ಮಾಲ್ಡೀವ್ಸ್‌ ಆರ್ಥಿಕತೆಗೆ ದೊಡ್ಡ ಪೆಟ್ಟು ಕೊಟ್ಟ ಭಾರತೀಯರು – ಇಲ್ಲಿದೆ ಸಂಪೂರ್ಣ ವಿವರ

ಕಳೆದ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಮಾಲ್ಡೀವ್ಸ್‌ಗೆ ಭೇಟಿ ನೀಡುವ ಭಾರತೀಯರ ಸಂಖ್ಯೆ ಶೇಕಡಾ 33 ರಷ್ಟು ಕಡಿಮೆಯಾಗಿದೆ ಎಂದು ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವಾಲಯದ ಅಧಿಕೃತ ವೆಬ್‌ಸೈಟ್‌ ಅಧಾಧು ವರದಿ ಮಾಡಿದ್ದು‌ ನವದೆಹಲಿ ಮತ್ತು ಮಾಲೆ ನಡುವಿನ ರಾಜತಾಂತ್ರಿಕ ಬಿಕ್ಕಟ್ಟುಗಳೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.

ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ 2023 ರ ಮಾರ್ಚ್ 4 ರ ವೇಳೆಗೆ 41,054 ಭಾರತೀಯರು ಮಾಲ್ಡೀವ್ಸ್‌ಗೆ ಭೇಟಿ‌ ನೀಡಿದ್ದು, ಈ ವರ್ಷದ ಮಾರ್ಚ್ 2ರ ವೇಳೆಗೆ 27,224 ಎಂದು ದಾಖಲಾಗಿದೆ. ಅಂದರೆ ಸಂಖ್ಯೆಗಳಲ್ಲಿ ಕಳೆದ ಬಾರಿಗಿಂತ ಈ ಬಾರಿ ಸರಿ ಸುಮಾರು 13,380 ಜನ ಕಡಿಮೆಯಾಗಿದೆ.

ಕಳೆದ ವರ್ಷ ಈ ವೇಳೆಗೆ ಭಾರತವು ಮಾಲ್ಡೀವ್ಸ್‌ನ ಪ್ರವಾಸೋದ್ಯಮಕ್ಕೆ ಮಾರುಕಟ್ಟೆ ಪಾಲಿನಲ್ಲಿ ಶೇಕಡಾ 10ರಷ್ಟು ಕೊಡುಗೆ ನೀಡುವ ಮೂಲಕ ಎರಡನೇ ಅತಿದೊಡ್ಡ source of income ಆಗಿತ್ತು. ಆದರೆ ಈ ಬಾರಿ ಶೇಕಡಾ 6 ರಷ್ಟು ಮಾರುಕಟ್ಟೆ ಪಾಲನ್ನು ಹೊಂದುವ ಮೂಲಕ ಆರನೇ ಸ್ಥಾನಕ್ಕೆ ಕುಸಿದಿದೆ.

ಎಲ್ಲವೂ ಆರಂಭವಾಗಿದ್ದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಲಕ್ಷದ್ವೀಪಕ್ಕೆ ಭೇಟಿನೀಡಿ ಎಂದು ಭಾರತೀಯರಿಗೆ ಕರೆಕೊಟ್ಟ ಬಳಿಕ ಮಾಲ್ಡೀವ್ಸ್‌ನ ಮೂವರು ಮಂತ್ರಿಗಳು ಪ್ರಧಾನಮಂತ್ರಿ ಮತ್ತು ಭಾರತದ ಬಗ್ಗೆ ಅವಹೇಳನಕಾರಿ ಫೋಸ್ಟ್ ಮಾಡುವ ಮೂಲಕ ಅಮಾನತುಗೊಂಡಿದ್ದರು.‌

Indians who gave a big blow to Maldives economy - here is the complete details

ಅದಾದ ತಕ್ಷಣವೇ ಬಾಯ್ಕಾಟ್ ಮಾಲ್ಡೀವ್ಸ್ ಟ್ರೆಂಡ್ ಶುರುವಾಗಿ ಅದಕ್ಕೆ ಬಾಲಿವುಡ್, ಸ್ಪೋರ್ಟ್ಸ್ ತಾರಾಗಣವೆಲ್ಲಾ ಬೆಂಬಲಿಸುವ ಮೂಲಕ ಇದರ ಸ್ವರೂಪ ತೀವ್ರಗತಿಯಲ್ಲಿ ಸಾಗಿದ ಪರಿಣಾಮ ಈ ಬಾರಿ ಮಾಲ್ಡೀವ್ಸ್ ಅದರ ತಪ್ಪಿನ ರುಚಿ‌ನೋಡುವಂತಾಗಿದೆ. 2021 ರಿಂದ 2023 ರ ತನಕವೂ ವರ್ಷದ ಕೊನೆಯಲ್ಲಿ ಅತೀ ಹೆಚ್ಚು ಪ್ರವಾಸಿಗರನ್ನು ಕಳಿಸಿದ ದೇಶವಾಗಿ ಭಾರತವಿತ್ತು. ಆದರೆ ಈಗ 2024 ರಲ್ಲಿ ಸದ್ಯದ ಮಟ್ಟಿಗೆ ಅತಿಹೆಚ್ಚು ಚೀನಾದ ಪ್ರವಾಸಿಗರು ಭೇಟಿ ನೀಡಿದ್ದಾರೆ ಎನ್ನಲಾಗುತ್ತದೆ.

You might also like
Leave A Reply

Your email address will not be published.