ಜಪ ಮಾಲೆಯ ಮಹತ್ವವೇನು?

ಸಾಕಷ್ಟು ಜನರು ಜಪಮಾಲೆಯ ಪ್ರಯೋಜನ, ಮಹತ್ವವನ್ನು ಅರಿಯದೆಯೇ ಜಪಮಾಲೆಯನ್ನು ಹಿಡಿದು ಮಂತ್ರ ಪಠಿಸುತ್ತಾರೆ. ಸಾಮಾನ್ಯವಾಗಿ ಧಾರ್ಮಿಕ ಭಾವದಿಂದ ಜಪಮಾಲೆಯನ್ನು ಹಿಡಿದು ಮಂತ್ರ ಪಠಿಸುವುದು ಹೆಚ್ಚು. ಇದರ ಹೊರತಾಗಿ ಆರೋಗ್ಯಕ್ಕೆ ಸಂಬಂಧಿಸಿದ ಪ್ರಯೋಜನಗಳೂ ಕೂಡ ಇದೆ. ಹಾಗಾದರೆ, ಯಾವೆಲ್ಲಾ ರೀತಿಯ ಜಪಮಾಲೆಯನ್ನು ಧರಿಸಿದರೆ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ..? ಇಲ್ಲಿದೆ ಜಪಮಾಲೆಯ ಪ್ರಯೋಜನ.

1. ತುಳಸಿ ಜಪಮಾಲೆ:

•ತುಳಸಿ ಹಾರವನ್ನು ಕುತ್ತಿಗೆಯಲ್ಲಿ ಧರಿಸಿ ಆಹಾರವನ್ನು ಸೇವಿಸುವುದರಿಂದ ಅಶ್ವಮೇಧ ಯಾಗದ ಫಲ ದೊರೆಯುತ್ತದೆ ಎಂದು ಪದ್ಮಪುರಾಣದಲ್ಲಿ ಉಲ್ಲೇಖಿಸಲಾಗಿದೆ.
• ಕುತ್ತಿಗೆಯಲ್ಲಿ ತುಳಸಿ ಹಾರವನ್ನು ಧರಿಸಿ ಸ್ನಾನ ಮಾಡುವುದರಿಂದ ಎಲ್ಲಾ ತೀರ್ಥಯಾತ್ರೆಗಳಲ್ಲಿ ಸ್ನಾನ ಮಾಡಿದ ಫಲ ಆ ವ್ಯಕ್ತಿಯದ್ದಾಗುತ್ತದೆ. ವ್ಯಕ್ತಿಯ ಮನಸ್ಸಿನಲ್ಲಿ ಸಾವಿನ ಸಂದರ್ಭದಲ್ಲಿ ಆ ವ್ಯಕ್ತಿಯು ತುಳಸಿ ಹಾರವನ್ನು ಕುತ್ತಿಗೆಯಲ್ಲಿ ಧರಿಸಿದ್ದರೆ ಆತನಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ.
• ಇನ್ನೂ ಶಾಂತ ಭಾವನೆಯನ್ನು ಸೃಷ್ಟಿಸುವ ಸಾಮರ್ಥ್ಯ ತುಳಸಿ ಜಪಮಾಲೆಯಲ್ಲಿ ಹೊಂದಿದೆ.
• ಮನೆಯಲ್ಲಿ ತುಳಸಿ ಜಪಮಾಲೆಯನ್ನು ಹಿಡಿದು ಮಂತ್ರ ಪಠಿಸಬಾರದು.

ತುಳಸಿ ಜಪಮಾಲೆ

2. ರುದ್ರಾಕ್ಷಿ ಮಾಲೆ:

• ರುದ್ರಾಕ್ಷಿ ಮಾಲೆಯನ್ನು ಕೈಯಲ್ಲಿ ಹಿಡಿದು ಶಿವನನ್ನು ಆರಾಧಿಸುವುದು ಶಿವಾರಾಧನೆಯ ವಿಧಾನವಾಗಿದೆ. ಇದರಿಂದ ರುದ್ರಾಕ್ಷ ಧಾರ ಪರಶಿವನು ಪ್ರಸನ್ನನಾಗುತ್ತಾನೆ.
• ರುದ್ರಾಕ್ಷಿಯನ್ನು ಶಿವನ ಒಂದು ಅಂಶವೆಂದು ಹಿಂದೂ ಧರ್ಮದಲ್ಲಿ ಪರಿಗಣಿಸಲಾಗುತ್ತದೆ. ಅಷ್ಟು ಮಾತ್ರವಲ್ಲ, ರುದ್ರಾಕ್ಷಿಯ ಸೃಷ್ಟಿಗೂ ಕೂಡ ಆ ಪರಶಿವನೇ ಕಾರಣೀಭೂತನೆಂದು ಹೇಳಲಾಗುತ್ತದೆ. ಆದ್ದರಿಂದ ಶಿವನಿಗೆ ರುದ್ರಾಕ್ಷಿ ಹಾರವನ್ನು ಹಾಕಿ ಹೆಚ್ಚಾಗಿ ಪೂಜಿಸಲಾಗುತ್ತದೆ.

