ನ ಅಭ್ಯರ್ಥಿ ಹಿರಿಯ ಸಿ.ಪಿ.ಐ ನಾಯಕಿ ಅಣ್ಣಿ ರಾಜ ಅವರನ್ನು ಘೋಷಿಸಿದ ನಂತರ, ಕಾಂಗ್ರೆಸ್ ರಾಹುಲ್‌ ಗಾಂಧಿಯವರನ್ನು ಕಣಕ್ಕಿಳಿಸಿದ್ದು, ಹೊಸ ಗೊಂದಲಗಳಿಗೆ ಎಡೆಮಾಡಿಕೊಟ್ಟಿದೆ.

ಆದರೆ, ಈ ವಿಚಾರವಾಗಿ ಒಂದು ಇಂಟರ್ ವ್ಯೂನಲ್ಲಿ ಪ್ರತಿಕ್ರಿಯಿಸಿದ ಅಣ್ಣಿ ರಾಜ, “ಕಾಂಗ್ರೆಸ್ ಬಿಜೆಪಿಯ ಜೊತೆಗೆ ಸ್ಪರ್ಧೆಗಿಳಿಯುತ್ತದೋ ಅಥವಾ ತನ್ನ ಮಿತ್ರಪಕ್ಷಗಳ ಜೊತೆಗೆ ಸ್ಪರ್ಧೆಗಳಿಯುತ್ತದೆಯೋ ಎನ್ನುವುದನ್ನು ಪಕ್ಷವೇ ನಿರ್ಧರಿಸಬೇಕು” ಎಂದಿದ್ದಾರೆ. ಆದರೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರು ಹೇಳುವಂತೆ, ಬಿಜೆಪಿಯ ಗೆಲುವಿನ ಅವಕಾಶಗಳನ್ನು ಕಡಿಮೆಗೊಳಿಸುವಲ್ಲಿ‌ ಪಕ್ಷ ಪ್ರಯತ್ನಿಸಲಿದೆ ಎಂದಿದ್ದಾರೆ. I.N.D.I ಒಕ್ಕೂಟದ ಈ ಭಿನ್ನಮತ ಹಾಗೂ ಕ್ಷೇತ್ರಗಳ ಆಯ್ಕೆಯ ಗೊಂದಲ, ಬಿಜೆಪಿಯ ಗೆಲುವಿನ ಹಾದಿಗೆ ಇನ್ನಷ್ಟು ಪುಷ್ಟಿ ನೀಡುವಂತೆ ಕಾಣುತ್ತಿರುವುದಂತೂ ಸುಳ್ಳಲ್ಲ.

You might also like
Leave A Reply

Your email address will not be published.