ಬಾಲರಾಮನ ದರ್ಶನ ಪಡೆದ ಬಾಲಿವುಡ್ ಬಿಗ್ ಬಿ

ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅಪ್ರತಿಮ ಚಲನಚಿತ್ರ ನಟರಲ್ಲಿ ಒಬ್ಬರು ಹಾಗೂ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರು ಅಯೋಧ್ಯೆಗೆ ಭೇಟಿ ನೀಡಿ ಬಾಲರಾಮ ದೇವರ ದರ್ಶನ ಪಡೆದಿದ್ದಾರೆ. ಬಿಗ್ ಬಿ ಅಯೋಧ್ಯೆಗೆ ಭೇಟಿ ನೀಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ಅಯೋಧ್ಯೆ ರಾಮಮಂದಿರದಲ್ಲಿ ಪ್ರತಿಷ್ಠಾಪಿತವಾದ ರಾಮಲಲ್ಲಾ ದೇವರ ದರ್ಶನ ಪಡೆಯಲು ಈಗಾಗಲೇ ಸಾವಿರಾರು ಭಕ್ತಾದಿಗಳು ಆಗಮಿಸುತ್ತಿದ್ದಾರೆ. ಇದೀಗ ಅಮಿತಾಭ್ ಬಚ್ಚನ್ ಸಿಐಎಸ್ಎಫ್ ಬಿಗಿ ಭದ್ರತೆಯಲ್ಲಿ ಆಗಮಿಸಿದ್ದ ಅವರು ಗರ್ಭಗುಡಿ ಮುಂಭಾಗದಲ್ಲಿ ನಿಂತು ರಾಮಲಲ್ಲಾನ ದರ್ಶನ ಪಡೆದರು. ರಾಮ ಮಂದಿರದಲ್ಲಿ ಬಿಗ್ ಬಿ ಧ್ಯಾನ ಮಾಡಿ, ವಾಸ್ತುಶಿಲ್ಪವನ್ನು ಕಣ್ತುಂಬಿಕೊಂಡರು.

ಅಂದಹಾಗೆ, ಬಿಗ್ ಬಿ ಅವರು ಅಯೋಧ್ಯೆಯಲ್ಲಿ 14.50 ಕೋಟಿ ರೂಪಾಯಿ ಮೌಲ್ಯದ ಭೂಮಿಯನ್ನು ಖರೀದಿಸಿದ್ದಾರೆ.

You might also like
Leave A Reply

Your email address will not be published.