ರುದ್ರಾಕ್ಷಿ ಮಾಲೆ

3. ಕೆಂಪು ಚಂದನ ಮತ್ತು ಕಮಲ ಬೀಜದ ಮಾಲೆ:
• ಕೆಂಪು ಚಂದನದ ಹಾರವನ್ನು ಮತ್ತು ಕಮಲ ಬೀಜದ ಮಾಲೆಯನ್ನು ಲಕ್ಷ್ಮಿ ಪೂಜೆ ಮತ್ತು ದುರ್ಗಾ ಪೂಜೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ.
• ಲಕ್ಷ್ಮಿ ದೇವಿಯನ್ನು ಹಾಗೂ ದುರ್ಗಾ ದೇವಿಯನ್ನು ಒಲಿಸಿಕೊಳ್ಳಲು ಕೆಂಪು ಚಂದನದ ಹಾರವನ್ನು ಬಳಸಬೇಕು.
• ಕೆಂಪು ಚಂದನದ ಮಾಲೆಯಿಂದ ಮತ್ತು ಕಮಲ ಬೀಜದ ಮಾಲೆಯಿಂದ ದುರ್ಗೆಯನ್ನು ಮತ್ತು ಲಕ್ಷ್ಮಿಯನ್ನು ಪೂಜಿಸಿದರೆ ಸಿರಿ, ಸಂಪತ್ತು, ಸಂಪೋಷವು ಮನೆಯಲ್ಲಿ ನೆಲೆಯಾಗುತ್ತದೆ.

ಕೆಂಪು ಚಂದನ ಮತ್ತು ಕಮಲ ಬೀಜದ ಮಾಲೆ

4. ಸ್ಪಟಿಕ ಮಾಲೆ:
• ಸ್ಪಟಿಕ ಮಾಲೆಯನ್ನು ತಾಂತ್ರಿಕ ಜನರು ಹೆಚ್ಚಾಗಿ ಉಪಯೋಗಿಸುತ್ತಾರೆ.
• ಇದನ್ನು ಧರಿಸುವುದರಿಂದ ನಮ್ಮೊಳಗಿನ ಶಕ್ತಿಯನ್ನು ಜಾಗೃತಗೊಳಿಸುತ್ತದೆ.
• ವಿಶೇಷ ಮಂತ್ರ ಅಥವಾ ಸ್ತೋತ್ರದ ಮೂಲಕ ಈ ಮಾಲೆಯನ್ನು ಧರಿಸಿದರೆ ಸಾಕಷ್ಟು ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.
• ಸ್ಪಟಿಕ ಮಾಲೆಯು ಅತ್ಯಂತ ಶಕ್ತಿಯುತ ಮಾಲೆಯಾಗಿದ್ದು, ಈ ಮಾಲೆಯನ್ನು ಲಕ್ಷ್ಮಿದೇವಿಯೆಂದು ಪರಿಗಣಿಸಲಾಗುತ್ತದೆ.
• 108 ಸ್ಪಟಿಕ ಮಣಿಯಿರುವ ಮಾಲೆಯು ಶುಕ್ರವಾರದ ಶುಭ ದಿನವನ್ನು ಪ್ರತಿನಿಧಿಸುತ್ತದೆ.
• ನಮ್ಮ ಸುತ್ತಲಿನ ನಕಾರಾತ್ಮಕ ಶಕ್ತಿಯನ್ನು ದೂರಾಗಿಸಿ, ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.
• ಈ ಮಾಲೆಯನ್ನು ಧರಿಸುವುದರಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು.
• ಈ ಮಾಲೆಯನ್ನು ಧರಿಸಿ ಜಪ ಮಾಡುವುದರಿಂದ ನಮ್ಮ ಏಕಾಗ್ರತೆಯು ಹೆಚ್ಚಾಗುತ್ತದೆ ಹಾಗೂ ಕೋಪ ನಿಯಂತ್ರಣಕ್ಕೆ ಬರುತ್ತದೆ.

ಸ್ಪಟಿಕ ಮಾಲೆ

You might also like
Leave A Reply

Your email address will not be published.