Maldives Row : ಮಾಲ್ಡೀವ್ಸ್ʼನಲ್ಲಿನ ಹಿಂದೂಗಳು ಸಂಖ್ಯೆಯೆಷ್ಟು? ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಎಷ್ಟು ಗೊತ್ತೇ? – ಇಲ್ಲಿದೆ ಸಂಪೂರ್ಣ ವರದಿ

ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi), ಭಾರತ (India) ಹಾಗೂ ಭಾರತೀಯರನ್ನು ನಿಂದಿಸುವ ಮೂಲಕ ಮಾಲ್ಡೀವ್ಸ್ (Maldives) ತನ್ನನ್ನು ತಾನು ಬಲಿಷ್ಟ, ಪ್ರವಾಸಿಗರ ಏಕೈಕ ಸ್ವರ್ಗ ಎನ್ನುವ ಭ್ರಮಾ ಲೋಕದಲ್ಲಿ ಸುತ್ತುತ್ತಿದೆ. ಅಷ್ಟಕ್ಕೂ, ಮಾಲ್ಡೀವ್ಸ್ ಯಾವ ದೇಶದ ಪ್ರವಾಸಿಗರ ಬಿಡಿಗಾಸಿನಿಂದ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಿದೆ. ಆ ದೇಶದಲ್ಲಿ ಯಾವ ಧರ್ಮದವರು ಎಷ್ಟಿದ್ದಾರೆ ಎನ್ನುವ ಮಾಹಿತಿಯನ್ನು ನೋಡೋಣ.

ಮಾಲ್ಡೀವ್ಸ್ ದೇಶದ ಒಟ್ಟು ವಿಸ್ತೀರ್ಣ 90 ಸಾವಿರ ಚದರ ಕಿ.ಮೀಗಳಾಗಿದ್ದು, ಮಾಲೆ ಇದರ ರಾಜಧಾನಿಯಾಗಿದೆ. 1,200 ಹವಳದ ದ್ವೀಪಗಳಲ್ಲಿ ಹರಡಿಕೊಂಡಿದೆ.

ಮಾಲ್ಡೀವ್ಸ್ ದೇಶದ ಜನಸಂಖ್ಯೆ :

ಮಾಲ್ಡೀವ್ಸ್ʼನಲ್ಲಿ ಒಟ್ಟು 575,285 ಜನಸಂಖ್ಯೆಯಿದ್ದು, 2,89,859 ಪುರುಷರು ಹಾಗೂ 2,85,426 ಜನ ಮಹಿಳೆಯರು ಇದ್ದಾರೆ. ಇದರಲ್ಲಿ ಶೇ.98.69 ರಷ್ಟು ಮುಸ್ಲಿಂ ಧರ್ಮದವರು, ಶೇ.0.65 ರಷ್ಟು ಬೌದ್ಧರು, ಶೇ.0.29 ರಷ್ಟು ಕ್ರಿಶ್ಚಿಯನ್ನರು, ಶೇ.0.29 ರಷ್ಟು ಹಿಂದೂಗಳು ಇದ್ದಾರೆ.

ಮಾಲ್ಡೀವ್ಸ್ʼಗೆ ಭೇಟಿ ನೀಡುವ ಪ್ರವಾಸಿಗರು :

ದ್ವೀಪ ರಾಷ್ಟ್ರ ಮಾಲ್ಡೀವ್ಸ್ʼಗೆ 2023ನೇ ಸಾಲಿನಲ್ಲಿ ಬರೋಬ್ಬರಿ 17,57,939 ಜನ ಪ್ರವಾಸಿಗರು ಬೇಟಿ ನೀಡಿದ್ದಾರೆ. 2022ನೇ ಸಾಲಿನಲ್ಲಿ 15 ಲಕ್ಷ ಜನ ಭೇಟಿ ನೀಡಿದ್ದರು.

ವಿವಿಧ ದೇಶಗಳ ಪ್ರವಾಸಿಗರ ಸಂಖ್ಯೆ (2023ರ ಮಾಹಿತಿ) :

ಭಾರತ : 2,09,198
ರಷ್ಯಾ : 2,09,146
ಚೀನಾ : 1,87,118
ಇಂಗ್ಲೆಂಡ್ : 1,55,730
ಜರ್ಮನ್ : 1,35,090
ಇಟಲಿ : 1,18,412
ಅಮೆರಿಕಾ : 74,575
ಫ್ರಾನ್ಸ್ : 49,199
ಸ್ಪೇನ್ : 40,462
ಸ್ವಿಟ್ಜರ್ಲ್ಯಾಂಡ್ : 37,260

ಮಾಲ್ಡೀವ್ಸ್ ಮತ್ತು ಭಾರತದ ನಡುವೆ ಪ್ರತಿದಿನ ಸರಾಸರಿ 700 ಜನರು ವಿಮಾನ ಪ್ರಯಾಣ ಮಾಡಿದ್ದಾರೆ.

ಮಾಲ್ಡೀವ್ಸ್ ದೇಶವು ಭಾರತದ ಮೇಲೆ ಅವಲಂಬಿತವಾಗಿದೆ. ಚೀನಾದ ಹಡಗುತಾಣವಾಗುವ ನಿಟ್ಟಿನಲ್ಲಿ ಪ್ರಸ್ತುತ ಮೊಹಮ್ಮದ್ ನಶೀದ್ ನೇತೃತ್ವದ ಮಾಲ್ಡೀವ್ಸ್ ಸರ್ಕಾರ ಭಾರತಕ್ಕೆ ವಿರೋಧವಾಗಿ ನಿಂತಿದೆ. ಇದೇ ಪಕ್ಷವು ಮಾಲ್ಡೀವ್ಸ್ʼನಲ್ಲಿ ಚುನಾವಣಾ ಪೂರ್ವದಲ್ಲಿ ಮಾಲ್ಡೀವ್ಸ್ʼನಲ್ಲಿ ಇಂಡಿಯಾ ಔಟ್ (India Out) ಎನ್ನುವ ಅಭಿಯಾನ ಹಮ್ಮಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರಧಾನಿ ಮೋದಿ ಹಾಗೂ ಭಾರತದ ಬಗ್ಗೆ ಅವಹೇನಕಾರಿಯಾಗಿ ಮಾತನಾಡಿದ್ದ ಅಲ್ಲಿನ 3 ಜನ ಸಚಿವರನ್ನು ಅಮಾನತು ಮಾಡಲಾಗಿದೆ. ಭಾರತೀಯರು ಸಾಮಾಜಿಕ ಜಾಲತಾಣಗಳಲ್ಲಿ ʼಬಾಯ್ಕಾಟ್ ಮಾಲ್ಡೀವ್ಸ್ʼ (Boycott Maldives) ಅಭಿಯಾನ ಹಮ್ಮಿಕೊಳ್ಳುವ ಮೂಲಕ ಮಾಲ್ಡೀವ್ಸ್ ಸರ್ಕಾರಕ್ಕೆ ತಮ್ಮ ಪ್ರತಿರೋಧವನ್ನು ತೋರ್ಪಡಿಸುತ್ತಿದ್ದಾರೆ. ಈ ನಡುವೆ ಭಾರತೀಯ ವಿದೇಶಾಂಗ ಇಲಾಖೆಯು ಮಾಲ್ಡೀವ್ಸ್ʼನ ಪ್ರತಿನಿಧಿಯನ್ನು ಕರೆಸಿ ತನ್ನ ಪ್ರತಿರೋಧವನ್ನು ಪ್ರದರ್ಶಿಸಿದೆ.

You might also like
Leave A Reply

Your email address will not be published.