ರಾಹುಲ್ ಗಾಂಧಿಯ ಇಂಡಿ ಒಕ್ಕೂಟಕ್ಕೆ ಮತ್ತೊಮ್ಮೆ ಮುಖಭಂಗ

2024ರ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ರಾಜಕೀಯ ಚಟುವಟಿಕೆ ಗರಿಗೆದರಿದೆ. ಅಧಿಕಾರದ ಗದ್ದುಗೆಗೆ ಯಾರು ಏರುತ್ತಾರೆ ಎಂಬ ಕುತೂಹಲವು ಮೂಡಿದೆ. ಈ ನಡುವೆ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ನಿರ್ಗಮನದಿಂದ ತೀವ್ರ ಹಿನ್ನಡೆಯಾಗಿದ್ದ ಇಂಡಿಯಾ ಒಕ್ಕೂಟಕ್ಕೆ ಮತ್ತೊಮ್ಮೆ ಮುಖಭಂಗವಾಗಿದೆ.

ಒಕ್ಕೂಟದ ಮತ್ತೊಂದು ಪ್ರಮುಖ ಪಕ್ಷವಾದ ಆರ್.ಎಲ್.ಡಿ (Rashtriya Lok Dal) ಬಿಜೆಪಿ ನೇತೃತ್ವದ ಎನ್.ಡಿ.ಎ (National Democratic Alliance) ಒಕ್ಕೂಟ ಸೇರುವ ಸುಳಿವು ನೀಡಿದ್ದು ಲೋಕಸಭೆ ಚುನಾವಣೆಗೆ ಬಿಜೆಪಿ ಜೊತೆಗೆ ಉತ್ತರ ಪ್ರದೇಶದಲ್ಲಿ ಎರಡು ಸ್ಥಾನಗಳ ಒಪ್ಪಂದ ಮಾಡಿಕೊಂಡಿದೆ.

ಮೂಲಗಳ ಪ್ರಕಾರ, ಮೈತ್ರಿ ಮಾತುಕತೆ ಅಂತಿಮವಾಗಿದ್ದು ಲೋಕಸಭಾ ಸ್ಥಾನಗಳಾದ ಬಾಗ್ಪತ್ (Bhagpat) ಮತ್ತು ಬಿಜ್ನೋರ್ (Bijnor) ಅನ್ನು ಬಿಜೆಪಿ ಬಿಟ್ಟುಕೊಟ್ಟಿದೆ. ಜೊತೆಗೆ ಒಂದು ರಾಜ್ಯಸಭಾ ಸ್ಥಾನದ ಭರವಸೆಯನ್ನೂ ನೀಡಲಾಗಿದೆ ಎಂದು ತಿಳಿದು ಬಂದಿದೆ. ಇನ್ನೆರಡು ಮೂರು ದಿನಗಳಲ್ಲಿ ಮೈತ್ರಿಯ ಅಧಿಕೃತ ಘೋಷಣೆ ಹೊರಬೀಳಲಿದೆ.

Another setback for Rahul Gandhi's INDI coalition

ಪಶ್ಚಿಮ ಉತ್ತರ ಪ್ರದೇಶದಲ್ಲಿ ಜಯಂತ್ ಚೌಧರಿ ಅವರ ಆರ್.ಎಲ್.ಡಿ ಪ್ರಭಾವ ಹೊಂದಿದೆ. ಈ ಮೈತ್ರಿಯಿಂದ ಪ್ರಭಾವಿ ಜಾಟ್ ಸಮುದಾಯದ ನೆಲೆಯಾಗಿರುವ ಈ ಪ್ರದೇಶದಲ್ಲಿ ಬಿಜೆಪಿ ಲಾಭಗಳಿಸುವ ಭರವಸೆ ಹೊಂದಿದೆ. 2019 ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ 16 ಸ್ಥಾನಗಳಲ್ಲಿ ಸೋತಿತ್ತು. ಇದರಲ್ಲಿ ಪಶ್ಚಿಮದಲ್ಲಿ ಏಳು ಸ್ಥಾನಗಳನ್ನು ಸೋತಿತ್ತು ಈ ಹಿನ್ನೆಲೆ ಬಿಜೆಪಿ ಈ ಮೈತ್ರಿ ಮಾಡಿಕೊಂಡಿದೆ.

ಉತ್ತರ ಪ್ರದೇಶದ ಇಂಡಿಯಾ ಒಕ್ಕೂಟದ ನಡುವಿನ ಸೀಟು ಹಂಚಿಕೆಯ ಭಿನ್ನಾಭಿಪ್ರಾಯಗಳ ಮಧ್ಯೆ ಈ ಬೆಳವಣಿಗೆ ನಡೆದಿದೆ. ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ನಡುವಿನ ಸೀಟು ಹಂಚಿಕೆ ಮಾತುಕತೆಯಲ್ಲಿ ಯಾವುದೇ ಪ್ರಗತಿಯಾಗಿಲ್ಲ. ಆದಾಗ್ಯೂ, ಅಖಿಲೇಶ್ ಯಾದವ್ ನೇತೃತ್ವದ ಪಕ್ಷವು ಕಾಂಗ್ರೆಸ್ ಹಿಡಿತದ ಉತ್ತರ ಪ್ರದೇಶದ 16 ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಘೋಷಿಸಲು ಹೊರಟಿದೆ. ಜನವರಿಯಲ್ಲಿ ಅಖಿಲೇಶ್ ಯಾದವ್ ಅವರು ಆರ್.ಎಲ್.ಡಿ ಗೆ ಏಳು ಸ್ಥಾನಗಳನ್ನು ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಯಾವ ಕ್ಷೇತ್ರಗಳನ್ನು ಹಂಚಲಾಗುತ್ತದೆ ಎಂಬ ಬಗ್ಗೆ ಸ್ಪಷ್ಟತೆ ಇರಲಿಲ್ಲ.

You might also like
Leave A Reply

Your email address will not be published.